ದಲಿತ ಸಂಘಟನೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗೆ — ಸಂಘಟನಾಕಾರರು ಆಕ್ರೋಶ.
ಇಂಡಿ ಆಗಷ್ಟ.6

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಡಿ ಪಟ್ಟಣದದಿನಾಂಕ 04/08/2023 ರಂದು ಇಂಡಿ ಉಪ ವಿಭಾಗ ಅಧಿಕಾರಿಗಳನೇತೃತ್ವದಲ್ಲಿ ಸ್ವತಂತ್ರ ದಿನಾಚರಣೆ ಪೂರ್ವಭಾವಿ ಸಭೆ ನಡೆದಾಗ ಆ ಸಭೆಯಲ್ಲಿ ಉಪಸ್ಥಿತಿ ಇರುವ ಇಂಡಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು B. J, ಇಂಡಿಯವರು ಮಾತನಾಡಿ ದಲಿತ ಸಂಘಟನೆಗಳು ಮತ್ತು ಮತ್ತು ದಲಿತರು ಸುಲಿಗೆ ಮಾಡುವವರು ಅಂತಾ ಅತೀ ಕೀಳಮಟ್ಟದಿಂದ ಮಾತಾಡಿ ದಲಿತರನ್ನು ಅವಮಾನ ಮಾಡಿದರು.ಆದ ಕಾರಣ ವಿವಿಧ ದಲಿತ ಸಂಘಟನೆಗಳು ಮತ್ತು ದಲಿತರನ್ನ ಅತೀ ಕೀಳಮಟ್ಟದಿಂದ ಕಾಣುವ ಇಂತಹ ನಾಲಾಯಕ್ ಅಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆಯಲ್ಲಿ ಇರುವುದೇ ನಮ್ಮ ದುರಾದೃಷ್ಟಕರ ಸಂಗತಿ ಮೇಲಾಧಿಕಾರಿಗಳು ಇಂತಹ ಅಸಭ್ಯ ವರ್ತನೆಯ ಅಧಿಕಾರಿಗಳ ಮೇಲೆSC/ST — ACT ಅಡಿಯಲ್ಲಿ ಕೇಸ್ ದಾಖಲಿಸಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಈ ಇಲಾಖೆಯಿಂದ ತೆಗೆದು ಹಾಕಬೇಕುಒಂದು ವೇಳೆ ಇವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಹೋದರೆ ವಿಜಯಪುರ ಜಿಲ್ಲಾ ಅಧಿಕಾರಿಗಳ ಕಚೇರಿ ಮುಂದೆ ಅರೆಬೆತ್ತಲೆ ಧರಣಿ ಸತ್ಯಾಗ್ರಹಮಾಡಲಾಗುವದು ಎಂದುರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ (ಅ) ದ ತಾಲೂಕು ಅಧ್ಯಕ್ಷರಾದ ಚಂದ್ರಶೇಖರ್ ಮೇಲಿನಮನಿಯವರು ಹೇಳಿದ್ದಾರೆ.
ತಾಲೂಕ ವರದಿಗಾರರು: ಶಿವಪ್ಪ.ಬಿ.ಹರಿಜನ.ಇಂಡಿ