ಸಮಾಜ ಸೇವೆ ಪ್ರಶಸ್ತಿಗೆ ಡಾಕ್ಟರ್ – ಬಾಬು.ಕೆ ಮಾದರ (ಮುರನಾಳ).
ಬಾಗಲಕೋಟೆ ಜ.27

ಏಶಿಯಾ ಇಂಟರ್ ನ್ಯಾಷನಲ್ ಕಲ್ಬರಲ್ ರಿಸರ್ಚ್ ಯುನಿವರ್ಸಿಟಿ ವತಿಯಿಂದ ದಿನಾಂಕ :-25/1/2025 ರಿಂದ ಶನಿವಾರ ಹೊಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜ ಸೇವೆ ಪ್ರಶಸ್ತಿಗೆ ಡಾ. ಬಾಬು ಕೆ ಮಾದರ ಮುರನಾಳ ಹಲವಾರು ಸಂಘಟನೆಯ ಮೂಲಕ ಡಾ, ಬಿ.ಆರ್ ಅಂಬೇಡ್ಕರ್ ಸಂಘಟನೆ ವತಿಯಿಂದ ಗುರುತಿಸಿ ಕೊಂಡು ಸಮಾಜ ಸೇವೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಬಾಗಲಕೋಟೆಯ ಡಾ, ಬಾಬು.ಕೆ ಮಾದರ ಅವರು ಹಲವಾರು ವರ್ಷಗಳಿಂದ ಸಮಾಜ ಸೇವೆ ಸಾಧನೆ ಮಾಡುತ್ತಿದ್ದು, ಇಂದು ಅವರಿಗೆ ಪ್ರಶಸ್ತಿ ಲಭಿಸಿರುವುದು ಶ್ಲಾಘನೀಯ. ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಬಾಗಲಕೋಟೆ ಜಿಲ್ಲಾ ಮುರುನಾಳ್ ಗ್ರಾಮದವರಾದ ಶ್ರೀಯುತ ಬಾಬು.ಕೆ ಮಾದರ ಅವರಿಗೆ ಗೌರವ ಡಾಕ್ಟರ್ ಪದವಿ ಸತ್ಕಾರ ಪ್ರತಿಷ್ಠತ್ಮಾಕ ಸಂಸ್ಥೆಯಾದ ಏಶಿಯಾ ಇಂಟರ್‌ನ್ಯಾಷನಲ್ ಕಲ್ಬರಲ್ ಅಕಾಡೆಮಿಯಿಂದ ಬಾಗಲಕೋಟೆ ಜಿಲ್ಲೆಯವರು ಶ್ರೀಯುತ ಬಾಬು.ಕೆ ಮಾದರ ಮುರನಾಳ ಗ್ರಾಮದವರು ಅವರಿಗೆ ಗೌರವ ಡಾಕ್ಟರ್ ಪದವಿ ನೀಡಿದರು. ಅವರು ಸಮಾಜ ಸೇವೆ ಮತ್ತು ಜಿಲ್ಲೆಯ ಜನ ಸೇವೆ ಪರಿಗಣಿಸಿ ಈ ಗೌರವ ಡಾಕ್ಟರ್ ಪದವಿ ನೀಡಲಾಗಿದೆ.

ಅವರು ತಮ್ಮ ಸ್ವಂತ ಖರ್ಚಿನಲ್ಲಿ ಸಾರ್ವಜನಕರಿಗೆ ಸಮಸ್ಯೆಗಳನ್ನು ಪರಿಹರಿಸಿ ಎಷ್ಟೋ ಬಡ ಮಕ್ಕಳ ಸರಕಾರಿ ಹಾಸ್ಟೇಲ್ ಸೌಲಭ್ಯ ಶಾಲೆ ಕಾಲೇಜ್ ಸೌಲಭ್ಯಗಳನ್ನು ಗ್ರಾಮದಲ್ಲಿ ಜನರ ಸಮಗ್ರ ಸೇವೆ ಮಾಡಿ ಗ್ರಾಮದಲ್ಲಿ ಮತ್ತು ಜಿಲ್ಲೆಯಲ್ಲಿ ಮನೆ ಮಾತ ಆಗಿದ್ದಾರೆ. ಈ ಸೇವೆಯನ್ನು ಪರಿಗಣಿಸಿದ ಏಶಿಯಾ ಇಂಟರ್ ನ್ಯಾಷನಲ್ ಕಲ್ಬರಲ್ ಅಕಾಡಮೆ ಅವರು ಗೌರವ ಡಾಕ್ಟರ್ ಪದವಿಯನ್ನು ಹೊಸೂರು ತಮಿಳುನಾಡು ಕ್ಲಾಸ್ಪ ಹೋಟಲ್ ಸಭಾಂಗಣದಲ್ಲಿ ಪ್ರಮುಖ ಗಣ್ಯರೊಂದಿಗೆ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರು ಮುಂತಾದವರು ಹಾಜರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ