ದಲಿತರ ಮೇಲೆ ಮಾರಣಾಂತಿಕ ಹಲ್ಲೆ ದೌರ್ಜನ್ಯ ಖಂಡಿಸಿ ಕರ್ನಾಟಕ ದಲಿತ ವಿಮೋಚನಾ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ಮೂಲಕ ತಹಶೀಲ್ದಾರ ಮುಖಾಂತರ ಸಿ.ಎಂ.ರವರಿಗೆ ಮನವಿ.
ಹುಬ್ಬಳ್ಳಿ ಆಗಷ್ಟ. 10

ಚಿತ್ರದುರ್ಗ ಜಿಲ್ಲೆಯ ಹಿರಿಯೂರ ತಾಲೂಕಿನ ಐಮಂಗಲ ಹೊಬಳಿಯ ಎಮ್.ಡಿ.ಕೋಟೆ ಅಡವಿರಾಮಜೋಗಿಹಳ್ಳಿ ಎಂಬ ಗ್ರಾಮದಲ್ಲಿ ಕುರಬ ಮತ್ತು ಒಕ್ಕಲಿಗ ಸಮುದಾಯದ ಸರ್ವಣೀಯರು ದಲಿತ ಕಾಲೋನಿಗೆ ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ|| ಬಿ.ಆರ್.ಅಂಬೇಡ್ಕರ ರವರ ನಾಮಫಲಕವನ್ನು ಹಾಕ್ಕಿದ್ದಕ್ಕೆ ಸಹಿಸಿಕೊಳ್ಳದ ಮನುವಾದಿಗಳು, ಜಾತಿವಾದಿಗಳು, ದಲಿತರ ಮೇಲೆ ತಮ್ಮ ಕ್ರೌರ್ಯ ತೋರಿ ದಲಿತ ಕೇರಿಗೆ ನುಗ್ಗಿ ಬಡಿಗೆ ಮತ್ತು ಮಾರಕಾಸ್ತ್ರಗಳಿಂದ ಮಾರಣಾಂತಿ ಹಲ್ಲೆ ಮಾಡಿ 20ಕ್ಕೂ ಹೆಚ್ಚು ಜನ ಮಹಿಳೆರು 6 ಜನ ಯುವಕರನ್ನು ಗಾಯಗೊಳಿಸಿ ಜೀವ ಹೋಗುವ ಹಾಗೆ ಹೊಡೆದಿದ್ದಾರೆ. ಇಷ್ಟೆಲ್ಲಾ ಆದರೂ ಕೂಡಾ ನಿಮ್ಮನ್ನು ಇಷ್ಟಕ್ಕೆ ಸುಮ್ಮನೆ ಬಿಡಲ್ಲಾ ನಿಮ್ಮನು ಊರು ಬಿಡುಸುತ್ತೇವೆ.
ಎಂದು ಜೀವ ಬೆದರಿಕೆ ಒಡ್ಡಿದ್ದಾರೆ. ರಾಜ್ಯದಲ್ಲಿ ಒಂದಾಲ್ಲಾ ಒಂದು ರೀತಿಯಲ್ಲಿ ದಲಿತರ ಮೇಲೆ ಈ ರೀತಿ ದೌರ್ಜನ್ಯ ದಬ್ಬಾಳಿಕೆ, ಅಸ್ಪೃಶ್ಯತೆ, ಅನ್ಯಾಯಗಳು ನಡೆಯುತ್ತಲ್ಲೆ ಇವೆ. ಯಾವ ಸರಕಾರ ಬಂದರೂ ಕೂಡಾ ದಲಿತರಿಗೆ ರಕ್ಷಣೆ ಇಲ್ಲದಂತಾ ದೇಶ ನಮ್ಮದೂ? ಸಂವಿಧಾನ ಇಷ್ಟೊಂದು ಪ್ರಬಲವಾಗಿದ್ದರೂ ದಲಿತರಿಗೆ ರಕ್ಷಣೆ ಇಲ್ಲಾ ರಕ್ಷಿಸುವ ಮನಃಸ್ಥಿತಿ ಅಧಿಕಾರಿಗಳಿಗೆ ಇಲ್ಲಾ ಹಾತಿಳುವಳಿಕೆ ನೀಡದ ಕಾರಣ ಇಂತಹ ಘಟನೆಗಳಿಗೆ ಕಾರಣವಾಗುತ್ತೆ ಆದ್ದರಿಂದ ರಾಜ್ಯದಲ್ಲಿ ಪ್ರತಿ ಪೊಲೀಸ ಠಾಣೆಯಲ್ಲಿ ಖಡ್ಡಾಯವಾಗಿ ದಲಿತರ ದಿನ ಕಾರ್ಯಕ್ರಮವನ್ನು ನಡೆಸಲು ಮತ್ತೋಮ್ಮೆ ಆದೇಶಿಸಬೇಕು.ದಲಿತರು ನಿರಂತರವಾಗಿ ದೌರ್ಜನ್ಯಕ್ಕೆ ಒಳಪಡುತ್ತಿದ್ದಾರೆ. ಇವರಿಗೆ ರಕ್ಷಣೆ ಯಾವಾಗ? ಸಧ್ಯ ಚಿತ್ರದುರ್ಗ ಜಿಲ್ಲಾ ಆಡಳಿತ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳು,ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕೂಡಲೇ ದಲಿತರಿಗೆ ರಕ್ಷಣೆ ನೀಡಿ ಸಾಮಾಜಿಕ ಕಾನೂನ ನ್ಯಾಯ ನೀಡಬೇಕು.
ಎಲ್ಲಾ ತಪ್ಪಿತಸ್ತರನ್ನು ಕೂಡಲೇ ಬಂಧಿಸಿಬೇಕು. ಎಂದು ಕರ್ನಾಟಕ ದಲಿತ ವಿಮೋಚನಾ ಸಮಿತಿ ತಮ್ಮಲ್ಲಿ ಆಗ್ರಹಿಸುತ್ತದೆ. ಮತ್ತು ಅಸ್ಪೃಶ್ಯತೆ ನಿರ್ಮೂಲನೆಗೆ ಕಾನೂನ ಅರಿವು ತಿಳುವಳಿಕೆ ನೀಡಲು ರಾಜ್ಯದ ಎಲ್ಲಾ ಪೊಲೀಸ ಠಾಣೆಯಲ್ಲಿ ತಿಂಗಳದ ಎರಡನೇ ಶನಿವಾರ ದಲಿತರ ದಿನಾ ಎಂದು ಕಾರ್ಯಕ್ರಮ ಆಯೋಜಿಸಿಲು ಸಿದ್ದಾರ್ಥ ಎನ್ ಮಲ್ಲಮ್ಮನವರ ಜಿಲ್ಲಾಧ್ಯಕ್ಷರು ಮೈಲಾರಿ ಹಂಚಿನಮನಿ ಜಿಲ್ಲಾ ಉಪಾಧ್ಯಕ್ಷರು ಅನಿಲ ಗೋನಾಳ ಹುಬ್ಬಳ್ಳಿ ಶಹರ ಅಧ್ಯಕ್ಷರು ಮಂಜುನಾಥ ಬಾಲಪ್ಪನವರ ಓಂಕಾರ ವೀರಾಪೂರ ಸಿದ್ದು ಗುತ್ತಲ ಶಿವರಾಜ್ ಮಾದರ. ಈ ಎಲ್ಲಾ ಸಂಘಟನಾಕಾರರು ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಸಿದ್ದಾರೆ.