ಶಾಲಾ ವಾರ್ಷಿಕೋತ್ಸವ ಹಾಗೂ – ಬಿಳ್ಕೋಡುವ ಸಮಾರಂಭ ಜರುಗಿತು.
ಬೆಕಿನಾಳ ಫೆ.26





ವಿಶ್ವ ಭಾರತ ಹಿರಿಯ ಪ್ರಾಥಮಿಕ ಶಾಲೆಯ 13 ನೇ. ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಷ.ಬ್ರ ಗುರುಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳು ಬೃಹನ್ಮಠ ಗುಂಡಕನಾಳ್ ಸಾನಿಧ್ಯ ಮಹೇಶ್ ಮುತ್ಯ ಬಿಕಿನಾಳ ಅಧ್ಯಕ್ಷತೆ ಎಸ್.ಎಸ್ ಅಲ್ಲಾಳಮಠ್ ಉದ್ಘಾಟನೆ ರಾಜುಗೌಡ ಬ.ಪಾಟೀಲ್ ಶಾಸಕರು ದೇವರ ಹಿಪ್ಪರಗಿ ಜ್ಯೋತಿ ಬೆಳಗಿಸುವವರು ಡಾ, ಪ್ರಭುಗೌಡ ಲಿಂಗದಳ್ಳಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ನಿರೂಪಣೆಯನ್ನು ಶ್ರೀ ಮುತ್ತು ಅಮರಕೇಡ ಆಡಳಿತ ಅಧಿಕಾರಿಗಳು ಸಂಗಮೇಶ್ವರ ಐ.ಟಿ.ಐ ಅಸ್ಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷತೆ ವಹಿಸಿದ ಗುಂಡಕನಾಳದ ಶ್ರೀ ಗಳು ಮಾತನಾಡಿದರು ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ ನಂತರ ಶಾಲೆ ಅದಕ್ಕೆ ಶಾಲೆಯಲ್ಲಿ ಕಲಿಸಿದ ಪಾಠವನ್ನು ಮನೆಯಲ್ಲಿ ತಂದೆ ತಾಯಿಯವರು ಅದರ ಬಗ್ಗೆ ವಿಚಾರ ಮಾಡಿ ಮಕ್ಕಳ ಕೈಯಲ್ಲಿ ಫೋನ್ ಕೊಡ ಬೇಡಿ ಟಿ.ವಿ ಸೀರಿಯಲ್ ಹುಚ್ಚನ್ನು ಹಚ್ಚಬೇಡಿ ಮಕ್ಕಳಿಗೆ ಯೆಂದು ಅದ್ಭುತವಾದ ಮಾತುಗಳನ್ನು ಹೇಳಿದರು. ಶಾಲೆಯ ಮುದ್ದು ಮಕ್ಕಳಿಂದ ಅದ್ಭುತವಾದ ಹಾಡುಗಳು ಡ್ಯಾನ್ಸ್ ನಾಟಕ ಭಾಷಣ ನಡೆಯಿತು.ಮತ್ತು ಶಾಲೆಯ ಪ್ರಥಮ ದ್ವಿತೀಯ ತೃತೀಯ ಬಂದ ವಿದ್ಯಾರ್ಥಿಗಳಿಗೆ ಮೆಡಲ್ ಹಾಗೂ ಸನ್ಮಾನ ಮಾಡಲಾಯಿತು.ಶಾಲೆಯ ಎಲ್ಲಾ ಸಿಬ್ಬಂದಿ ವರ್ಗ ಎಲ್ಲಾ ಮಕ್ಕಳು ಎಲ್ಲಾ ಪಾಲಕರು ಊರಿನ ಗುರು ಹಿರಿಯರು ಸಹೋದರ ಸಹೋದರಿಯರು ಮತ್ತು ಊರಿನ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿ.ಎನ್ ಪಾಟೀಲ್ ಡಿ.ಎಂ ವಗರ್ ಸಿದ್ದು ಬುಳ್ಳ ಚನ್ನಪ್ಪ ಸಜ್ಜನ್ ಸುರೇಶ್ ಮಂಟೂರ್ ಪಿ.ಎಸ್.ಐ ಕಲಕೇರಿ ಹಾಗೂ ಇನ್ನಿತರ ಮುಖ್ಯ ಅತಿಥಿಗಳು ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಪಿ.ಕೆ.ಪಿ.ಎಸ್ ನ ನೂತನ ಎಲ್ಲಾ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶರಣಯ್ಯ.ಈ.ಬೆಕಿನಾಳಮಠ.ತಾಳಿಕೋಟೆ