ಬನ್ನಟ್ಟಿ ಪಿ.ಕೆ.ಪಿ.ಎಸ್.ನೂತನ ಅಧ್ಯಕ್ಷ ರಾಗಿ ಸೋಮಶೇಖರ ಬಲಕುಂದಿ ಉಪಾಧ್ಯಕ್ಷೆರಾಗಿ ಗಂಗಮ್ಮ ಮಾಗಿ ಅವಿರೋಧ ಆಯ್ಕೆ.

ಬನ್ನಟ್ಟಿ ಆಗಷ್ಟ.11

ಹುನಗುಂದ ತಾಲೂಕಿನ ಬನ್ನಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನೂತನವಾಗಿ ಅಧ್ಯಕ್ಷರಾಗಿ ಸೋಮಶೇಖರ ಹುಲ್ಲಪ್ಪ ಬಲಕುಂದಿ ಹಾಗೂ ಉಪಾಧ್ಯಕ್ಷೆಯಾಗಿ ಗಂಗಮ್ಮ ವೀರಪ್ಪ ಮಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ವಿನೋಧಕುಮಾರ ಭೋವಿ ಹೇಳಿದರು.ಗುರುವಾರ ಬನ್ನಟ್ಟಿ ಪಿಕೆಪಿಎಸ್ ಕಾರ್ಯಾಲಯದಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಈ ವೇಳೆ ನೂತನ ಅಧ್ಯಕ್ಷ ಸೋಮಶೇಖರ ಬಲಕುಂದಿ ಮಾತನಾಡಿ ಸಹಕಾರಿ ರಂಗದಲ್ಲಿ ಈ ಭಾಗದ ರೈತರ ಪರವಾಗಿ ಸರ್ಕಾರದ ಯೋಜನೆಗಳನ್ನು ಅವರಿಗೆ ತಲುಪಿಸುಲು ಪ್ರಾಮಾಣಿಕವಾಗಿ ಕಾರ್ಯವನ್ನು ಕೈಕೊಳ್ಳುತ್ತೇನೆ ಎಂದರು.ಸಭೆಯಲ್ಲಿ ನೂತನ ನಿರ್ದೇಶಕರಾದ ವಿರುಪಾಕ್ಷಪ್ಪ ಹಡಗಲಿ, ಕೂಡ್ಲಯ್ಯ ಹಿರೇಮಠ,ಸಿದ್ದಪ್ಪ ಮಾನಳ್ಳಿ,ಮಹಾಂತೇಶ ಹೊಸಮನಿ,ರಾಯಪ್ಪ ಹಾದಿಮನಿ,ಯಂಕಪ್ಪ ಗುಡದಪ್ಪನವರ,ಶರಣಯ್ಯ ವಸ್ತ್ರದ,ಬಸಪ್ಪ ಚಲವಾದಿ,ಲಕ್ಷಿöಬಾಯಿ ವಂದಾಲಿ,ಸುಜಾತಾ ಹಿರೇಮಠ, ಮುಖಂಡರಾದ ವಿರುಪಾಕ್ಷ ಬೀಳಗಿ,ರಿಯಾಜ ಚಳ್ಳಮರದ,ಮಂಜುನಾಥ ವಂದಾಲಿ,ಹುಲ್ಲನಗೌಡ ಪಾಟೀಲ, ಶ್ರೀನಿವಾಸ ಮೇಟಿ, ಈರಪ್ಪ ಮಾಗಿ ಸೇರಿದಂತೆ ಅನೇಕರು ಇದ್ದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button