ಹಿತ್ತಲ ಗಿಡ ಮದ್ದಲ್ಲ ಎನ್ನುವ ಗಾದೆಯ ವೈರುಧ್ಯವಾಗಿ – ಬಂಜಾರದ ಗಿಣಿ ಹೊರ ಹೊಮ್ಮೂವಂತಾಗಲಿ.
ದಾವಣಗೆರೆ ಡಿ.28

“ಹಿತ್ತಲ ಗಿಡ ಮದ್ದಲ್ಲ” ಎನ್ನುವ ಗಾದೆಯ ಅರ್ಥ, ನಮ್ಮ ಮನೆಯ ಹತ್ತಿರ ಅಥವಾ ನಮಗೆ ಸುಲಭವಾಗಿ ಸಿಗುವ ವಸ್ತುಗಳ/ವ್ಯಕ್ತಿಗಳ ಮಹತ್ವವನ್ನು ನಾವು ಗುರುತಿಸುವುದಿಲ್ಲಾ, ಆದರೆ ಹೊರಗಿನ ವಸ್ತುಗಳ ಬಗ್ಗೆ ಹೆಚ್ಚಿನ ನಂಬಿಕೆ ಇಡುತ್ತೇವೆ. ಅಂದರೆ, ನಮ್ಮವರಿಗಿಂತ ಹೊರಗಿನವರಿಗೇ ಹೆಚ್ಚು ಬೆಲೆ ಕೊಡುವ ಪ್ರವೃತ್ತಿಯನ್ನು ಇದು ಸೂಚಿಸುತ್ತದೆ. ಇದರ ಒಳಾರ್ಥವೆಂದರೆ, ಸ್ವಂತ ಸ್ಥಳದ ಅಥವಾ ಹತ್ತಿರದ ಜನರ ಸಾಮರ್ಥ್ಯವನ್ನು ನಿರ್ಲಕ್ಷಿಸುವುದು, ಮತ್ತು ನಮ್ಮ ಬಳಿ ಇರುವ ಸಂಪನ್ಮೂಲಗಳನ್ನು ಅರಿತು ಕೊಳ್ಳದಿರುವುದು.

ಶ್ರೀ ಶ್ರೀಕಾಂತ್ಆರ್ ಜಾದವ್ ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ ಹುಬ್ಬಳ್ಳಿ ರಾಜ್ಯಾಧ್ಯಕ್ಷರು
ನಮ್ಮ ಹೆಮ್ಮೆಯ “ಶ್ರೀ ಉಮೇಶ ನಾಯ್ಕ ಚಿನ್ನಸಮುದ್ರ” ಇವರು ಜಾನಪದ ಕಲಾವಿದರಾಗಿ ಕರುನಾಡಿನ ಎಲ್ಲಾ ವರ್ಗದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಕರ್ನಾಟಕದ ತುಂಬೆಲ್ಲಾ ಜಾನಪದ ಕಲಾವಿದರಾಗಿ ಮನೆ ಮಾತಾಗಿದ್ದಾರೆ. ಅವರು ಮುಗ್ದ ಸ್ವಭಾವದವರು. ಯಾರಿಗೂ ಎಂದಿಗೂ ಏರು ಧ್ವನಿಯಲ್ಲಿ ಮಾತನಾಡಿದ್ದು ನಾವು ಕಂಡಿಲ್ಲಾ. ಅವರ ಮುಗ್ಧತೆಯನ್ನು ಎಷ್ಟೋ ಜನರು ದುರುಪಯೋಗ ಪಡೆದು ಕೊಂಡಿದ್ದು ನಾನು ಕಂಡಿದ್ದೇನೆ. ಅವರಲ್ಲಿರುವ ಗಾಯನ ಕಲೆಗೆ ಮನ್ನಣೆ ಸಿಗಬೇಕಾಗಿದೆ. ಕೆಲವರು ತಮ್ಮ ರಾಜಕೀಯ ತಂತ್ರಗಾರಿಕೆಯನ್ನು ಬಳಸಿಕೊಂಡು ಮುನ್ನೆಲೆಗೆ ಬಂದಿದ್ದಾರೆ. ಆದರೆ ಅಂತಹ ತಂತ್ರಗಾರಿಕೆಯ ಜಪ ಎಂದೂ ಮಾಡದ ನಮ್ಮ ಹೆಮ್ಮೆಯ ಉಮೇಶ ನಾಯ್ಕ ಹೀಗೆಯೇ ಎಲೆ ಮರೆಯ ಕಾಯಿಯಂತೆ ಮುಗ್ದನಾಗಿ ಉಳಿದು ಬಿಟ್ಟಿದ್ದಾರೆ. ಇದೆ ಕಲಾವಿದ ಬೇರೆ ಜಾತಿಯಲ್ಲಿ ಹುಟ್ಟಿದ್ದರೆ ಅವನು ಈಗಾಗಲೇ ಉತ್ತುಂಗದಲ್ಲಿ ಇರುತ್ತಿದ್ದನು.

ಮುಗ್ದ ಮನಸ್ಸಿನ ಉಮೇಶ್ ನಾಯಕ್ ಅವರನ್ನು ಸಮುದಾಯ ಕೈ ಹಿಡಿದು ಮೇಲೆತ್ತುವ ಕೆಲಸ ಕಾರ್ಯ ಮಾಡ ಬೇಕಾಗಿರುವುದು ಸಮಾಜದ ಹೊಣೆಗಾರಿಕೆ ಆಗಿದೆ.
ಅವರು ಎಲ್ಲಿ ಯಾದರೂ ಸನ್ಮಾನಕ್ಕೆ ಒಳಪಟ್ಟಾಗ ಹೆಮ್ಮೆಯಿಂದ ಅಲ್ಲಿಯ ಫೊಟೊಗಳನ್ನು ಅವರು ಗ್ರುಪಿನಲ್ಲಿ ಹಾಕುವುದನ್ನು ಕೆಲವರು ಸಹಿಸುವುದಿಲ್ಲ. ಅದನ್ನು ಟೀಕಿಸುವ ಜನರೆ ಹೆಚ್ಚಾಗಿರುತ್ತಾರೆ. ಹಾಗಾಗಿ ನಾನು ಅವರಿಗೆ ಹಲವಾರು ಸಲ ಸಲಹೆ ನೀಡಿದ್ದೇನೆ. ತಾವು ಎಲ್ಲಿಯಾದರೂ ಕಾರ್ಯಕ್ರಮದ ವೇದಿಕೆ ಹಂಚಿ ಕೊಂಡಿರುವ ಫೊಟೊಗಳನ್ನು ತಾವೇ ಖುದ್ದಾಗಿ ಗ್ರುಪಿನಲ್ಲಿ ಹಂಚಿ ಕೊಳ್ಳಬೇಡಿ ಎಂದು ಹೇಳಿದ್ದೇನೆ. ಅವರು ಬಡತನದಲ್ಲಿ ಹೆಚ್ಚಿನ ಶಿಕ್ಷಣ ಪಡೆಯದೇ ಮುಗ್ಧ ಕಲಾವಿದ. ಗಾಯನ ಕಲೆಯು ಅವನಿಗೆ ದೈವದತ್ತವಾಗಿ ಬಂದಿದೆ. ಸಂಗೀತದಲ್ಲಿ ಹೆಚ್ಚಿನ ಪಾಂಡಿತ್ಯ ಪಡೆದಿಲ್ಲವಾದರೂ ಲಯ ಬದ್ಧವಾಗಿ ಹಾಡುವ ಕಲೆಯನ್ನು ಕರಗತ ಮಾಡಿ ಕೊಂಡಿದ್ದಾರೆ. ಮುಗ್ಧ ಉಮೇಶ ನಾಯ್ಕರನ್ನು ಬೆಳೆಸುವ ಕೆಲಸ ನಾವೆಲ್ಲರೂ ಕೂಡಿ ಮಾಡ ಬೇಕಾದ ಅನಿವಾರ್ಯತೆ ಇದೆ. ಅವರನ್ನು ನೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನ ಮಾಡೋಣ.ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆಯ ವ್ಯತಿರಿಕ್ತವಾಗಿ ಕೆಲಸ ಮಾಡಿ ನಮ್ಮ ಹೆಮ್ಮೆಯ ಕಲಾವಿದನಿಗೆ ಪ್ರೊತ್ಸಾಹ ನೀಡೋಣ.

