ಪುಸ್ತಕಗಳು ಜ್ಞಾನವನ್ನು ವಿಸ್ತರಿಸುವ ಮತ್ತು ವ್ಯಕ್ತಿತ್ವ ರೂಪಿಸುವ ಜ್ಞಾನವಿಧಿ — ಡಾll ಶರಣಬಸಪ್ಪ.
ಹುನಗುಂದ ಆಗಷ್ಟ.13

ಪುಸ್ತಕಗಳು ವ್ಯಕ್ತಿಯ ಜ್ಞಾನವನ್ನು ವಿಸ್ತರಿಸುವ ಮತ್ತು ವ್ಯಕ್ತಿತ್ವವನ್ನು ರೂಪಿಸುವ ಬಹುದೊಡ್ಡ ಪಾತ್ರವನ್ನು ವಹಿಸುತ್ತವೆ ಎಂದು ಬದಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ಡಾ.ಶರಬಸಪ್ಪ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಂಥಾಲಯ ಶಿಕ್ಷಣ ವ್ಯವಸ್ಥೆಯ ಹೃದಯ ಮತ್ತು ಆತ್ಮವಿದ್ದಂತೆ.ಗ್ರಂಥಾಲಯದ ಪಿತಾಮಹ ಡಾ.ರಂಗನಾಥ ಅವರ ಕೊಡುಗೆ ಅಪಾರ.ಪುಸ್ತಕ ಸಂಗ್ರಹ ಮತ್ತು ಓದು ಜ್ಞಾನವನ್ನು ಹೆಚ್ಚಿಸುತ್ತದೆ.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಂಥಾಲಯಗಳು ಬಹಳ ಉಪಯುಕ್ತವಾಗಿದ್ದು ಅವುಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು.ಪುಸ್ತಕದ ಓದು ಮನುಷ್ಯನ ಆಲೋಚನಾ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಜ್ಞಾನ ಭಂಡಾರವನ್ನು ನೀಡುವ ಆಲಯಗಳಾಗಿವೆ.ಪುಸ್ತಕ ಖರೀದಿಸಲು ಆಗದೇ ಇರುವ ಬಡ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಆಸರೆಯಾಗಿವೆ.ಮನುಷ್ಯ ದೈಹಿಕ ಶಕ್ತಿಗೆ ಆಹಾರ ಎಷ್ಟು ಉಪಯುಕ್ತವೋ ಮಾನಸಿಕ ಶಕ್ತಿಗೆ ಪುಸ್ತಕಗಳು ಅಷ್ಟೆ ಮುಖ್ಯವಾಗಿರುತ್ತದೆ ಎಂದರು.ಪ್ರಾಚಾರ್ಯ ಪ್ರೋ.ನಾಗರಾಜ ಮುದಗಲ್ಲ ಮಾತನಾಡಿ ಶೈಕ್ಷಣೀಕ ಮತ್ತು ಸಾಮಾಜಿಕ ಜೀವನದಲ್ಲಿ ಗ್ರಂಥಾಲಯಗಳು ವಿದ್ಯಾರ್ಥಿ ಪಾಲಿನ ದಾರಿ ದೀಪಗಳಾಗಿವೆ.ಒಂದು ಪುಸ್ತಕ ಒಬ್ಬ ವ್ಯಕ್ತಿಯ ಜೀವನವನ್ನೇ ಬದಲಾಯಿಸುವ ಶಕ್ತಿ ಅದರಲ್ಲಿದೆ.ಗ್ರಂಥ ವಿದ್ಯಾರ್ಥಿಗಳ ಅಧ್ಯಯನಶೀಲತೆಯನ್ನು ಹೆಚ್ಚಿಸುತ್ತದೆ.ಆಧುನಿಕತೆಗೆ ತಕ್ಕಂತೆ ಗ್ರಂಥಾಲಯಗಳು ಬದಲಾಗುತ್ತಿದ್ದು ಎಲ್ಲರ ಮಾಹಿತಿ ಕೇಂದ್ರವಾಗಿದೆ.ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಜ್ಞಾನ ಅವಶ್ಯ ಅಂತಹ ಜ್ಞಾನ ಪುಸ್ತಕದಲ್ಲಿದೆ ಎಂದರು.ಈ ಸಂದರ್ಭದಲ್ಲಿ ದೈಹಿಕ ನಿರ್ದೇಶಕ ಬಿ.ವಾಯ್.ಆಲೂರ,ಗಾಯತ್ರಿ ದಾದ್ಮಿ,ಇದ್ದರು,ಶ್ರೀದೇವಿ ಕಡಿವಾಲ ಪ್ರಾಸ್ತಾವಿಕವಾಗಿ ಮಾತನಾಡಿದರು,ಅಕ್ಷತಾ ತಾಳಿಕೋಟಿ ಪ್ರಾರ್ಥಿಸಿ,ಪ್ರೋ.ನಿಜೀಶಕುಮಾರ ಸ್ವಾಗತಿಸಿ ನಿರೂಪಿಸಿದರು,ದಾನಮ್ಮ ಮಠ ವಂದಿಸಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ

