ದಲಿತರು ಕೇರಿಗಳಿಗೆ ಓಡಾಡುವ ಮುಖ್ಯ ದಾರಿಗೆ ಸಮಸ್ಯೆ ಮಾಡಿ ಭಯಪಡಿಸುವವರ ವಿರುದ್ದ ಕಾನೂನು ಹೋರಾಟಕ್ಕೆ ಡಿ.ಎಸ್.ಎಸ್ — ಕರೆ.
ಕೆ. ರಾಮಾಪುರ ಆಗಷ್ಟ.14

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಕೆ. ರಾಯಪುರ ಗ್ರಾಮದಲ್ಲಿ ಶನಿವಾರದಂದು ದಲಿತ ಕಾಲೋನಿಗೆ ಹೋಗುವಂತ ಮುಖ್ಯ ದಾರಿಗೆ ಅಡ್ಡಲಾಗಿ ಮನೆ ಕಟ್ಟಿ ಮಾದಿಗ ಸಮುದಾಯದ ಜನರು ತಮ್ಮ ಕೇರಿಗೆ ಹೋಗುವ ಮತ್ತು ಬರುವ ರಸ್ತೆಯಲ್ಲಿ ಇತರೆ ಮೇಲ್ಜಾತಿಯ ವ್ಯಕ್ತಿಗಳು ದಾರಿಯ ಭಾಗದವರೆಗೂ ಗೋಡೆಯನ್ನು ಕಟ್ಟಿ ಸಾರ್ವಜನಿಕರು ಹಾಗೂ ಮಾದಿಗ ಸಮುದಾಯದ ಜನಗಳು ಓಡಾಡೋದಕ್ಕೆ ತೊಂದರೆ ಮಾಡಿದ್ದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೂ ಹಾಗೂ ಗ್ರಾಮ ಪಂಚಾಯತಿಯ ಅಧಿಕಾರಿಗಳಿಗೂ ಹಾಗೂ ತಾಲೂಕು ಪಂಚಾಯಿತಿ ಇ. ಓ. ಅಧಿಕಾರಿಗಳಿಗೂ ಅಡ್ಡಲಾಗಿ ಕಟ್ಟಿರುವರ ಗೋಡೆಯನ್ನು ತೆರವುಗೊಳಿಸುವಂತೆ ಮಾಲೀಕರ ವಿರುದ್ಧ ದೂರು ಸಲ್ಲಿಸಿದರು. ಯಾವೊಬ್ಬ ಇಲಾಖೆಗಳ ಅಧಿಕಾರಿಯಗಳು ದಲಿತ ಸಮುದಾಯದವರಿಗೆ ತೋರಿಸುವಂತಹ ದಿವ್ಯ ನಿರ್ಲಕ್ಷತನವನ್ನು ತಿಳಿದು ದಲಿತ ಗ್ರಾಮಸ್ಥರು ಭಯಭೀತರಾಗಿರುವ ಸಂಗತಿಯೂ ಕಂಡುಬರುತ್ತದೆ.

ಕಾರಣ ಈ ಹಿಂದೆ ಸುಮಾರು ಐದು ವರ್ಷಗಳ ಹಿಂದಿನ ದಿನಗಳಲ್ಲಿ ಇದೇ ರೀತಿಯಾಗಿ ದಾರಿಗೆ ಅಡ್ಡಲಾಗಿ ಸಿಮೆಂಟಿನ ಕಂಬವನ್ನು ಹೂಣಿರುವ ಸಂದರ್ಭದಲ್ಲಿ ಎತ್ತು ಬಂಡಿಯಲ್ಲಿ ದನಕರುಗಳಿಗೆ ಮೇವು ತರುವಂತಹ ಸಮಯದಲ್ಲಿ ಆಕಸ್ಮಿಕವಾಗಿ ದಾರಿಗೆ ಅಡ್ಡಲಾಗಿ ಕಟ್ಟಿರುವ ಆ ಸಿಮೆಂಟ್ ಕಂಬದ ಗೋಡೆಗೆ ಬಂಡಿ ತಗಲಿದಾಗ ಗೋಡೆಯು ಹಾನಿಗೊಳಗಾಗುತ್ತದೆ. ಆ ಸಂದರ್ಭದಲ್ಲಿ ಮೇಲ್ಜಾತಿಯವರು ನಮ್ಮ ಗೋಡೆಯು ಹಾಳಾಗಿದೆ ನೀವುಗಳು ಒಡೆದೋಗಿರುವ ಗೋಡೆಯ ಹಾನಿಗೆ ಅಪರಾಧಿಯಾಗಿ ದುರಸ್ತಿ ಮಾಡಿಸಬೇಕು ಎಂದು ಮೇಲ್ಜಾತಿ ಅವರು ತಮ್ಮ ದರ್ಪ ದೌರ್ಜನ್ಯದಿಂದ ನಾದುರಸ್ತಿಯನ್ನಾಗಿ ಮಾಡಿಸಿಕೊಂಡಿದ್ದಾರೆ. ಎಂದು ಗ್ರಾಮದ ಹಲವಾರು ಮುಖಂಡರುಗಳು ವಕೀಲರು ತಿಳಿಸಿರುತ್ತಾರೆ. ಹಾಗೂ ಸ್ವಲ್ಪ ದಿನಗಳ ಹಿಂದೆ ಮತ್ತೊಂದು ಮನೆಯ ನಿರ್ಮಾಣ ಮಾಡುತ್ತಿದ್ದು ಈ ಮನೆಯೂ ಸಹ ಓಡಾಡುವ ರಸ್ತೆಗೆ ತುಂಬಾ ತೊಂದರೆಯಾಗುತ್ತದೆ ಎಂದು ಮನೆಯ ಮಾಲೀಕರಿಗೂ ತಿಳಿಸಿದರು,ಅವರ ದರ್ಪದಿಂದ ಯಾವ ಕಾನೂನಿಗೂ ಯಾವ ಅಧಿಕಾರಿಗೂ ಹಂಜದೆ ಅಳಕದೆ ಇರುವುದು ಎಷ್ಟು ಸರಿ? ಕೆ ರಾಯಪುರದ ಗ್ರಾಮದ ದಲಿತ ಜನರು ಅಧಿಕಾರಿಗಳ ವಿರುದ್ಧ ಇಡೀ ಶಾಪಕ್ಕೆ ಗುರಿ ಆಗಿದ್ದಾರೆ. ಈ ವಿಷಯವನ್ನು ತಿಳಿದ ತಕ್ಷಣ ದಲಿತ ಮುಖಂಡರುಗಳು ಗ್ರಾಮಕ್ಕೆ ಭೇಟ್ಟಿಕೊಟ್ಟು ಅಲ್ಲಿನ ಗಂಭೀರವಾದಂತ ಪರಿಸ್ಥಿತಿಯನ್ನು ತಿಳಿದುಕೊಂಡು ಸಂಬಂಧಪಟ್ಟಂತಹ ಅಧಿಕಾರಿಗಳ ಜೊತೆ ನಾವು ಒಂದು ಬಾರಿ ಮಾತನಾಡುತ್ತೇವೆ,ಆ ಅಧಿಕಾರಿಗಳು ಸ್ಪಂದಿಸದೆ ಇದ್ದರೆ ನಾವು ಕಾನೂನುಗಳ ಹೋರಾಟದಿಂದ ಈ ಒಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳೋಣ ಎಂದು ಶ್ರೀಮತಿ ವಿಶಾಲಕ್ಷ್ಮ ರಾಜಣ್ಣ ನವರು ಮಾದಿಗ ಸಮುದಾಯದ ಗ್ರಾಮಸ್ಥರಿಗೆ ಸಭೆ ಸೇರಿ ಬಲವನ್ನು ತುಂಬುವ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಇನ್ನೋರ್ವ ದಲಿತ ಮುಖಂಡರಾದ ಎಸ್ ದುರ್ಗೇಶ್ ಅವರು ಗ್ರಾಮದ ಜನರು ಭಯಭೀತರಾಗಿರುವ ಅವರುಗಳಿಗೆ ನಿಮ್ಮ ಜೊತೆ ನಮ್ಮ ಸಂಘಟನೆಯು ಯಾವಾಗಲೂ ಜೊತೆ ನಿಲ್ಲುತ್ತೆ ನೀವು ಭಯಪಡುವ ಆತಂಕವಿಲ್ಲಾ ಎಂದು ಗ್ರಾಮಸ್ಥರಿಗೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಎಸ್ ದುರ್ಗೇಶ್ ರವರು ದಾರಿಯ ಸಮಸ್ಯೆ ವಿರುದ್ಧ ನೊಂದ ಗ್ರಾಮಸ್ಥರಿಗೆ ಸಮಸ್ಯೆಯನ್ನು ಬಗೆಹರಿಸುವ ಸ್ಪೂರ್ತಿದಾಯಕ ಮಾತುಗಳಿಂದ ತಿಳಿಸಿದರು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕರಾದ ಎಳನೀರ್ ಗಂಗಣ್ಣ, ಗುಡೆಕೋಟೆ ನಾಗರಾಜ್, ಬಂಡೆ ರಾಘವೇಂದ್ರ, ಕಾನಾ ಮಡಗು ದುರ್ಗೇಶ್, ಬಣಿವಿ ಕಲ್ ಚೌಡೇಶ್, ಮಹೇಶ್, ಕೆ ಮುಗಪ್ಪ, ಹಾಗೂ ಗ್ರಾಮದ ನೂರಾರು ದಲಿತ ಮುಖಂಡರುಗಳು ಗ್ರಾಮದಲ್ಲಿ ಸಭೆ ನಡೆಸಿ ಗ್ರಾಮದ ಮುಖಂಡರುಗಳು ಹಾಗೂ ಯುವಕರುಗಳು ಕೂಡ್ಲಿಗಿ ತಾಲೂಕಿನಿಂದ ಬಂದಂತಹ ದಲಿತ ಮುಖಂಡರ ಜೊತೆ ಸಮಕ್ಷಮವಾಗಿ ಸಭೆಯಲ್ಲಿ ಚರ್ಚಿಸಿ ನಮ್ಮ ಕಾಲೋನಿಗೆ ಓಡಾಡುವಂತಹ ದಾರಿಯ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸುವ ಬಗ್ಗೆ ಪರಿಹಾರ ಕಂಡುಕೊಳ್ಳೋನಾ ಎನ್ನುವ ಮಾತುಗಳನ್ನು ದಲಿತ ಮುಖಂಡರುಗಳು ತಿಳಿಸುತ್ತಾ,ಯಾವುದೇ ಸಮಯದಲ್ಲಾದರೂ ತಂಟೆ ತಕರಾರುಗಳು ಯಾರು ಕೂಡ ಮಾಡಿಕೊಳ್ಳದೆ ಹೋರಾಟದಿಂದ ನಮ್ಮ ಹಕ್ಕನ್ನು ಪಡಿಯೋಣ ಶೀಘ್ರದಲ್ಲೇ ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನು ಆಲಿಸದಿದ್ದರೆ ಡಿಎಸ್ಎಸ್ ಸಂಘಟನೆಯಿಂದ ಉಗ್ರವಾದ ಹೋರಾಟ ಕೈಗೊಳ್ಳಲಾಗುವುದೆಂದು ಎಂದು ದಲಿತ ಸಂಘಟನೆಯ ಮುಖಂಡರುಗಳು ಮೇಲ್ದಾಕಾರಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ. ಕೂಡ್ಲಿಗಿ