ಕೋನಸಾಗರ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ವಸತಿ ಶಾಲೆಯ ಹೈಟೆಕ್ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದ ಶಾಸಕರು.
ಕೋನಸಾಗರ ಆಗಷ್ಟ.14

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಸಬಾ ಹೋಬಳಿಯ ಕೋನಸಾಗರದಲ್ಲಿ ಜನಪ್ರಿಯ ಶಾಸಕರಾದ ಎನ್. ವೈ. ಗೋಪಾಲಕೃಷ್ಣರವರು ಪರಿಶಿಷ್ಟ ಜಾತಿಯ ಬಾಲಕರ ವಿದ್ಯಾರ್ಥಿವಸತಿ ನಿಲಯ ₹6ಕೋಟಿ50ಲಕ್ಷ ವೆಚ್ಚದ(100 ವಿದ್ಯಾರ್ಥಿಗಳ ಸಾಮರ್ಥ್ಯ) ಹೊಂದಿರುವ ಹೈಟೆಕ್ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದರು.ಈ ಭಾಗದಲ್ಲಿ ಬರೇ ಎಸ್.ಟಿ. ಜನಾಂಗದವರು ಇದ್ದು ಈ ಕೋನಸಾಗರ ಗ್ರಾಮ ಪಂಚಾಯಿತಿ ಈ ಗ್ರಾಮಕ್ಕೆ ಇಂಥ ಶಾಲೆಯನ್ನು ಉಪಯೋಗಿಸಿದರೆ ಇಲ್ಲಿನ ಸುತ್ತಮುತ್ತಲು ಗ್ರಾಮದಿಂದ ಬಂದಿರ್ತಕ್ಕಂತಹ ಬಡ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಅನುಕೂಲವಾಗುತ್ತದೆ ಎಂದು ಮಾನ್ಯ ಅಭಿವೃದ್ಧಿ ಹರಿಕಾರರಾದ ಎನ್. ವೈ. ಗೋಪಾಲಕೃಷ್ಣ ಶಾಸಕರು ಇಂತಹ ಒಳ್ಳೆ ಯೋಜನೆಗಳು ಶಿಕ್ಷಣ ಕಲಿತರೆ ಮುಂದೆ ಮಕ್ಕಳು ಅವರ ಕುಟುಂಬ ಶಿಕ್ಷಣದಿಂದ ಮುಂದೆ ಬರುತ್ತಾರೆಂದು ಇಂತಹ ಸರ್ಕಾರದ ಮೂಲಭೂತ ಸೌಕರ್ಯಗಳು ಮಾನ್ಯ ಶಾಸಕರು ಯೋಜನೆ ರೂಪಿಸಿರುತ್ತಾರೆ ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ರೂಪ ಮೇಡಂತಾಲೂಕು ಮಟ್ಟದ ಅಧಿಕಾರಿಗಳು ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಕಾರ್ಯಕರ್ತರು ಮುಖಂಡರು ಅಭಿಮಾನಿಗಳು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು