ವಿನಾಯಕ ಶಾಲೆಯ ಮಕ್ಕಳ ನೃತ್ಯಕ್ಕೆ ಪ್ರೋತ್ಸಾಹಿಸಿದ ಶಾಸಕರು ಹಾಗೂ ಮುಖಂಡರು.
ಕೂಡ್ಲಿಗಿ ಆಗಷ್ಟ.15

ಕೂಡ್ಲಿಗಿ ಪಟ್ಟಣದ ಶ್ರೀ ಮಹದೇವ ಮೈಲಾರ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಲಾಗಿದ್ದ 77ನೇ ಸ್ವಾತಂತ್ರ್ಯ ದಿನಾಚರಣೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ವಿನಾಯಕ ಶಾಲಾ ಮಕ್ಕಳಿಂದ ಮಹಾನಾಯಕ ಅಂಬೇಡ್ಕರ್ ಹಾಡಿಗೆ ನೃತ್ಯಮಾಡುವಾಗ ಕ್ರೀಡಾಂಗಣದಲ್ಲಿ ಸೇರಿದ್ದಂತ ಮಕ್ಕಳು ಇವರ ನೃತ್ಯಕ್ಕೆ ಚಪ್ಪಾಳೆ ಶಿಳ್ಳೆಗಳೊಂದಿಗೆ ಎಲ್ಲರೂ ಪ್ರೋತ್ಸಾಹಿಸಿದರು. ಹಾಗೂ ವೇದಿಕೆ ಮೇಲೆ ಹಾಸೀನರಾಗಿದ್ದ ಸನ್ಮಾನ್ಯ ಶಾಸಕರು ಹಾಗೂ ಗಣ್ಯಮಾನ್ಯರು ವೇದಿಕೆಯಿಂದ ಕೆಳಗಿಳಿದು ಬಂದು ನೃತ್ಯ ಮಾಡಿದ ಎಲ್ಲಾ ಮಕ್ಕಳಿಗೆ ಕೈ ಕುಲುಕುವುದರ ಮೂಲಕ ಪ್ರೋತ್ಸಾಹಿಸಿ ವಿನಾಯಕ ಶಾಲಾ ಮಕ್ಕಳೊಂದಿಗೆ ಫೋಟೋ ತೆಗೆಸಿಕೊಂಡರು ಹಾಗೂ ಎಲ್ಲಾ ಮಕ್ಕಳು ಹಾಗೂ ಶಿಕ್ಷಕ ವೃಂದದವರು ಎಲ್ಲಾ ಗಣ್ಯರಿಗೂ ಧನ್ಯವಾದಗಳು ತಿಳಿಸಿದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ