ಚಲವಾದಿ ಸಮಾಜದ ತಾಲೂಕಾಧ್ಯಕ್ಷರಾಗಿ ಮಲ್ಲಿಕಾರ್ಜುನ ಹೊಸಮನಿ. ಪ್ರಧಾನ ಕಾರ್ಯದರ್ಶಿ ಚಿದಾನಂದ ಮರ್ಜಿ ಆಯ್ಕೆ.
ಹುನಗುಂದ ಆಗಷ್ಟ.15

ತಾಲೂಕಿನ ಚಲವಾದಿ ಸಮಾಜದ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಎಚ್ ಹೊಸಮನಿನಿ,ಪ್ರಧಾನ ಕಾರ್ಯದರ್ಶಿಯಾಗಿ ಚಿದಾನಂದ ಮರ್ಜಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಚಲವಾದಿ ಸಮಾಜದ ಪದಾಧಿಕಾರಿಗಳ ಆಯ್ಕೆ ಮತ್ತು ಚಲವಾದಿ ಸಮಾವೇಶ ಹಮ್ಮಿಕೊಳ್ಳುವ ಕುರಿತಾಗಿ ಕರೆಯಲಾಗಿದ್ದ ಸಭೆಯಲ್ಲಿ ಸಮಾಜದ ಮುಖಂಡರು ಅವಿರೋಧವಾಗಿ ಆಯ್ಕೆ ಮಾಡಿದರು.ಗೌರವಅಧ್ಯಕ್ಷರಾಗಿ ನರಸಪ್ಪ ಹಿರೇಮನಿ,ಉಪಾಧ್ಯಕ್ಷ ರಾಘವೇಂದ್ರ ಕಟ್ಟಿಮನಿ,ಖಜಾಂಚಿ ರಮೇಶ ಹಿರೇಮನಿ,ಸಂಘಟನಾ ಕಾರ್ಯದರ್ಶಿ ಸುನೀಲ ಚಲವಾದಿ,ಸಹ ಕಾರ್ಯದರ್ಶಿ ರವಿ ಮಸ್ಕಿ ಮತ್ತು ಮಲ್ಲು ಚಲವಾದಿ,ಮಹಿಳಾ ಘಟಕದ ಅಧ್ಯಕ್ಷೆಯಾಗಿ ಯಮನವ್ವ ಚಲವಾದಿ ಆಯ್ಕೆಯಾದರು.ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಹೊಸಮನಿ ಮಾತನಾಡಿ ಚಲವಾದಿ ಸಮಾಜ ಶೈಕ್ಷಣಿಕ,ಆರ್ಥಿಕ,ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದು.ಸಮಾಜದ ಅಭಿವೃದ್ದಿಗೆ ಸಂಘಟನೆ ಅವಶ್ಯ.ಸಮಾಜದ ಎಲ್ಲ ಮುಖಂಡರ ಮಾರ್ಗದರ್ಶನದಲ್ಲಿ ಡಿಸೆಂಬರ್ ಇಲ್ಲವೇ ಜನವರಿಯಲ್ಲಿ ಹುನಗುಂದ ತಾಲೂಕಿನ ಮೊದಲ ಚಲವಾದಿ ಸಮಾವೇಶ ಮತ್ತು ಚಲವಾದಿ ಸಮಾಜದಿಂದ ನೂತನವಾಗಿ ಆಯ್ಕೆಯಾದ ಸಚಿವ ಮತ್ತು ಶಾಸಕರ ಸನ್ಮಾನ ಹಾಗೂ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳುವುದು ಎಂದರು.

ಸಮಾಜದ ಮುಖಂಡರಾದ ಹನಮಂತ ನಡುವಿನಮನಿ,ಶಂಕ್ರಪ್ಪ ಮರ್ಜಿ,ಮಲ್ಲಿಕಾರ್ಜುನ ತಳ್ಳಿಕೇರಿ,ಚಂದ್ರಶೇಖರ ಈಟಿ,ಸಂಜೀವಪ್ಪ ಚಲವಾದಿ,ಯಮನಪ್ಪ ಚಲವಾದಿ,ಯಲ್ಲಪ್ಪ ನಡುವಿನಮನಿ,ರಾಮಣ್ಣ ಚಲವಾದಿ,ರಾಜು ಈಟಿ,ಚಂದಪ್ಪ ತಿಮ್ಮಾಪೂರ,ಬಸವರಾಜ ಹಿರೇಮನಿ,ಮಂಜುನಾಥ ಮಸ್ಕಿ,ಮಂಜುನಾಥ ಚಲವಾದಿ,ಗಂಗಾಧರ ಬದಾಮಿ,ಶ್ರೀಕಾಂತ ಚಲವಾದಿ,ಮಾರುತಿ ಚಲವಾದಿ,ದೇವು ಚಲವಾದಿ,ವೆಂಕಟೇಶ ಚಲವಾದಿ,ಬಲವಂತಪ್ಪ ಚಲವಾದಿ,ಬಸವರಾಜ ಚಲವಾದಿ,ತಿಮ್ಮಣ್ಣ ಬದಾಮಿ,ಮಹಾಂತೇಶ ಚಲವಾದಿ,ಮುತ್ತು ಚಲವಾದಿ,ರಾಘು ಈಟಿ,ವಿನೋಧ ಚಲವಾದಿ,ವಾಸು ಚಲವಾದಿ,ರಮೇಶ ಚಲವಾದಿ,ದೇವು ಚಲವಾದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ