ನಿಧನ ವಾರ್ತೆ – ಹೆಚ್.ಎನ್ ವೀರಪ್ಪ ನಿಧನ.
ಹೊಸಹಳ್ಳಿ ಡಿ.25

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿ ಅಂಬೇಡ್ಕರ್ ಕಾಲೋನಿ ನಿವಾಸಿಯಾದ, ಕೇರಿಯ ಮುಖಂಡರು ಹೆಚ್.ಎನ್ ವೀರಪ್ಪ (75) ರವರು, (ಡಿಸೇಂಬರ್ 24) ಮದ್ಯಾಹ್ನ 1.45 ಗಂಟೆಗೆ ನಿಧನ ರಾಗಿದ್ದಾರೆ. ಅವರು ಬಹು ದಿನಗಳಿಂದಲೂ, ವಯೋ ಸಹಜ ಅನಾರೊಗ್ಯದಿಂದ ಬಳಲುತಿದ್ದರು. ಅವರು ಪತ್ನಿ, ಒಬ್ಬ ಪುತ್ರ ಹಾಗೂ ಮೂರು ಜನ ಪುತ್ರಿಯರನ್ನು, ಅಪಾರ ಬಂಧು ಬಳಗವನ್ನು ಸ್ನೇಹಿತರನ್ನು ಹೊಂದಿದ್ದರು. ಅಂತ್ಯ ಕ್ರಿಯೆ:- ಮೃತರ ಅಂತ್ಯ ಕ್ರಿಯೆಯನ್ನು, (ಡಿ 25) ಬೆಳಿಗ್ಗೆ 11.30 ಗಂಟೆಗೆ, ಗ್ರಾಮದ ಹೊರ ವಲಯದಲ್ಲಿರುವ ರುದ್ರ ಭೂಮಿಯಲ್ಲಿ ಜರುಗಿಸಲಾಗುವುದು. ತೀವ್ರ ಸಂತಾಪ:- ಮಕ್ಕಳು ಮೊಮ್ಮಕ್ಕಳು ಅಣ್ಣ ತಮ್ಮಂದಿರು ಅಪಾರ ಬಂಧುಗಳು ರವರ ಅಗಲಿಕೆಗೆ ತಾಲೂಕಿನ ದಲಿತ ಸಮುದಾಯದವರು ಹಾಗೂ ಕ್ಯಾಸಿನ ಕೇರಿ ಗ್ರಾಮದವರು ಸೇರಿದಂತೆ ತಾಲೂಕಿನ ಎಲ್ಲೆಡೆಯ ಮಾದಿಗ ಸಮುದಾಯದ ದಲಿತ ಪರ ಸಂಘಟನೆಯ ಮುಖಂಡರುಗಳು ಹಾಗೂ ಇತರ ಸಮುದಾಯದ ಮುಖಂಡರು ಸೇರಿದಂತೆ ಹಾಗೂ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಮತ್ತು ಕಾರ್ಮಿಕರು ರೈತರು ಮಹಿಳಾ ಸಂಘಟನೆಗಳು, ವಿವಿಧ ಸಂಘಟನೆಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ