ಶಿಕ್ಷಕರ ಬೀಳ್ಕೊಡುವ ಹಾಗೂ ಶಿಕ್ಷಕರ ಸ್ವಾಗತ ಸಮಾರಂಭ.
ಇಂಡಿ ಆಗಷ್ಟ.18

ತಾಲೂಕಿನ ಅರ್ಜುಣಗಿ ಕೆಡಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಎ ಆರ್ ಲಾಳಸಂಗಿ ಶಿಕ್ಷಕರ ಬೀಳ್ಕೊಡುವ ಸಮಾರಂಭ ಹಾಗೂ ಜಿ.ಆರ್.ರಜಪೂತ ಶಿಕ್ಷಕರ ಸ್ವಾಗತ ಸಮಾರಂಭ ಜರುಗಿತು. ನಂತರ ಬಿ.ಎಸ್. ಹೊಸೂರ ಶಿಕ್ಷಕರು ಮಾತನಾಡಿ, ಎ.ಆರ್.ಲಾಳಸಂಗಿ ಶಿಕ್ಷಕರು ಅವರು ಸತತವಾಗಿ 8 ವರ್ಷಗಳ ಕಾಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅರ್ಜುಣಗಿ ಕೆ.ಡಿ. ಶಾಲೆಯಲ್ಲಿ ಅತ್ಯಂತ ಉತ್ಸಾಹದಿಂದ ಹಾಗೂ ಪ್ರೇರಣಾದಾಯಕವಾಗಿ ಕಾರ್ಯ ನಿರ್ವಹಿಸಿದ್ದಾರೆ.

ಮಕ್ಕಳ ಆಸಕ್ತಿ,ಅಭಿರುಚಿಯನ್ನು ಅರ್ಥೈಸಿಕೊಂಡು ಪಾಠ ಬೋಧನೆ ಮಾಡುವ ಅವರ ಕಲೆ ಮೆಚ್ಚುವಂತದ್ದು ಎಂದು ಹೇಳಿದರು. ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾದ ಪಿ.ವ್ಹಾ.ದಳವಾಯಿ. ಜೆ.ಪಿ.ಚವಡಿಹಾಳ ಶಿಕ್ಷಕರು.ಜಿ.ಆರ್.ರಜಪೂತ ಶಿಕ್ಷಕರು.ಬಿ.ಎಸ್.ಹೊಸೂರ ಶಿಕ್ಷಕರು.ಹಸನಸಾಬ ಕೊಮಡಿ.ಸೇರಿದಂತೆ ಅಡಿಗೆಯ ಸಿಬ್ಬಂದಿಯರು ವಿದ್ಯಾರ್ಥಿ /ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು: ಶಿವಪ್ಪ.ಬಿ.ಹರಿಜನ.ಇಂಡಿ