ಹುನಗುಂದದಲ್ಲಿ ನಿರಂತರ ಆಡು ಕುರಿ ಕೋಳಿಗಳ ಕಳ್ಳತನ — ತಡೆಗಟ್ಟುವಂತೆ ಕರವೇ ಮತ್ತು ಸಾರ್ವಜನಿಕರಿಂದ ಡಿ.ವೈ.ಎಸ್.ಪಿ ರವರಿಗೆ ಮನವಿ.

ಹುನಗುಂದ ಆಗಷ್ಟ.18

ಕಳೆದ ಒಂದು ತಿಂಗಳಿನಿಂದ ಹುನಗುಂದ ಪಟ್ಟಣದ ಅನೇಕ ಕಡೆಗಳಲ್ಲಿ ಮಧ್ಯರಾತ್ರಿ ಮತ್ತು ನಸುಕಿನ ಜಾವದಲ್ಲಿ ಆಡು ಕುರಿ ಮತ್ತು ಕೋಳಿಗಳ ಕಳ್ಳತನ ಜಾಸ್ತಿಯಾಗಿದ್ದು ಅದನ್ನು ತಡೆಗಟ್ಟುವಂತೆ ಒತ್ತಾಯಿಸಿ ಬುಧವಾರ ಕರವೇ ಕಾರ್ಯಕರ್ತರು ಮತ್ತು ಪಟ್ಟಣದ ಸಾರ್ವಜನಿಕರು ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಕರವೇ ನಗರ ಘಟಕದ ಅಧ್ಯಕ್ಷ ಬಿ.ಎಚ್.ವಾಲಿಕಾರ ಮಾತನಾಡಿ ಕಳೆದ ೬ ತಿಂಗಳಿನಿಂದಲೂ ಮನೆಗಳ ಮುಂದೆ ಕಟ್ಟಿರುವ ಆಡು ಮತ್ತು ಕುರಿ ಹಾಗೂ ಕೋಳಿಗಳನ್ನು ಬೈಕ್ ಮತ್ತು ಬೋಲೋರೋ ಗಾಡಿಗಳನ್ನು ತಗೆದುಕೊಂಡು ಬಂದು ಹೊತ್ತೋಯ್ಯುತ್ತಿದ್ದು.ಕಳೆದ ೬ ತಿಂಗಳಿನಿಂದಲೂ ಪಟ್ಟಣದ ನಾಗಲಿಂಗ ನಗರ,ಗಣೇಶ ನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಇಂತಹ ಕಳ್ಳತನ ನಡೆಯುತ್ತಿದೆ,ಇದರ ಕುರಿತು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೂ ಯಾವದೇ ಪ್ರಯೋಜನವಾಗಿಲ್ಲ ಇನ್ನು ಮಂಗಳವಾರ ರಾತ್ರಿ ಅಮರಾವತಿ ಕ್ರಾಸ್‌ನಲ್ಲಿ ರಾತ್ರಿ ೧೨ ಗಂಟೆಯ ಸುಮಾರಿಗೆ ೨ ಆಡುಗಳು ಕಳ್ಳತನವಾಗಿವೆ.ಇದರಿಂದ ರೈತರು ಕಷ್ಟ ಪಟ್ಟು ಸಾಕಿದ ಆಡು ಕುರಿ ಕೋಳಿಗಳು ಕಳ್ಳತನವಾಗುತ್ತಿರುವುದ್ದರಿಂದ ಬೇಸತ್ತು ಹೋಗಿದ್ದು.

ಇದರಿಂದ ಲಕ್ಷಾಂತರ ರೂ ಮೌಲ್ಯದ ಆಡು ಕುರಿಗಳು ಕಳ್ಳರ ಪಾಲಾಗುತ್ತಿದ್ದು.ತಕ್ಷಣವೇ ಕಳ್ಳರನ್ನು ಪತ್ತೆ ಹಚ್ಚಿ ಮೇಲಿಂದ ಮೇಲೆ ಆಗುತ್ತಿರುವ ಇಂತಹ ಪ್ರಕರಣಗಳನ್ನು ತಡೆಯಬೇಕೆಂದು ಒತ್ತಾಯಿಸಿದರು.ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಮಾತನಾಡಿ ಆಡು ಕುರಿಗಳ ಕಳ್ಳತನ ಪ್ರಕರಣಗಳ ಬಗ್ಗೆ ಕೇಳಿ ತಿಳಿದುಕೊಂಡಿದ್ದೇನೆ.ಇಂತಹ ಕಳ್ಳತನವನ್ನು ತಡೆಯಲು ಪೊಲೀಸ್‌ರ ಜೊತೆ ಸಾರ್ವಜನಿಕರ ಸಹಕಾರ ಕೂಡಾ ಬಹಳ ಮುಖ್ಯ.ಮೊದಲು ತಾವೆಲ್ಲ ಜಾಗೃತರಾಗಿ ಹಾಗೇನಾದರೂ ಅನುಮಾನ ಬರುವ ಬೈಕ್ ಮತ್ತು ಇತರೆ ವಾಹನಗಳು ನಿಲ್ಲಸಿರೋದು ತಮಗೆ ಕಂಡು ಬಂದಲ್ಲಿ ತಕ್ಷಣವೇ 112ಗೆ ಪೋನ್ ಮಾಡಿ ತಕ್ಷಣವೇ ಪೊಲೀಸ್‌ರು ತಮ್ಮ ಸಹಾಯಕ್ಕೆ ಬಂದು ಇಂತಹ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ ಎಂದರು.ಈ ಸಂದರ್ಭದಲ್ಲಿ ಮಹಾಂತೇಶ ಚಿತ್ತರಗಿ,ಹುಸೇನ ಸಂದಿಮನಿ,ಶಹೀದ್‌ಆಫ್ರೀದ್ ಸಂದಿಮನಿ,ಹುಸೇನಬಾಷ ನದಾಫ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button