2024ರ ಲೋಕಸಭೆ ಚುನಾವಣೆಯ ಮತದಾರ ಯಾದಿ ಸಿದ್ಧತೆಗೆ ಸರ್ವೇ ಕಾರ್ಯ ಪ್ರಗತಿಯಲ್ಲಿದೆ – ಜಿಲ್ಲಾಧಿಕಾರಿ ಕೆ.ಎಂ.ಜಾನಕಿ.

ಹುನಗುಂದ ಆಗಷ್ಟ.19

2024ರ ಲೋಕಸಭೆ ಚುನಾವಣೆಯ ಪೂರ್ವದಲ್ಲಿ ಮತದಾರ ಯಾದಿಯನ್ನು ಸಿದ್ದಗೊಳ್ಳಿಸಲು ಈಗಾಗಲೇ ಮನೆ ಮನೆಗಳ ಸರ್ವೇ ಕಾರ್ಯ ನಡೆದಿದ್ದು.ಹುನಗುಂದ ಮತಕ್ಷೇತ್ರದಲ್ಲಿ ಸಧ್ಯ ಶೇ 60 ರಷ್ಟು ಸರ್ವೇ ಕಾರ್ಯ ಮುಗಿದಿದೆ.ಆಗಷ್ಟ.21 ಸರ್ವೇ ಕೊನೆಯ ದಿನವಾಗಿದೆ ಎಂದು ಬಾಗಲಕೋಟಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಹೇಳಿದರು.ಶನಿವಾರ ಪಟ್ಟಣದ ವಿ.ಮ.ಪ್ರೌಢ ಶಾಲೆ,ತಹಶೀಲ್ದಾರ ಕಚೇರಿ ಸೇರಿದಂತೆ ವಿವಿಧ ಬೂತಗಳ ಭೌತಿಕ ಪರಿಶೀಲನೆ ನಡೆಸಿ ಬಿಎಲ್‌ಓಗಳ ಸರ್ವೇ ಕಾರ್ಯವನ್ನು ಪರಿಶೀಲಿಸಿ ಅವರೊಂದಿಗೆ ಸರ್ವೇಯ ಕುರಿತು ಮಾಹಿತಿಯನ್ನು ಪಡೆದುಕೊಂಡು ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮನೆ ಮನೆಗಳ ಸರ್ವೆಯಲ್ಲಿ ಅಂಗವಿಕಲರ ಮಾಹತಿ 17 ವರ್ಷ ವಯಸ್ಸಿನ ಯುವಕರ ಹೆಸರು ಪಡೆದು ಅವರ ಆಧಾರ ನಂಬರ ನೊಂದಣೆ ಮಾಡುವುದು ಮತ್ತು ಮರಣ ಹೊಂದಿದ ವ್ಯಕ್ತಿಗಳ ಕುರಿತು ಮಾಹಿತಿ ಮತ್ತು ಮರಣ ಪ್ರಮಾಣಪತ್ರ ಪಡೆದು ಮತದಾರ ಪಟ್ಟಿಯಿಂದ ಕೈಬಿಡುವುದು.

ಒಂದು ಕುಟುಂಬದ ವ್ಯಕ್ತಿಗಳು ಬೇರೆ ಬೇರೆ ಮತಗಟ್ಟೆಯಲ್ಲಿ ಮತದಾನ ಮಾಡುತ್ತಿದ್ದರೇ ಅಂತಹ ಮಾಹಿತಿಯನ್ನು ಪಡೆದು ಒಂದು ಕುಟುಂಬ ಒಂದು ಮತಗಟ್ಟೆಯಲ್ಲಿ ಮತದಾನ ಮಾಡಲು ಅನುಕೂಲ ಮಾಡುವ ಕಾರ್ಯವಾಗಿದೆ ಮಾಡಲಾಗುತ್ತಿದೆ.ಸರ್ವೆ ಕಾರ್ಯ ಆ.21 ಕೊನೆಯ ದಿನಾಂಕವಾಗಿದ್ದು ಅವಧಿಯನ್ನು ವಿಸ್ತರಿಸುವ ಸಾಧ್ಯತೆ ಕೂಡಾ ಇದೆ ಎಂದರು.

ಕೆಲವೊಂದು ಬಿಎಲ್‌ಓಗಳು ನಾವು ನೌಕರಿ ಮಾಡುವ ಸ್ಥಳ ಬೇರೆ ನಮಗೆ ಸರ್ವೇ ಮಾಡುವ ಸ್ಥಳ ಬೇರೆಯಾಗಿದ್ದರಿಂದ ಅಲ್ಲಿಂದ ಬಂದು ಮನೆ ಮನೆಗಳಿಗೆ ಸರ್ವೇ ಮಾಡಲು ಮತ್ತು ಉರ್ದು ಶಾಲೆಯ ಶಿಕ್ಷಕರನ್ನು ಸರ್ವೆಗೆ ಬಳಿಸಿಕೊಂಡಿದ್ದರಿಂದ ಭಾಷೆಯ ಸಮಸ್ಯೆಯಿಂದ ಇನ್ನೊಬ್ಬರ ಸಹಾಯವನ್ನು ಪಡೆದು ಸರ್ವೇ ಮಾಡುವ ಸ್ಥಿತಿ ಇದೆ ಇದರಿಂದ ಸರ್ವೇ ಕಾರ್ಯ ನಿಧಾನಗತಿಯಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಅಳಲು ತೊಡಿಕೊಂಡಾಗ ಈ ಒಂದು ಸರ್ವೇ ಮುಗಿದ ತಕ್ಷಣವೇ ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ನಿಂಗಪ್ಪ ಬಿರಾದಾರ,ಶಿರಸ್ತೆದಾರರಾದ ಈಶ್ವರ ಗಡ್ಡಿ,ಶ್ರವಣಕುಮಾರ ಮುಂಡೇವಾಡಿ,ಹನಮಂತರಾಯ ಶಿವಣಗಿ,ಕಂದಾಯ ನಿರೀಕ್ಷಕರಾದ ಲಿಂಗರಾಜ ಹುನಗುಂಡಿ,ಪಿಎಸ್‌ಐ ಚನ್ನಯ್ಯ ದೇವೂರ,ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ಕುಂಬಾರ ಸೇರಿದಂತೆ ಅನೇಕರು ಇದ್ದರು.ಬಾಕ್ಸ್ ಸುದ್ದಿ-ಮುಂಗಾರು ಮಳೆಯ ಹಿನ್ನಡೆಯಿಂದ ಬಾಗಲಕೋಟಿ ಜಿಲ್ಲೆಯಾಧ್ಯಂತ ಶೇ 40 ರಷ್ಟು ಬಿತ್ತಿದ್ದ ಬೆಳೆಯು ಹಾನಿಯಾಗುತ್ತಿರುವುದರ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ.ಈಗಾಗಲೇ ಕೃಷಿ ಸಚಿವರು ಕೂಡಾ ಬೆಳೆ ಹಾನಿ ಪರಿಹಾರದ ಕುರಿತು ಮುಂದಿನ ವಾರದಲ್ಲಿಯೇ ನಿರ್ಧಾರವಾಗುತ್ತೇ ಎನ್ನುವ ಮಾಹಿತಿಯನ್ನು ಕೂಡಾ ನೀಡುತ್ತಿದ್ದು ಮುಂದಿನ ವಾರದಲ್ಲಿ ಸರ್ಕಾರ ಬೆಳೆ ಪರಿಹಾರ ಘೋಷಿಸುವ ಸಾಧ್ಯತೆ ಇದೆ ಎಂದು. ಕೆ.ಎಂ.ಜಾನಕಿ ಜಿಲ್ಲಾಧಿಕಾರಿಗಳು ಹೇಳಿದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button