ಶ್ರೀಶಾರದಾಶ್ರಮದಲ್ಲಿ ನಗೇಂದ್ರನಾಥ ಗುಪ್ತರ – ಸ್ಮೃತಿಗಳ ಪ್ರವಚನ.
ಚಳ್ಳಕೆರೆ ಮೇ.28

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ವಿಶ್ವಗುರು ಸ್ವಾಮಿ ವಿವೇಕಾನಂದ” ಪ್ರವಚನ ಮಾಲಿಕೆಯ ಭಾಗವಾಗಿ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ನಗೇಂದ್ರನಾಥ ಗುಪ್ತರ ಸ್ಮೃತಿಗಳ ಬಗ್ಗೆ ವಿಶೇಷ ಪ್ರವಚನ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು.

ಈ ಸತ್ಸಂಗದ ಆರಂಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆದರೆ ಕುಮಾರಿ ಹರ್ಷಿತಾ ಅವರಿಂದ ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಪಠಣ ನಡೆಯಿತು. ಈ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್, ವನಜಾಕ್ಷಿ ಮೋಹನ್, ಯತೀಶ್.ಎಂ ಸಿದ್ದಾಪುರ, ಗೀತಾ ವೆಂಕಟೇಶರೆಡ್ಡಿ, ಚೇತನ್, ಋತಿಕ್, ಸಂಗೀತ, ರಶ್ಮಿ ವಸಂತ, ಸುರೇಶ್, ಶ್ರೀಪಾದ್, ಮಂಜುಳ ಉಮೇಶ್, ಕಾವೇರಿ ಸುರೇಶಯಾದವ್, ಸುಧಾಮಣಿ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ:ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.