ಜಿಲ್ಲಾಧಿಕಾರಿ ಭೇಟೆ ಸ್ಥಳ ಪರಿಶೀಲನೆ 30 ಸಾವಿರ ಆಸನದ ವ್ಯವಸ್ಥೆ – ಡಿ.ಸಿ ಗೋವಿಂದರೆಡ್ಡಿ.
ಗದಗ ಡಿ.11

ಗದಗ ಜಿಲ್ಲೆಯ ರೋಣ ತಾಲೂಕಿನ ರೋಣ ವಿಧಾನ ಸಭಾ ಮತ ಕ್ಷೇತ್ರದಲ್ಲಿ 200. ಕೋಟಿ ರೂ. ಗಳು ಅನುದಾನದಲ್ಲಿ ನಡೆಯುತ್ತಿರುವ ಶಂಕು ಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸೇರಿದಂತೆ ಹಲವು ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕಾ ಕ್ರೀಡಾಂಗಣಕೈ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಕಾರ್ಯಕ್ರಮದಲ್ಲಿ 50 ಸಾವಿರ ಜನ ಸೇರುವ ನಿರೀಕ್ಷೆ ಹೊಂದಲಾಗಿದೆ. ಈಗಾಗಲೇ 30 ಸಾವಿರ ಆಸನದ ಪೆಂಡಾಲ್ ನ್ನು ಹಾಕಲಾಗುತ್ತಿದೆ. ಇನ್ನೂ ಮಹಿಳೆಯರಿಗೆ 12 ಮತ್ತು ಪುರುಷಗೆ 18 ಊಟದ ಕೌಂಟರ್ಗಳನು ನಿರ್ಮಿಸಲು ಸೂಚಿಸಿದರು. ಜಿಲ್ಲಾಧಿಕಾರಿಗಳು ಕಾರ್ಯಕ್ರಮದಲ್ಲಿ ಜನರಿಗೆ ಕುಡಿಯುವ ನೀರಿನ ಪೂರೈಕೆ ಸರಿಯಾದ ರೀತಿಯಲ್ಲಿ ಮಾಡಬೇಕು ಎಂದು ಸೂಚನೆ ನೀಡಿದರು.

ಇನ್ನೂ ದೊಡ್ಡ ಪ್ರಮಾಣದಲ್ಲಿ ಜನ ಸೇರುವ ಕಾರಣ ವಾಹನಗಳು ಸುಗಮ ಸಂಚಾರಕ್ಕೆ ತೊಂದರೆ ಆಗ ಬಾರದು ಎಂದಾಗ ರೋಣ ಪುರಸಭೆ ಸದಸ್ಯೆ ಸಂಗನಗೌಡ ಪಾಟೀಲ್ ರವರು ನಾಲ್ಕು ಎಕರೆ ಜಮೀನಿನಲ್ಲಿ ಎಂ.ಆರ್.ಬಿ.ಸಿ ಆವರಣ ವಿ.ಎನ್ ಪಾಟೀಲ್ ಶಾಲಾ ಆವರಣ ಎಂ.ಆರ್.ಬಿ.ಸಿ ಕಾಲೋನಿಯಲ್ಲಿ ಅವಕಾಶಗಳನ್ನು ನಿಗಿಸಲು ಅವಕಾಶ ಮಾಡಿ ಕೊಡಲಾಗಿದೆ ಎಂದರು.ಇನ್ನೂ ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ಪುಚಾರ ಪಡಿಸಲು 20 ಮಳಿಗೆಗಳನ್ನು ಹಾಕಬೇಕು ಧ್ವನಿ ವರ್ಧಕ ಮೂಲಕ ಜನರಿಗೆ ಯೋಜನೆ ಮಹತ್ವವನ್ನು ತಿಳಿಸುವ ಎಲ್.ಇ.ಡಿ ಪರದೆ ಮೂಲಕವು ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.

ರೋಣ ತಹಶೀಲ್ದಾರ್ ನಾಗರಾಜ.ಕೆ ಮಾತನಾಡಿ ಸಮಾವೇಶದಲ್ಲಿ ವೇದಿಕೆ ಹಿಂಬಾಗದ ಎಲ್.ಇ.ಡಿ ಪರದೆಯನ್ನು ಹೊರತು ಪಡಿಸಿ ಬೇರೆ ನಾಲ್ಕು ಕಡೆ ನಾಲ್ಕು ಕಡೆ ಎಲ್.ಇ.ಡಿ ಪರದೆಯನ್ನು ಹಾಕುವ ವ್ಯವಸ್ಥೆ ಮಾಡಲಾಗಿದೆ ಎಂದರು. ನಂತರ ಜಿಲ್ಲಾಧಿಕಾರಿಗಳು ವಿವಿಧ ಇಲಾಖೆಗಳ ಅಧಿಕಾರಿಗಳಗೆ ಕೆಲ ಜವಾಬ್ದಾರಿಗಳನ್ನು ವಹಿಸಿದ್ದರು. ಕಾರ್ಯಕ್ರಮದ ಯಶಸ್ವಿಗೆ ಸರ್ವರೂ ಶ್ರಮಿಸಲು ಸೂಚಿಸಿದರು. ಜಿಪಂ.ಸಿಇಒ.ಭರತ. ಎಸ್.ಡಿ.ವೈ.ಎಸ್ ಪುಭುಗೌಡ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ತಾರಾಮಣೆ. ಸಿ.ಪಿ.ಐ ಎಸ್.ಎಸ್ ಬೀಳಗಿ. ಪಿ.ಎಸ್.ಐ ಪುಕಾಶ ಬಣಕಾರ್. ಆಹಾರ ವಿಭಾಗದ ಮುಖ್ಯಸ್ಥೆ ಸುವರ್ಣಾ ಜುಮೃನಕಟಿ ವೀರಣ್ಣ ಶೆಟ್ಟರ್ ವಿ .ಬಿ ಸೋಮನಕಟಮಠ. ಯೂಸುಫ್ ಇಟಗಿ ಅಪು ಗಿರಡ್ಡಿ ಸಂಗು ನವಲಗುಂದ. ಅಭಿಷೇಕ್ ನವಲಗುಂದ. ಮಲಯೈಜೃ ಮಹಾಪುರುಷ ಮಠ ಯಲಪ ಕೀರಸೂರ ಮೇಲು ರಾಮನಗೌಡ ಸೇರಿದಂತೆ ರೋಣ ಗಜೇಂದ್ರಗಡ ತಹಶೀಲ್ದಾರ್ ಮತ್ತು ಪುರಸಭೆ ಯ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಬಾಕ್ಸ್:-
ಡಿ.15 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಲಿಕ್ಯಾಪ್ಟರ್ ಮೂಲಕ ಹಲಾಪುರ ಗ್ರಾಮಕ್ಕೆ ಆಗಮಿಸಲಿದ್ದು ನಂತರ ಅವರು ಅದೇ ಹೆಲಿಕಾಪ್ಟರ್ ಮೂಲಕ ರೋಣ ಪಟ್ಟಣದ ಪೌಲ್ ಶಾಲಾ ಆವರಣಕ್ಕೆ ಬರಲಿದ್ದಾರೆ ಅಲ್ಲಿಂದ ಅವರು ವಾಹನದ ಮೂಲಕ ಸಮಾವೇಶ ಸ್ಥಳಕ್ಕೆ ಬರುವವರಿದ್ದು ಸೂಕ್ತ ಸಿದ್ಧತೆಗಳನ್ನು ಮಾಡಿಕೋಳ್ಳ ಬೇಕು ಎಂದರು.
-ಗೋವಿಂದರೆಡ್ಡಿ ಜಿಲ್ಲಾಧಿಕಾರಿ
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಎಫ್.ಗೋಗೇರಿ.ತೋಟಗುಂಟಿ.ಗದಗ