“ಗೋರಂಟಿ” ಗೆ ಯುಗಳ ಗೀತೆ ಧ್ವನಿ ಮುದ್ರಣ.
ಬೆಂಗಳೂರು ಜು.28

ರಾವಲ್ ಸಿನಿ ಫೋಕಸ್ ಅರ್ಪಿಸುವ “ಗೋರಂಟಿ ” ಬಹು ಭಾಷಾ ಸಿನೆಮಾದ ಯುಗಳ ಗೀತೆ ಧ್ವನಿ ಮುದ್ರಣ ಬೆಂಗಳೂರಿನ ಹಾರ್ಮೋನಿಕ್ ನೇಶನ್ ಸ್ಟುಡಿಯೋದಲ್ಲಿ ನಡೆಯಿತು. “ಸಾಗಬೇಡ ಕಾಲ” ಎಂಬ ಸುಂದರ ಯುಗಳ ಗೀತೆಯನ್ನು ಹಿನ್ನೆಲೆ ಗಾಯಕಿ ಅನುರಾಧಾ ಭಟ್ ಹಾಡಿದರು. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ. ಸಂಗೀತ ನಿರ್ದೇಶಕರಾದ ವಿಕಾಸ ರಜತ್, ಸಾಹಿತಿ ಮನ್ವರ್ಷಿ ನವಲಗುಂದ, ಹಾಗೂ ಚಿತ್ರದ ನಿರ್ದೇಶಕರಾದ ಮಹೇಶ್ ರಾವಲ್ ಮತ್ತು ಗೋರಂಟಿ ಚಿತ್ರ ತಂಡದ ಸದಸ್ಯರು ಉಪಸ್ಥಿತರಿದ್ದರು. ಕನ್ನಡ, ತೆಲಗು, ತಮಿಳ್ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಿಸಲಾಗುತ್ತಿರುವ ಕುತೂಹಲ ಭರಿತ ಈ ಚಿತ್ರದಲ್ಲಿ ಸಂಗೀತ ನಿರ್ದೇಶಕರಾದ ವಿ. ಮನೋಹರ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದೊಳಗೆ ಹಲವಾರು ತಿರುವುಗಳೇ ಘಟಿಸುತ್ತಾ ಹೋಗುವುದು ಹೇಗೆ ಎಂಬುದು ಗೋರಂಟಿಯಲ್ಲಿದೆ. ತಾರಾಗಣದಲ್ಲಿ ಮಹೇಶ್ ರಾವಲ್, ದಿತ್ಸಾ ರಾಯ್, ಭವ್ಯಾ, ವಿ.ಮನೋಹರ್, ಮಧುಸೂದನ್, ವೆಂಕಟರಾಜು, ಜಗದೀಶ ಕಡೂರ , ಸ್ಮೈಲ್ ಶಿವು, ಶಾಲಿನಿ , ಅನು, ರಂಗಸ್ವಾಮಿ, ಸುರೇಶ ಶೆಟ್ಟಿ, ಹೊನ್ನಶ್ರೀ ಮೊದಲಾದವರು ಅಭಿನಯಿಸುತ್ತಿದ್ದಾರೆ. ಛಾಯಾಗ್ರಹಣ ದೇವೂ, ಚಂದ್ರು ಬಂಡೆ ಸಾಹಸ, ರೆಕ್ಸ್ರಾಜು ಅವರ ನೃತ್ಯ ಸಂಯೋಜನೆಯಿದ್ದು ಹೆಸರಾಂತ ಗೀತ ರಚನೆಗಾರ ಮನ್ವರ್ಷಿ ನವಲಗುಂದ ಸಾಹಿತ್ಯ ರಚಿಸಿದ್ದಾರೆ. ವಿಕಾಸ್ ರಜತ್ ಎಂಬ ಯುವ ಸಂಗೀತ ನಿರ್ದೇಶಕರ ಸಂಗೀತ , ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ ಅವರದಿದೆ. ಕಥೆ –ಚಿತ್ರಕಥೆ- ಸಂಭಾಷಣೆ ಹಾಗೂ ನಿರ್ದೇಶನವನ್ನು ಮಹೇಶ್ ರಾವಲ್‌ರವರೇ ನಿರ್ವಹಿಸುತ್ತಿದ್ದಾರೆ. ಲತಾ ರಾವಲ್‌ರವರು ಈ ಚಿತ್ರದ ನಿರ್ಮಾಪಕರಾಗಿದ್ದಾರೆ.
*****
ವರದಿ : ಡಾ.ಪ್ರಭು ಗಂಜಿಹಾಳ
ಮೊ: ೯೪೪೮೭೭೫೩೪೬