“ಖಾತೆ ಬದಲಾವಣೆಗಾಗಿ ವರ್ಷಗಟ್ಟಲೆ ಅಲೆದಾಟ”.
ಕೊಟ್ಟೂರು ಆಗಷ್ಟ.23

ಕೊಟ್ಟೂರು ಪಟ್ಟಣ ಪಂಚಾಯಿತಿಯ ಅಧಿಕಾರಿ ವರ್ಗ ಮಾಡುವ ತಪ್ಪುಗಳಿಗೆ ಅಮಾಯಕ ಜನರು ವರ್ಷಗಟ್ಟಲೆ ಕೋರ್ಟ್ ಗೆ ಅಲೆದಾಡುವ ಪರಿಸ್ಥಿತಿ ಒದಗಿದೆ ಎಂದು ಸಾರ್ವಜನಿಕರು ಆರೋಪ !ಖಾತೆ ಬದಲಾವಣೆಗೆಂದು 45 ದಿನಗಳು ನಿಯಮವಿದೆ.ಅಂದರೆ ಇಲ್ಲಿರುವ ಕೊಟ್ಟೂರು ಪಟ್ಟಣ ಪಂಚಾಯಿತಿಯಲ್ಲಿ ತಮ್ಮ ಖಾತೆ ಬದಲಾವಣೆಗಾಗಿ ಸುಮಾರು ಎಂಟು ತಿಂಗಳು ಅಲೆದಾಟ ಅಧಿಕಾರಿಗಳ ಆಟಕ್ಕೆ ಸಾರ್ವಜನಿಕರು ಅನಾವಶ್ಯಕವಾಗಿ ಪಟ್ಟಣ ಪಂಚಾಯಿತಿಗೆ ಚಪ್ಪಲಿ ಸವೆಯುವವರೆಗೂ ಅಲೆದಾಡಿಸಿರುವ ಅಧಿಕಾರಿಗಳು ? ವರ್ಷಗಟ್ಟಲೆ ಕೋರ್ಟಿಗೆ ಅಲೆದಾಡುತ್ತಿರುವ ಸಾರ್ವಜನಿಕರ ಗೋಳು ಕೇಳುವವರು ಯಾರು? ಇಂತಹ ಸಮಸ್ಯೆಗಳು ಒಂದಾ ಎರಡಾ ನೂರಾರು ಸಮಸ್ಯೆಗಳು ತಾಂಡವಾಡುತ್ತಿದೆ.ಜನರು ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಿದ್ದಾರೆ.ಪಟ್ಟಣ ಪಂಚಾಯತಿಯವರು ತಕರಾರು ನೀಡುವಾಗ ಸಂಬಂಧಪಟ್ಟ ದಾಖಲಾತಿಗಳು ಜೊತೆಯಲ್ಲಿ ಲಗತ್ತಿಸಿ ತಕರಾರು ಅರ್ಜಿ ನೀಡುವುದು ನಿಯಮ ಇರುತ್ತದೆ.ಆದರೆ ಕೊಟ್ಟೂರು ಪಟ್ಟಣ ಪಂಚಾಯಿತಿಯಲ್ಲಿ ಒಂದು ಬಿಳಿ ಆಳಿಯಲಿ ಅರ್ಜಿ ಬರೆದು ಕೊಟ್ಟರೆ ಸಾಕು ತಕರಾರು ಅರ್ಜಿಯನ್ನು ಸ್ವೀಕರಿಸುತ್ತಾರೆ . ಯಾಕೆಂದರೆ ರಾಜಕೀಯ ಪ್ರಭಾವ ವ್ಯಕ್ತಿಗಳು ಒತ್ತಡಕ್ಕೆ ಮಣಿದು ಇರಬಹುದು ? ಇಲ್ಲವಾದರೆ ತಕರಾರು ಅರ್ಜಿ ಕೊಟ್ಟಿರುವ ಪರವಾಗಿ ಅಧಿಕಾರಿಗಳು ಇರಬಹುದು ? ಎಂದು ಕೆ ಕೊಟ್ರೇಶ್ ಚಪ್ಪರದಹಳ್ಳಿ ಪತ್ರಿಕೆಗೆ ತಿಳಿಸಿದರು.ಕೊಟ್ -1ತಕರಾರು ಅರ್ಜಿ ಸ್ವೀಕರಿಸುವುದಕ್ಕೆ ಅದರದೇ ಆದ ನಿಯಮಗಳು ಇರುತ್ತವೆ ಇವರುಗಳು ಯಾವು ನಿಯಮಗಳನ್ನು ಪಾಲಿಸದೆ ಅಧಿಕಾರಿಗಳು ಜನರನ್ನ ಅಲೆದಾಡಿಸುತ್ತಾರೆ.ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ. ಡಿಎಸ್ಎಸ್ ಸಂಘಟನೆಯ ಚಂದ್ರು ಆಗ್ರಹಿಸಿದ್ದಾರೆ. .
ತಾಲೂಕ ವರದಿಗಾರರು: ಪ್ರದೀಪ್.ಕುಮಾರ್.C. ಕೊಟ್ಟೂರು