ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ಆರೋಗ್ಯ ಇದೆ – ಡಾ. ದೇವರಾಜ್.
ತರೀಕೆರೆ ಅಕ್ಟೋಬರ್.1

ಗಾಂಧಿಜಿಯವರ ಪರಿಕಲ್ಪನೆ ಮತ್ತು ಪ್ರಧಾನ ಮಂತ್ರಿಗಳ ಪರಿಕಲ್ಪನೆ ಸ್ವಚ್ಛತೆ ಎಂದು ಡಾ. ಟಿ ಎಂ ದೇವರಾಜ್ ರವರು ಇಂದು ಸರ್ಕಾರದ ಮಾರ್ಗಸೂಚಿಯಂತೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸುತ್ತಲೂ ಪರಿಸರ ಮತ್ತು ಬಯಲು ರಂಗಮಂದಿರದ ಮೈದಾನದ ಸ್ವಚ್ಛತೆ ಗೊಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸೂಚನೆಯಂತೆ ತರೀಕೆರೆಯ ಎಲ್ಲಾ ಸಿಬ್ಬಂದಿಗಳು ಮತ್ತು ಎಲ್ಲಾ ವೈದ್ಯರು ಒಟ್ಟಿಗೆ ಸೇರಿ ಬೆಳಗ್ಗೆ 9:30 ರಿಂದ 11:30 ರವರೆಗೆ ಸ್ವಚ್ಛತೆ ಕಾರ್ಯಕ್ರಮ ಮಾಡಿರುತ್ತೇವೆ ನಮ್ಮ ಆಸ್ಪತ್ರೆ ಪ್ರತಿ ದಿನವೂ ಸ್ವಚ್ಛವಾಗಿರುತ್ತದೆ. ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ಆರೋಗ್ಯ ಇರುತ್ತದೆ ಎಂದು ಹೇಳಿದರು. ಸ್ವಚ್ಛತೆ ಕಾರ್ಯಕ್ರಮದಲ್ಲಿ ಡಾ. ಮಂಜುನಾಥ್ ಡಾ. ಶ್ರೀನಿವಾಸ್, ಡಾ. ಸಂತೋಷ್ ಕುಮಾರ್,ಡಾ. ಮಹಮ್ಮದ್ ಸಾಧಿಕ್, ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ