ಎನ್.ಇ.ಪಿ ಯನ್ನು ರದ್ದು ಮಾಡುವ ರಾಜ್ಯ ಸರ್ಕಾರದ ನಡೆ ಖಂಡಿಸಿ– ಎ.ಬಿ.ವ್ಹಿ.ಪಿ ಸಂಘಟನೆಯಿಂದ ಇಂಡಿಯಲ್ಲಿ ಬೃಹತ್ ಪ್ರತಿಭಟನೆ.

ಇಂಡಿ ಆಗಷ್ಟ.26

ದೇಶದಲ್ಲಿರುವ ಎನ್.ಇ.ಪಿ ಶಿಕ್ಷಣ ನೀತಿಯನ್ನು ಕನಾ೯ಟಕ ಸರಕಾರ ರದ್ದು ಮಾಡಲು ಆತುರದಲ್ಲಿರುವ ಸರಕಾರದ ನಡೆ ಖಂಡಿಸಿ,ಇಂದು ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಸಾವಿರಾರು ಎಬಿವಿಪಿಯ ಸಂಘಟನಾಕಾರರು ರಾಜ್ಯ ಸರ್ಕಾರದ ನೀತಿಯ ವಿರುದ್ದು ಗುಡುಗಿದರು .ಸ್ವತಂತ್ರ ಭಾರತದ ಶಿಕ್ಷಣ ಪದ್ಧತಿಯ ಆರಂಭದಿಂದಲೂ ಬ್ರಿಟಿಷ್ ವಸಾಹತುಶಾಹಿ ಶಿಕ್ಷಣ ಪದ್ಧತಿಯ ಮುಂದುವರಿದ ಭಾಗವಾಗಿದೆ. ಅದು ಜಡ್ಡು ಹಿಡಿದು ಪರಿವರ್ತನ : ರಹಿತವಾದ ಕಾಲದ್ದಾಗಿದೆ. ಭಾರತೀಯತೆಯ ಅಂಶವನ್ನು ಕಳೆದುಕೊಂಡು ಬ್ರಿಟಿಷ್ ಗುಲಾಮಗಿರಿಯ ಪಳೆಯುಳಿಕೆಯಾಗಿದೆ ಎಂದು ಮುಂತಾದ ಟೀಕೆಗಳನ್ನು ಎದುರಿಸುತ್ತಲೇ ಬಂದಿದೆ. ಆದರೆ, ಪ್ರಸ್ತುತ ಕೇಂದ್ರ ಸರ್ಕಾರವು ಈ ಕುರಿತು ಕಳೆದ ಗಂಭೀರವಾದ ನಿಲುವಿನಿಂದ ಹಾಗೂ ದೃಢ ನಿರ್ಧಾರದಿಂದ ಈ ಎಲ್ಲಾ ಟೀಕೆಗಳಿಗೆ ಉತ್ತರವಾದ ಹಾಗೂ ಈ ಕೊರತೆಗಳಿಂದ ಮುಕ್ತವಾಗಿರುವಂತಹ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP 2020) .ರೂಪಿಸಿದ್ದು ಪ್ರಶಂಸಾರ್ಹವಾಗಿದೆ, ಅಲ್ಲದೆ, ಇಡೀ ದೇಶದಲ್ಲಿ ನಮ್ಮ ಕರ್ನಾಟಕವು, ಅದನ್ನು ಮೊದಲ ಬಾರಿಗೆ 2020-2021 ರಲ್ಲಿ ಜಾರಿಗೊಳಿಸಿದ ರಾಜ್ಯವಾಗಿದೆ ಎಂಬ ಹೆಮ್ಮೆಗೂ ಪಾತ್ರವಾಗಿದೆ. ಇಂತಹ ಶಿಕ್ಷಣ ನೀತಿಯನ್ನು ಅದು ಜಾರಿಗೊಳ್ಳುತ್ತಿರುವ ಹಂತದಲ್ಲಿಯೇ ರದ್ದುಗೊಳಿಸಲು ಹೊರಟಿರುವ ಪ್ರಸಕ್ತ ಕರ್ನಾಟಕ ರಾಜ್ಯ ಸರ್ಕಾರದ ನಿರ್ಧಾರ ಶಿಕ್ಷಣ ವಿರೋಧಿಯಾದರು. ಪ್ರರ್ವಾಗ್ರಹ ಪೀಡಿತವಾದುದು, ರಾಜಕೀಯ ಪ್ರೇರಿತವಾದುದು, ರಾಜ್ಯದ ವಿದ್ಯಾರ್ಥಿಗಳ ಹಿತಕ್ಕೆ ಮಾರಕವಾದರು. ತಾರ್ಕಿಕವಾಗಿರದೆ ವಿವೇಚನಾರಹಿತವಾದುದು, ಆದ್ದರಿಂದಲೆ ಖಂಡನೀಯ.ಇದೀಗ ಜಾರಿಯಾಗಿರುವ NEI ಯನ್ನು ಏಕೆ ಉಳಿಸಿಕೊಂಡು ಮುಂದುವರಿಸಬೇಕು?NEP ಯನ್ನು ಕೇಂದ್ರ ಸರ್ಕಾರ ಕೇವಲ ತನ್ನ ಮರ್ಜಿಯಂತೆ ರೂಪಿಸಿದ್ದಲ್ಲ, ದೇಶಾದ್ಯಂತ ಶಿಕ್ಷಣ ತಂದು ವಿವಿಧ ಸ್ಥರಗಳಲ್ಲಿ ಶಿಕ್ಷಣ ರಂಗದ ಎಲ್ಲಾ ಬಾಧ್ಯಸ್ಥರ ಜೊತೆಗೆ ನಿರಂತರ ಸಂವಹನ ಮಾಹಿತಿ ವಿನಿಮಯ ಚರ್ಚೆ ನಡೆಸಿ ತಯಾರಿಸಿದ ಕರಡಿನ ಆಧಾರದಲ್ಲಿ ಈ ನೀತಿಯನ್ನು – ರೂಪಿಸಿರುವುದಾಗಿದೆ.

(ಈಗ ಇದನ್ನು ವಿರೋಧಿಸುವವರು ಆಗಿನ ಚಿಂತನ – ಮಂತನದ ಸಂದರ್ಭದಲ್ಲಿ ತಮ್ಮ ಅಭಿಪ್ರಾಯಗಳನ್ನೇಕೆ ನೀಡಿರಲಿಲ್ಲ. 1) ಈ NEP ಯು ಮೊದಲ ಬಾರಿಗೆ ವಿದ್ಯಾರ್ಥಿ ಕೇಂದ್ರಿತವಾಗಿದ್ದು, ಬಹು ಶಿಸ್ತೀಯ ಅಧ್ಯಯನಕ್ಕೆ, ಸೌಶಲ್ಯಾಧಾರಿತ ಶಿಕ್ಷಣಕ್ಕೆ, ಭಾರತದ ಬಹುಭಾಷಿಕ ಹಾಗೂ ಸಾಂಸ್ಕೃತಿಕ ಬಹುತ್ವಕ್ಕೆ, ಪ್ರಾಂತೀಯ-ಸ್ಥಳೀಯ ಭಾಷೆಗಳ ಅಭಿವೃದ್ಧಿಗೆ ಸೂಕ್ತ ಮಾನ್ಯತೆ ಹಾಗೂ ಪ್ರಾಮುಖ್ಯ ನೀಡಿ ರೂಪಿಸಿಲುವಂತಹದಾಗಿದೆ.SEP ಯನ್ನು ವಿರೋಧಿಸುವವರಿಗೆ ನಮ್ಮ ಪ್ರಶ್ನೆಗಳು.NEP ಬಗೆಗಿನ ವಿರೋಧ ಬಕ್ಕಾಗಿ? ಯಾವ ಶೈಕ್ಷಣಿಕ ಹಾಗೂ ತರ್ಕಬದ್ಧ ಕಾರಣಗಳಿಗಾಗಿ ಈಗ ಜಾರಿಯಲ್ಲಿರುವ ಓಯ ಬಗ್ಗೆ, ಅವನ ಸಾಧಕ-ಭಾದಕಗಳ ಬಗ್ಗೆ ಸೂಕ್ತ ವೇದಿಕೆಗಳಲ್ಲಿ ಚರ್ಚಿಸದೆ, ಆ ಕುರಿತು ಶಿಕ್ಷಣ ತಜ್ಞರ ಸಮನಾಥ್, ನಡೆಸಿ ಅಭಿಪ್ರಾಯ ಸಂಗ್ರಹಿಸುವ ಪ್ರಯತ್ನ ಮಾಡದೆ ಅದರ ರದ್ದತಿಯ ಘೋಷಣೆ ಅದೆಷ್ಟು ಸರಿ.NIP ಯ ರದ್ದತಿ, ರಾಜಕೀಯ ಸೇಡುತೀರಿಸುತ್ತಿರುವ ಅಸ್ತ್ರವಾಗಿದೆಯೇ ? ಹಾಗಿಲ್ಲವಾದಲ್ಲಿ ಅದನ್ನು ರದ್ದುಗೊಳಿಸುವ ತಿರ್ಮಾನವನ್ನು ಮೊದಲೇ ಪಟಿಸಿ ಆನಂತರ ರಾಜ್ಯದ ಉಪಕುಲಪತಿಗಳ ಸಭೆ ಕರೆದು ಅಭಿಪ್ರಾಯ ಕೇಳುವುದು. (ವ್ಯಕ್ತಿಯೋರ್ವನಿಗೆ ಮೊದಲೇ ಶಿಕ್ಷೆ ವಿಧಿಸಿ ಆನಂತರ ಆತನ ಅಪರಾಧಗಳೇನು ಎಂದು ಹುಡುಕುವ ಪ್ರಯತ್ನ ಮಾಡಿದಂತಲ್ಲವೇ ?)”ಚುನಾವಣಾ ಪ್ರಣಾಳಿಕೆಯಲ್ಲಿಯೇ NEP ರದ್ದತಿ ಬಗ್ಗೆ ಹೇಳಿದ್ದೇವೆ ಎನ್ನುವವರು ಯಾವ ಯಾವ ಶಿಕ್ಷಣ ತಜ್ಞರ ಸಭೆಯಲ್ಲಿ ಈ ಕುರಿತು ಚರ್ಚಿಸಿತೀರ್ಮಾನ ಕೈಗೊಂಡಿರುವಿರ?NEP ಆಧಾರದ ಶಿಕ್ಷಣದಲ್ಲಿ, ಐ.ಐ.ಟಿ, ಐ.ಐ.ಎಂ, ಐ.ಐ.ಎಸ್ ಸಿ, ಕೇಂದ್ರೀಯ ವಿ.ವಿಗಳು ಇಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ದೇಶದ ಎಲ್ಲೆಡೆಯ ವಿದ್ಯಾರ್ಥಿಗಳಿಗೆ ಮುಂಬರುವ ದಿನಗಳಲ್ಲಿ, ಶಿಕ್ಷಣ ದೊರೆಯಲಾರಂಭಿಸಿದಾಗ ಕರ್ನಾಟಕದ ವಿದ್ಯಾರ್ಥಿಗಳು, ಎಲ್ಲಿ ಹೋಗಬೇಕು ಏನಾ ಮಾಡಬೇಕು? ಅವರ ಸ್ಥಿತಿ ತ್ರಿಶಂಕುವಿನ ಸ್ಥಿತಿಯೇ?NEP ರದ್ದತಿಯ ನಿಲುವು ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲೆಗೆ ದುಡುವುದಿಲ್ಲವೇ?ಎಲ್ಲಕ್ಕಿಂತ ಮುಖ್ಯವಾಗಿ, NEP ಯನ್ನು ರದ್ದುಗೊಳಿಸುವನೆಂದು ಹೇಳಿಕೊಳ್ಳುತ್ತಿರುವವರು ಅದನ್ನು ರೂಪಿಸಿದವರ?ಜೊತೆಯಲ್ಲಿ ಚರ್ಚಿಸಿ –ನಂತರ ತಿರ್ಮಾನಿಸುವ ಸವಾಲನ್ನೇಕ ಸ್ವೀಕರಿಸುತ್ತಿಲ್ಲ?ಆಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕರ್ನಾಟಕದ ಆಗ್ರಹಕರ್ನಾಟಕದ ಪ್ರಸಕ್ತ ರಾಜ್ಯ ಸರ್ಕಾರವು ರಾಜಕೀಯ ಪ್ರೇರಿತ ಸಂಕುಚಿತತೆಗಳಿಗೆ ಒಳಗಾಗದೆ, ಶಿಕ್ಷಣವನ್ನು ರಾಜಕೀಯ ಸ್ವಾರ್ಥಸಾಧನೆಯ ವಸ್ತುವಾಗಿಸದೆ.

ಈಗಿನ NEP ಯನ್ನು ಅದರ ಗುಣಾಧಾರದಲ್ಲಿ ವಿರುದ್ಧ ಶೈಕ್ಷಣಿಕ ದೃಷ್ಟಿಯಿಂದ ಪರಾಮರ್ಶನ ನಡೆಸಬೇಕೆಂದು, ಅದರಲ್ಲಿ ವಾಸ್ತವಿಕವಾಗಿಯೂ ಸಣ್ಣ-ಪುಟ್ಟ ಕೊರತೆಗಳು ಹಾಗೂ ದೋಷಗಳು ಕಂಡು ಬಂದಲ್ಲಿ ಅವುಗಳನ್ನು ವಿದ್ಯಾರ್ಥಿಗಳ ಹಿತದ ಹಿನ್ನೆಲೆಯಲ್ಲಿ ಸರಿಪಡಿಸಿಕೊಂಡು NEP ವಿರೋಧದ ತನ್ನ ನಿಲುವನ್ನು ಕೈಬಿಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ರಾಜ್ಯ ಸರ್ಕಾರವನ್ನು ಪ್ರತಿಭಟನೆಯ ಮೂಲಕ ಆಗ್ರಹಿಸಿ ಮಾನ್ಯ ತಹಶೀಲ್ದಾರ್ ಇಂಡಿ ಇವರಿಗೆ ಮನವಿಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಎಬಿವಿಪಿಯ ತಾಲೂಕಾ ನಗರ ಕಾಯ೯ದಶಿ೯ಯಾದ ಸಚೀನ ಧಾನಗೊಂಡ .ಈರಣ್ಣ ಸಿಂದಗಿ.ಸಮಥ೯ ಗಾಯಕವಾಡ.ವಿಶಾಲ ಸಿಂಧೆ.ಅಭಿಜೀತ ಬಿರಾದಾರ.ಅಂಬಣ್ಣ ಪೂಜಾರಿ.ಸಿದ್ಧಾರಾಮ ನಾಯ್ಕೋಡಿ.ಪರಮೇಶ್ವರ ಮುಧೋಳ.ಚಂದ್ರಕಾಂತ ಕಾಂಬಳೆ.ಇತರರು ಭಾಗವಹಿಸಿದರು.

ತಾಲೂಕ ವರದಿಗಾರರು: ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button