ಕೆ.ಡಿ.ಎಸ್.ಎಸ್ ತಾಲೂಕ ವಿದ್ಯಾರ್ಥಿ ಘಟಕದ ಸಂಚಾಲಕರಾಗಿ — ಸಚಿನ್ ತಳಕೇರಿ ಆಯ್ಕೆ.
ಇಂಡಿ ಆಗಷ್ಟ.27

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿದ್ಯಾರ್ಥಿ ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಭೆ ಜರುಗಿತು.

ಈ ಸಭೆಯಲ್ಲಿ ತಾಲೂಕಾ ಸಂಚಾಲಕರನ್ನಾಗಿ ಸಚೀನ .ದ್ಯಾ. ತಳಕೇರಿ ಇವರನ್ನು ಸವ೯ಸದಸ್ಯರ ಬಹುಮತದಿಂದ ಆಯ್ಕೆ ಮಾಡಲಾಯಿತು ಎಂದು ಕೆ.ಡಿ.ಎಸ್.ಎಸ್.ತಾಲೂಕಾ ಅಧ್ಯಕ್ಷರಾದ ಶ್ರೀ ಶಿವಾನಂದ ಮೂರಮನ ಅವರು ಆದೇಶ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷರಾದ ಶಿವಾನಂದ ಮೂರಮನ. ಬೆಳಗಾವಿ ವಿಭಾಗದ ಸಂಚಾಲಕರಾದ ವಿನಾಯಕ ಗುಣಸಾಗರ .ರಮೇಶ ಆಸಂಗಿ ಬಾಬು ಗುಡುಮಿ ಇತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ