ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಿಕೆ ಬಹಳ ಮುಖ್ಯ — ಎಸ್.ಬಿ.ಚಳಗೇರಿ.
ಹುನಗುಂದ ಆಗಷ್ಟ.27

ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅವಶ್ಯ.ಸೋಲು-ಗೆಲುವನ್ನು ಬದಿಗಿಟ್ಟು ಕ್ರೀಡಾ ಮಾನೋಭಾವದಿಂದ ಭಾಗವಹಿಸಬೇಕು ಎಂದು ವ್ಹಿ.ಎಮ್.ಎಸ್.ಆರ್.ವಿ ವಸ್ತ್ರದ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಲೆಫ್ಟಿನೆಂಟ್ ಎಸ್.ಬಿ ಚಳಗೇರಿ ಹೇಳಿದರು.ಪಟ್ಟಣದ ವ್ಹಿ.ಎಮ್.ಎಸ್.ಆರ್.ವಿ ವಸ್ತ್ರದ ಪದವಿ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಕ್ರೀಡೆಯಿಂದ ಪರಸ್ಪರ ಭಾವೈಕ್ಯತೆ ಸಾಮರಸ್ಯ ಭಾವ ಬೆಳೆಯುತ್ತದೆ.ಆಟೋಟಗಳಲ್ಲಿ ಭಾವಹಿಸುವದು ಒಂದು ಹೆಮ್ಮೆ.ನಿಜಕ್ಕೂ ಕ್ರೀಡೆಗಳು ನಮ್ಮ ಆರೋಗ್ಯ ಭರಿತ ಸಂಪತ್ತಿನ ಕಣಜಗಳಾಗಿವೆ ಕ್ರೀಡೆಯಲ್ಲಿ ಭಾಗವಹಿಸುವದರಿಂದ ವಿದ್ಯಾರ್ಥಿಗಳಿಗೆ ಏಕಾಗ್ರತೆ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿವೆ.ವಿದ್ಯಾರ್ಥಿಗಳು ಯಾವಾಗಲೂ ಧೈರ್ಯದಿಂದ ಇರಬೇಕು.ಸೋಲು ಮತ್ತು ಗೆಲವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆಯನ್ನು ಹೊಂದಿರಬೇಕು.ಗೆಲ್ಲುವ ಮನಸ್ಸು ಗೆಲುತ್ತದೆ.ಸೋಲುವ ಮನಸ್ಸು ಸೋಲುತ್ತದೆ.ನಾನು ಹುಟ್ಟಿದೆ ಗೆಲ್ಲುವುದಕ್ಕಾಗಿ ಎಂಬ ದೃಢ ನಿರ್ಧಾರದಿಂದ ಸತತ ಪ್ರಯತ್ನ ಮಾಡಿದರೆ ಜೀವನದಲ್ಲಿ ನಿಗಧಿಪಡಿಸಿಕೊಂಡ ಗುರಿಯನ್ನು ತಲುಪುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.ಪದವಿ ಪೂರ್ವ ಪ್ರಾಚಾರ್ಯ ಎಚ್.ಎಸ್. ಬೋಳಿ ಶೆಟ್ಟರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ಯಶಸ್ವಿಯಾಗಿ ಗುರಿಮುಟ್ಟಲು ಸಾಧ್ಯ ಎಂದರು.ಐಕ್ಯೂಎಸಿ ಸಂಯೋಜಕರಾದ ಡಾ.ಎಸ್. ಆರ್ ಗೋಲಗೊಂಡ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ ಕ್ರೀಡೆ ಹಾಗೂ ಎನ್. ಸಿ.ಸಿ.ಯಲ್ಲಿ ಭಾಗವಹಿಸುವದರಿಂದ ಉತ್ತಮ ಆರೋಗ್ಯ ಮತ್ತು ಸರ್ವಾಂಗೀಣ ಬೆಳವಣಿಗೆ ಪೂರಕವಾಗಿರುತ್ತದೆ ಎಂದರು.ಈ ಸಂದರ್ಭದಲ್ಲಿ ಡಾ.ತಿಪ್ಪೇಸ್ವಾಮಿ,ಡಾ. ಪರಶುರಾಮ ಹಾದಿಮನಿ,ಪ್ರೊ. ವ್ಹಿ.ಪಿ. ರಾಯರ, ಪ್ರೊ.ಬಿ.ಎಸ್.ಹೊಸಮನಿ,ವಿಶ್ವವಿದ್ಯಾಲಯದ ಕ್ರೀಡಾಪಟುಗಳಾದ ಕು.ಮಹಾಂತೇಶ ಬೆಳ್ಳಿಹಾಳ, ಕು.ಮಹಾಂತೇಶ ಸಜ್ಜನ ಉಪಸ್ಥಿತರಿದ್ದರು.ಡಾ.ಎಸ್.ಆರ್.ನಾಗಣ್ಣವರ ನಿರೂಪಿಸಿ,ಪ್ರೊ. ಬಿ.ಎ.ಕಂಠಿಯವರು ವಂದಿಸಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ