ವಾತ್ಸಲ್ಯದ ರಕ್ಷಾ ಬಂಧನ…

ನೂಲ ಹುಣ್ಣಿಮೆಯ ಪವಿತ್ರ ವಿಶೇಷ ದಿನ
ಸಹೋದರರು ನೆನಪಿಗೆ ಬರುತಾರ ಈ ಸುದಿನ
ಸಹೋದರಿಯರ ಖುಷಿಗೆ ಮಿತಿಯೇ ಇಲ್ಲ ಈ
ದಿನ
ಮನದ ಭಾವನೆಗೆ ಜೀವ ತುಂಬುವ ರಕ್ಷಾ
ಬಂಧನ..
ಕಟ್ಟುವ ರಾಖಿ ಚಿನ್ನದ್ದಾದರೇನು
ಬೆಳ್ಳಿಯದ್ದಾದರೇನು
ಪ್ರೀತಿ ವಾತ್ಸಲ್ಯ ತುಂಬಿರುವ ನೂಲುದಾರ
ಹೆಚ್ಚಲ್ಲವೇನು
ತವರಿಗೆ ಓಡಿ ಬರುವ ಸಹೋದರಿಯ ಕಂಡೆನು
ಅವಳ ಕರುಣೆ ಮಮತೆ ಕಾಳಜಿಗೆ
ಮೌನಿಯಾದೆನು..
ರಾಖಿಯ ಕಟ್ಟುವ ಆ ಸುಮದುರ ಘಳಿಗೆಯಲಿ
ತಾಯಿಯ ಕಂಡೆನೂ ಸಹೋದರಿಯ
ಮುಖದಲಿ
ಸಂಬಂಧದ ಜವಾಬ್ದಾರಿ ಹೆಚ್ಚಿಸಿದಳು ನನ್ನಲಿ
ಕಾಲಮುಗಿದು ಋಣಮುಟ್ಟಿಸುವೆನೆಂದು
ಬೇಡಿದೆನು ಅವಳಲಿ..
ಸಹೋದರನ ಎರಡನೆಯ ತಾಯಿ ಸಹೋದರಿ
ಸಹೋದರಿಗೆ ದೇವರ ಸಮಾನ ಸಹೋದರ
ಭೂಲೋಕದ ಪವಿತ್ರ ಸಂಬಂಧ
ಸಹೋದರಿ-ಸಹೋದರ
ಸೂರ್ಯ ಚಂದ್ರರಂತೆ ಈ ಸಂಬಂಧಗಳು
ಅಜರಾಮರ..
ಹಣೆಗೆ ಕುಂಕುಮವಿಟ್ಟು ನನಗೆ ಕಾವಲಿರು
ಎಂದಳು
ರಾಖಿಯ ಕಟ್ಟಿ ನೀ ನನಗೆ ಶ್ರೀರಕ್ಷೆ ಎಂದಳು
ತಬ್ಬಿಕೊಂಡು ನನ್ನನ್ನು ತಬ್ಬಲಿ ಮಾಡಬೇಡ
ಎಂದಳು
ಸಿಹಿಯ ತಿನಿಸಿ ನಿನ್ನ ಬಾಳು ಸಿಹಿಯಾಗಿರಲಿ
ಎಂದಳು
ಶ್ರೀ ಮುತ್ತು.ಯ.ವಡ್ಡರ
(ಶಿಕ್ಷಕರು)
ಬಾಗಲಕೋಟ
MOB-9845568484