ಮಳೆಯ ಹಾಹಾಕಾರಕ್ಕೆ ಆಕಾಶಕ್ಕೆ ಮುಖ ಮಾಡಿದ ರೈತ-ಕೂಡ್ಲಿಗಿ ತಾಲೂಕನ್ನು ಬರಪೀಡಿತ ಪ್ರದೇಶವನ್ನಾಗಿ ಘೋಷಿಸಲು ರೈತರಿಂದ ಒಕ್ಕೊರಲು ಆಗ್ರಹ.
ಕೂಡ್ಲಿಗಿ ಆಗಷ್ಟ.28

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಬಿತ್ತನೆ ಮಾಡಿರುವಂತಹ ರೈತರು ಮೂರು ತಿಂಗಳ ಬೆಳೆಗಳು ಬೆಳೆದಿದ್ದು ಫಲಗಳು ಕೈಗೆ ಸಿಗುವಂತ ಸಂದರ್ಭದಲ್ಲಿ ಬೆಳೆದಂತ ಫಲಗಳ ಮೆಕ್ಕೆಜೋಳ, ಜೋಳ,ರಾಗಿ, ಸಜ್ಜೆ, ನವಣೆ, ಶೇಂಗಾ, ಮೆಣಸಿನಕಾಯಿ, ಟಮೋಟೊ, ಈರುಳ್ಳಿ, ಜವಳಿ, ಬದನೆ ಕಾಯಿ, ಬೆಂಡೆಕಾಯಿ, ತೊಗರಿ, ಹೀಗೆ ಅನೇಕ ಮುಂಗಾರು ಬೆಳೆಗೆ ಬಿತ್ತಿದಂತ ಬಿತ್ತನೆಯ ಫಲಗಳು ಹಾಲು ತುಂಬಿದ ಕಾಳುಗಳಾಗಿ ಬೆಳೆದಿದ್ದು ಬೆಳೆದ ಫಲಗಳಿಗೆ ಸಕಾಲಕ್ಕೆ ಮಳೆ ಬರದೆ ನೀರಿನ ತೇವಾಂಶವಿಲ್ಲದೆ ಬತ್ತಿ ಒಣಗಿರುವ ಬೆಳೆಗಳು ಮತ್ತೆ ಕೂಡ್ಲಿಗಿ ತಾಲೂಕಿಗೆ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ರೈತರ ಬದುಕು ಬಿತ್ತನೆ ಮಾಡಿರುವ ಬೆಳೆಗಳ ಮೇಲೆ ಅವಲಂಬಿತವಾಗಿರುವ ರೈತರ ಕುಟುಂಬಗಳು ವರ್ಷಪೂರ್ತಿ ಊಟಕ್ಕೂ ಜೀವನೋಪಾಯಕ್ಕೂ ಸಾಲ ಮಾಡಿ ಬಿತ್ತನೆ ಮಾಡಿರುವ ಬೆಳೆಗಳು ಫಲ ಸಿಗದೇ ಈ ವರ್ಷವೂ ರೈತರು ಸಾಲದ ಸಂಕಷ್ಟಕ್ಕೆ ಒಳಗಾಗಿದ್ದಾರೆ, ಈ ಕಷ್ಟಗಳನ್ನು ಹರಿತ ರೈತ ತುಂಬಾ ಕಷ್ಟವಾಗುತ್ತದೆ ಎಂದು ತಾಲೂಕಿನ ರೈತರು ತಮ್ಮ ತಮ್ಮ ಅಳಲನ್ನು ನಮ್ಮ ಸುದ್ದಿ ವಾಹಿನಿಯೊಂದಿಗೆ ಹಂಚಿಕೊಂಡಿದ್ದಾರೆ . ಕೂಡ್ಲಿಗಿ ತಾಲೂಕಿನಲ್ಲಿ ಜಮೀನುಗಳಿಗೆ ಬಿತ್ತನೆ ಮಾಡಿರುವ ರೈತರಿಗೆ ಬಿತ್ತಿದ ಬೆಳೆಗೆ ಸಮಯಕ್ಕೆ ಸರಿಯಾಗಿ ಮಳೆ ಬರದೇ ಬೆಳೆಗಳು ಬೆಳೆದು ಒಣಗುತ್ತಿರುವ ಫಲಗಳನ್ನು ನೋಡಿ ರೈತ ಆಕಾಶವನ್ನು ನೋಡುತ್ತಾ ಬಿತ್ತನೆ ಮಾಡಿದಂತಹ ಫಲ ಕೈಗೆ ಸಿಗುವುದಿಲ್ಲ ಎಂಬ ಸತ್ಯವನ್ನು ಅರಿತು ಮನಸ್ಸನ್ನು ಬರಡು ಮಾಡಿಕೊಂಡು ನಲುಗಿದ್ದಾನೆ, ಕೆಲವು ಕಡೆ ಬೆಳೆದ ಬೆಳೆಗಳನ್ನು ಕಾಡು ಪ್ರಾಣಿಗಳ ಕರಡಿ ಮತ್ತು ಕಾಡುಹಂದಿಗಳ ಆಹಾರಕ್ಕೆ ಹಾಗೂ ತುಳಿತಕ್ಕೆ ಸಂಪೂರ್ಣವಾಗಿ ಹಾಳಾದರೆ ಇನ್ನೊಂದು ಕಡೆ ಮುಂಗಾರು ಮಳೆಗೆ ಬಿತ್ತನೆ ಮಾಡಿದಂತಹ ಎಲ್ಲಾ ರೈತರ ಜಮೀನುಗಳ ಬೆಳೆಗಳ ಕುರಿತು ಅಧಿಕಾರಿ ವರ್ಗದವರಿಗೆ ತಿಳಿಸಿದರು, ಹಾಗೂ ಸುಮಾರು ದಿನಳಿಂದ ಪತ್ರಿಕೆಗಲ್ಲಿ ಸುದ್ದಿ ಪ್ರಕಟವಾದರೂ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸದೇ ಕಾರಣ ತಿಳಿಸುತ್ತಿಲ್ಲ , ಆದ್ದರಿಂದ ಮಾನ್ಯ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಮಾನ್ಯ ಕೂಡ್ಲಿಗಿ ಕ್ಷೇತ್ರದ ಶಾಸಕರು ನಮ್ಮ ಕಷ್ಟಗಳನ್ನು ಮನಗೊಂಡು ನಮ್ಮ ತಾಲೂಕಿನಲ್ಲಿ ಬೆಳೆ ನಷ್ಟದಿಂದ ನಲುಗಿರುವ ರೈತರ ಸಂಕಷ್ಟಗಳಿಗೆ ಸರ್ಕಾರದಿಂದ ಪರಿಹಾರ ಕೊಡಬೇಕು ಎಂದು ರೈತರ ಬೇಡಿಕೆಯಾಗಿದೆ,
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ