ಪೌರ ಕಾರ್ಮಿಕರಿಗೆ ಸ್ವಂತ ಸೂರು ನಿರ್ಮಿಸಿ ಕೊಡಲಾಗುವುದು — ಎಚ್ ಪ್ರಶಾಂತ್.
ತರೀಕೆರೆ ಆಗಷ್ಟ.29

ಪುರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಸರ್ಕಾರದ ಗೃಹ ಭಾಗ್ಯ ಯೋಜನೆ ಅಡಿ ಸ್ವಂತ ಸೂರು ನಿರ್ಮಿಸಿ ಕೊಡಲಾಗುವುದು ಎಂದು ಪುರಸಭಾ ಮುಖ್ಯ ಅಧಿಕಾರಿ ಹೆಚ್ ಪ್ರಶಾಂತ್ ರವರು ಸುದ್ದಿಗಾರರಿಗೆ ತಿಳಿಸಿದರು. ಒಟ್ಟು 16 ಜನ ಫಲಾನುಭವಿಗಳಿಗೆ ಈ ಸೌಲಭ್ಯ ಸಿಗಲಿದೆ ಪ್ರತಿ ಘಟಕಕ್ಕೆ ಸರ್ಕಾರದಿಂದ ತಲಾ 7.5 ಲಕ್ಷ ರೂ ಮಂಜೂರಾತಿಯಾಗಿದೆ. 2020ರಲ್ಲಿ ಕಾಮಗಾರಿ ಪ್ರಾರಂಭಗೊಂಡಿದ್ದು,
ಕೊರೋನಾದಿಂದ ಮತ್ತು ಅನುದಾನದ ಕೊರತೆಯಿಂದ ಸ್ಥಗಿತಗೊಂಡಿದ್ದ ಕಾಮಗಾರಿ ಪ್ರಾರಂಭಗೊಂಡಿದ್ದು ಮೊದಲನೇ ಹಂತದ ಕೆಲಸ ಮುಗಿದಿದ್ದು, ಈಗ ಗುತ್ತಿಗೆದಾರರಿಗೆ ನೋಟಿಸು ನೀಡಿ ಕೆಲಸ ಪ್ರಾರಂಭವಾಗಲಿದೆ, ಎರಡು ತಿಂಗಳೊಳಗೆ ಕಾಮಗಾರಿ ಮುಗಿಯುತ್ತದೆ. ಈಗಾಗಲೇ ಕಾಮಗಾರಿಯು ಕೊನೆಯ ಹಂತದಲ್ಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪುರಸಭಾ ಅಭಿಯಂತರರಾದ ಬಿಂದು, ಹಾಗೂ ಪೌರ ಸೇವಾ ನೌಕರರ ಸಂಘದ ಅಧ್ಯಕ್ಷರು ಮತ್ತು ವಸತಿ ಯೋಜನೆಗಳನ್ನು ನಿರ್ವಹಿಸುತ್ತಿರುವ ಗುಮಾಸ್ತರಾದ ಬಿಕೆ ಉಮೇಶ್ ರವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ