ಮುಂಗಾರು ಹಂಗಾಮಿನ ಮಳೆ ನಂಬಿ ಸಾವಿರಾರು ರೈತರ ಬೆಳೆ ಹಾಳು.

ಕೊಟ್ಟೂರು ಆಗಷ್ಟ.29

ತಾಲೂಕಿನಾದ್ಯಂತ ರೈತರು ಮುಂಗಾರು ಹಂಗಾಮಿನ ಮಳೆ ಆಶ್ರಿತ ನಂಬಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ  ರೈತರ ಹೊಲದಲ್ಲಿ ಬಿತ್ತನೆ ಮಾಡಿದ್ದು ಮಳೆ ಬಾರದೇ ರೈತರು ಬಿತ್ತನೆ ಮಾಡಿದ ಮೆಕ್ಕೆಜೋಳ, ಜೋಳ, ಸಜ್ಜೆ,ಶೇಂಗಾ, ರೈತ ಬೆಳೆಯುವ ಅವಲಂಬಿತ ಬೆಳೆಗಳು ಮಳೆ ಬಾರದೆ ನೀರಿಲ್ಲದೆ ಸಂಪೂರ್ಣವಾಗಿ ಒಣಗಿ ಹೋಗಿದ್ದು ರೈತನಿಗಲ್ಲದೆ ಇದರಿಂದ ರೈತರು ಮುಗಿಲು ನೋಡುವಂತಾಗಿದೆ. ಕಳೆದ  ಒಂದು ತಿಂಗಳಿನಿಂದ ಮಳೆ ಇಲ್ಲದೆ ರೈತರು ತಾವು ಬಿತ್ತಿದ್ದ ಬೆಳೆಗಳನ್ನು ಕಿತ್ತು ದನ ಕರುಗಳಿಗೆ ಮೇವಾಗಿ ಬಳಸಲು ಮುಂದಾಗಿದ್ದು ರೈತರ ಗೋಳು ಕೇಳುವರು ಯಾರು..?ಸಮಸ್ಯೆ ಈ ಬಾರಿ ತಾಲೂಕಿನಾದ್ಯಂತ ಕುರಿ, ಮೇಕೆ, ಜಾನುವಾರಿಗಳಿಗೂ ಸಹ ಮೇವು ಕಾಳು ಕಡಿಲ್ಲದೆ, ಜನರಿಗೂ ಊಟಕ್ಕೂ ಜೀವನೋಪಾಯಕ್ಕು  ಸಂಕಷ್ಟ ಎದುರಾಗಿದೆ.ಪ್ರತಿ ಎಕರೆ ಬಿತ್ತನೆ ಮಾಡಲು ಬೀಜ, ಗೊಬ್ಬರ, ಕೂಲಿ ಸೇರಿದಂತೆ ಪ್ರತಿ ಎಕರೆ ಬಿತ್ತನೆ ಮಾಡಲು ೧೫ರಿಂದ ೨೦ ಸಾವಿರ ರೂಪಾಯಿ ವೆಚ್ಚ ಮಾಡಲಾಗಿದೆ. ಈಗ ಮಳೆ ಕೈಕೊಟ್ಟು ಬೆಳೆದ ಬೆಳೆಗಳು ಕೈಗ ಸಿಗದಂತಾಗಿದ್ದು, ಮಾಡಿದ ಸಾಲವನ್ನು ಹೇಗೆ ತೀರಿಸಬೇಕು ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ಕೊಳವೆ ಬಾವಿಯಿಂದ ನೀರು ಬಿಟ್ಟು ಇರುವಷ್ಟು ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲು ಹೆಣಗಾಡುತ್ತಿರುವ ರೈತರಿಗೆ ನಿರಂತರ ವಿದ್ಯುತ್ ಕಡಿತ ದುಸ್ವಪ್ನವಾಗಿ ಕಾಡುತ್ತಿದೆ.ಚಪ್ಪರದಹಳ್ಳಿ,ಕೆ ಅಯ್ಯನಹಳ್ಳಿ, ಹಾರಳು, ಮರೂರು, ಕನ್ನಕಟ್ಟೆ , ನಾಗರಕಟ್ಟೆ, ದೂಪ್ಪತಹಳ್ಳಿ, ಕಂದಗಲ್ ,ತಿಮ್ಲಾಪುರ ,ಗಜಪುರ, ಅಂಬಳಿ, ಅಲಬೂರು ಕೊಂಗಳಿ,ಉಜ್ಜಿನಿ, ತೂಲಹಳ್ಳಿ, ಬೆನಕಹಳ್ಳಿ, ಬೈರದೇವರಗುಡ್ಡ, ಕಾಳಾಪುರ, ನಾಗೇನಹಳ್ಳಿ, ಬೆಳದರಿ, ಮಂಗಾಪುರ, ನಿಂಬಳಗೆರೆ, ಗ್ರಾಮಗಳಲ್ಲಿ ಬಿತ್ತಿದ ಮೆಕ್ಕಜೋಳಗಳು ಸಂಪೂರ್ಣಣವಾಗಿ ಒಣಗಲಾರಂಭಿಸಿವೆ.ಇದರಿಂದ ಹೊಲದಲ್ಲಿನ ಉಳಿದಿರುವ ಅಲ್ಪ ಸ್ವಲ್ಪ ಫಸಲನ್ನು ಕಿತ್ತು ದನ ಕರುಗಳಿಗೆ ಮೇವಾಗಿ ಸಂಗ್ರಹ ಮಾಡಲು ಮುಂದಾಗಿದ್ದಾರೆ.ಆದ್ದರಿಂದ ಕಾಂಗ್ರೆಸ್ ಸರ್ಕಾರವು  ಕೊಟ್ಟೂರು ತಾಲೂಕಿನ ರೈತರ ಹಿತ ಕಾಯುವ ಕರ್ತವ್ಯ ನಿಮ್ಮದಾಗಿದೆ ಆದ್ದರಿಂದ  ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಮರುಳಸಿದ್ದಪ್ಪ, ಕೆ ಎಸ್ ಜಯಪ್ರಕಾಶ್ ನಾಯ್ಕ್, ಆಗ್ರಹಿಸಿದ್ದಾರೆ.ಕೋಟ್-1ರೈತರು ಲಕ್ಷಾಂತರ ರೂಪಾಯಿ ಸಾಲ ಮಾಡಿ ಬಿತ್ತನೆ ಮಾಡಿದ್ದ ಬೆಳೆಗಳು ಮಳೆ ಇಲ್ಲದೆ ಒಣಗುತ್ತಿವೆ. ಅದ್ದರಿಂದ ತಾಲ್ಲೂಕುನ್ನು ಬರ ಪೀಡಿತ ಎಂದು ಘೋಷಣೆ ಮಾಡಿ, ರೈತರ ನೆರವಿಗೆ ಸರ್ಕಾರ ಬರಬೇಕು.ಎಂದು ಕೆ ಹಾಲೇಶ್ ಬತ್ತನಹಳ್ಳಿ,ಹೇಳಿದರು. ಎಂದು ಪತ್ರಿಕಾ ಪ್ರಕಟಣೆ ಮೂಲಕ ಹೊರಡಿಸಿದ್ದಾರೆ.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button