ನಮ್ಮ ಸರ್ಕಾರದ ಗ್ಯಾರಂಟಿಗಳ ಅನುಷ್ಠಾನದಿಂದ ಬಿಜೆಪಿಗರಿಗೆ ನಡುಕ ಹುಟ್ಟುತ್ತಿದೆ – ಡಾll ವಿಜಯಾನಂದ ಕಾಶಪ್ಪನವರ.
ಹುನಗುಂದ ಆಗಷ್ಟ.30

ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಕಾಂಗ್ರೇಸ್ ಪಕ್ಷ ಗ್ಯಾರಂಟಿಗಳನ್ನು ಜಾರಿಗೆ ತಂದರೇ ಖಂಡಿತ ರಾಜ್ಯ ದಿವಾಳಿಯಾಗುತ್ತೇ ಅಂತಾ ದೊಡ್ಡ ದೊಡ್ಡ ಭಾಷಣ ಬೀಗಿಯುತ್ತಿದ್ದ ಬಿಜೆಪಿಗರಿಗೆ ಸಧ್ಯ ನಾವು ಕೊಟ್ಟ ಐದು ಗ್ಯಾರಂಟಿಗಳನ್ನು ಹಂತ ಹಂತವಾಗಿ ಜಾರಿಗೊಳಿಸುತ್ತಿರುವುದ್ದನ್ನು ನೋಡಿ ನಡುಕು ಹುಟ್ಟಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಪಟ್ಟಣದ ಬಸವ ಮಂಟಪದಲ್ಲಿ ತಾಲೂಕಾಡಳಿತ ಮತ್ತು ಪುರಸಭೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು ಮಹಿಳೆಯರ ಸಬಲೀಕರಣ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಚುನಾವಣೆ ಪೂರ್ವದಲ್ಲಿ ನೀಡಲಾಗಿದ್ದ ಪ್ರತಿ ಮನೆಯ ಮುಖ್ಯಸ್ಥೆಗೆ ಪ್ರತಿ ತಿಂಗಳ ೨೦೦೦ ರೂ ಹಣ ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಇಂದು ರಾಜ್ಯಾಧ್ಯಂತ ಅನುಷ್ಠಾನಗೊಳಿಸುವ ಮೂಲಕ ಮಹಿಳೆಯರ ಹಿತ ರಕ್ಷಣೆಯನ್ನು ಮಾಡಲಾಗುತ್ತಿದೆ. ಹಿಂದೆ ಶಕ್ತಿ ಯೋಜನೆ,ಗೃಹ ಜ್ಯೋತಿ,ಅನ್ನ ಭಾಗ್ಯ ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದು ನುಡಿದಂತೆ ನಡೆದ ಸರ್ಕಾರ ನಮ್ಮದಾಗಿದೆ.ಈ ಗೃಹಲಕ್ಷ್ಮಿ ಯೋಜನೆ ಅನುಷ್ಠಾನದಿಂದ ರಾಜ್ಯದ ೧ ಕೋಟಿ ೧೧ ಲಕ್ಷ ಕುಟುಂಬಗಳಿಗೆ ಯೋಜನೆಯ ಲಾಭ ಸಿಗಲಿದೆ.ಅದು ಬುಧವಾರ ಸಂಜೆಯೊಳಗೆ ಅರ್ಹ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ ಎಂದರು.ಈ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಗೃಹಲಕ್ಷ್ಮಿ ಯೋಜನೆಯ ಚೆಕ್‌ನ್ನು ಶಾಸಕರು ವಿತರಿಸಿದರು.ತಹಶೀಲ್ದಾರ ನಿಂಗಪ್ಪ ಬಿರಾದಾರ,ಪುರಸಭೆ ಮುಖ್ಯಾಧಿಕಾರಿ ಸತೀಶ ಚವಡಿ,ತಾ.ಪಂ ಇಒ ಮುರಳೀಧರ ದೇಶಪಾಂಡೆ,ಸಿಡಿಪಿಓ ಅನ್ನಪೂರ್ಣ ಕುಬಕಡ್ಡಿ,ಮುಖಂಡರಾದ ಲಿಂಬಣ್ಣ ಮುಕ್ಕಣ್ಣವರ,ಎಸ್.ಜಿ.ಎಮ್ಮಿ,ಮಹಿಬೂಬ ಸರಕಾವಸ್,ಶರಣು ಬೆಲ್ಲದ,ಸಂಗಪ್ಪ ಹೂಲಗೇರಿ,ಮಹಾಂತಪ್ಪ ಪಲ್ಲೇದ,ಸೇರಿದಂತೆ ಪುರಸಭೆ ಸದಸ್ಯರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ