ಕಮತಗಿಯ ಪ್ರತಿಷ್ಠಿತ ಶ್ರೀ ಕಾಳಿದಾಸ ಪತ್ತಿನ ಸಹಕಾರಿ ಸಂಘದ ಪ್ರಧಾನ ಕಛೇರಿ ಲೋಕಾರ್ಪಣೆ.
ಕಮತಗಿ ಆಗಷ್ಟ.30

ನಗರದ ಶ್ರೀ ಕಾಳಿದಾಸ ಪತ್ತಿನ ಸಹಕಾರಿ ಸಂಘದ ಅತ್ಯಂತಹ ಕಡಿಮೆ ಅವದಿಯಲ್ಲಿ ಇಷ್ಟೊಂದು ದೊಡ್ಡ ಸಾಧನೆ ಮಾಡಿದ್ದು ಶ್ಲಾಘನೀಯ ಇಂದು ನನ್ನನ್ನು ಕರೆದು ಉದ್ಘಾಟನೆ ಮಾಡಿಸಿ ಈ ಸುಂದರ ಕ್ಷಣಕ್ಕೆ ನಾನು ಕೂಡ ಕಾರಣ ಆಗಿದ್ದು ತುಂಬಾ ಖುಷಿ ಕೊಟ್ಟಿದೆ, ಈ ಕಾಳಿದಾಸ ಕೋ, ಆಫ್ ಬ್ಯಾಂಕ್ ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಧನೆ ಮಾಡಲಿ ಇದಕ್ಕಾಗಿ ಶ್ರಮಿಸಿದ ಈ ಬ್ಯಾಂಕಿನ ಎಲ್ಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರ ಕಾರ್ಯಸಾಧನೆ ಶ್ಲಾಘನೀಯ ಎಂದು ಸಹಕಾರಿ ಸಚಿವರಾದ ಸನ್ಮಾನ್ಯ ಶ್ರೀ ಕೆ,ಎನ್ ರಾಜಣ್ಣ ಅವರು ಶ್ರೀ ಕಾಳಿದಾಸ ಪತ್ತಿನ ಸಹಕಾರಿ ಸಂಘದ ಪ್ರದಾನ ಕಛೇರಿ ಹಾಗೂ ವೇದಿಕೆ ಉದ್ಘಾಟನೆ ಮಾಡಿ ಮಾತನಾಡಿದರು ,ಈ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟನೆ ಮಾಡಬೇಕಿತ್ತು ಕಾರಣಾಂತರಗಳಿಂದ ಅವರು ಬರಲಿಲ್ಲ ಹೀಗಾಗಿ ಅವರ ನನ್ನನ್ನು ಕಳಿಸಿ ತಮಗೂ ಕೂಡ ಎಲ್ಲರಿಗೂ ಶುಭ ಕೋರಿದ್ದಾರೆ ಎಂದರು. ನಮ್ಮ ಸರಕಾರ ಹೀಗಾಗಲೇ ಮಾಡಿರುವ ಪ್ರಣಾಳಿಕೆಯ ಐದು ಕ್ಯಾರಂಟಿ ಕಾರ್ಡಗಳಲ್ಲಿ ಎಲ್ಲಾವನ್ನು ಇಡೆರಿಸಿದ್ದೇವೆ, ಮಾನ್ಯ ಮುಖ್ಯಮಂತ್ರಿಗಳು ಇದೆ ಅಗಸ್ಟ ೩೦ ರಂದು ಕರ್ನಾಟಕದ ಜನತೆಗೆ ಗೃಹಭಾಗ್ಯ ಯೋಜನೆ ಅಡಿ ೨೦೦೦, ಸಾವಿರ ರೂಪಾಯಿ ತಮಗೆ ಜಮಾ ಮಾಡಲು ಸನ್ಮಾನ್ಯ ರಾಹುಲ್ ಗಾಂಧಿ ಅವರು ಮೈಸೂರಿಗೆ ಬರುತ್ತಿದ್ದಾರೆ. ಹೀಗಾಗಿ ಮಾನ್ಯ ಸಿದ್ದರಾಮಯ್ಯನವರು ಬರಲು ಆಗಲಿಲ್ಲ ಖಂಡಿತ ಈ ಮತ ಕ್ಷೇತ್ರಕ್ಕೆ ಬಂದಾಗ ಈ ಬ್ಯಾಂಕಿಗೆ ಭೇಟಿ ಕೊಡುತ್ತಿನೆಂದು ಹೇಳಿದ್ದಾರೆ, ತಮಗೂ ಕೂಡ ಶುಭ ಕೋರಿದ್ದಾರೆ ಎಂದರು. ವೇದಿಕೆಯ ದಿವ್ಯ ಸಾನಿಧ್ಯ ವಹಿಸಿದ್ದ ಪ,ಪೂ, ಶ್ರೀ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು, ಹಾಗೂ ಸಾನಿಧ್ಯವನ್ನು ಶ್ರೀ ಷ,ಬ್ರ,೧೦೮ ಶಿವಕುಮಾರ್ ಶಿವಾಚಾರ್ಯರು, ಕಮತಗಿ, ಹಾಗೂ ಶ್ರೀ ಪ,ಪೂ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು , ತಿಂಥನಿ ಮತ್ತು ಶ್ರೀ ಷ,ಬ್ರ, ಕಾಡಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಗುಳೇದಗುಡ್ಡ ವೇದಿಕೆ ಮೇಲೆ ಉಪಸ್ಥಿತರಿದ್ದ ಅಬಕಾರಿ ಸಚಿವರು / ಜಿಲ್ಲಾ ಉಸ್ತುವಾರಿ ಸಚಿವರಾದ ಆರ್,ಬಿ,ತಿಮ್ಮಾಪೂರ,ಶಾಸಕರಾದ ಮಾನ್ಯ ಎಚ್,ವಾಯ್, ಮೇಟಿ, ಈ ಸಮಾರಂಭರದ ಅಧ್ಯಕ್ಷತೆ ವಹಿಸಿದ್ದ ಮಾನ್ಯ ಚಂದ್ರಶೇಖಪ್ಪ ಹುಗ್ಗಿ, ಅಧ್ಯಕ್ಷರು ಶ್ರೀ ಕಾಳಿದಾಸ ಕೋ- ಆಫ್ ಕ್ರೆಡಿಟ್ ಲಿ , ಕಮತಗಿ ಹಾಗೂ ಮಾಜಿ ಸಚಿವರಾದ ಮಾನ್ಯ ಎಸ್,ಆರ್ ಮಾಟೀಲ, ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಮಾನ್ಯ ಅಜಯಕುಮಾರ್ ಸರನಾಯಕ ಮಾಜಿ ಶಾಸಕರು / ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಾನ್ಯ ಎಸ್,ಜಿ,ನಂಜಯ್ಯನಮಠ, ರಾಜ್ಯ ದೇವಾಂಗ ಸಮಾಜದ ಅಧ್ಯಕ್ಷರಾದ ಆರ್,ಬಿ,ಕಲಬುರ್ಗಿ , ವಿಧಾನ ಪರಿಷತ್ ಸದಸ್ಯರಾದ ಮಾನ್ಯ ಪಿ,ಎಚ್ ಪೂಜಾರ ಸೇರಿದಂತೆ ಅನೇಕ ಗಣ್ಯರು ಸಂಸ್ಥೆಯ ಸಾಧನೆ ಹಾಗೂ ಏಳಿಗೆ ಬಗ್ಗೆ ಎಲ್ಲರೂ ಶ್ಲಾಘಿಸಿದರು. ಸುಮಾರು ೨೫ ಶಾಖೆಗಳನ್ನು ಈ ಸಂಸ್ಥೆ ಹೊಂದಿದ್ದು ಸುಮಾರು ೧೦೦ಕ್ಕೂ ಹೆಚ್ಚಿನ ಸಿಬ್ಬಂದಿ ಈ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಮಾನದಲ್ಲಿ ಬ್ಯಾಂಕ್ ಗ್ರಾಹಕರಿಗೆ ಉಚಿತ SMS ಸೇವೆ ಉಚಿತ RTGS ಸೌಲಭ್ಯಗಳನ್ನು ಒದಗಿಸಿದೆ ಎಂದು ಬ್ಯಾಂಕ್ ಪ್ರದಾನ ವ್ಯವಸ್ಥಾಪಕರಾದ ಶ್ರೀ ಹೊನ್ನಪ್ಪ ಎಮ್ ಹರದೊಳ್ಳಿ ಅವರು ಹೇಳಿದರು. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಶ್ರೀ ಮುರಗೇಶ ಕಡ್ಲಿಮಟ್ಟಿ, ಶ್ರೀ ಬಸವರಾಜ್ ಅಂಟರತಾನಿ,ಶ್ರೀ ಮುತ್ತಣ್ಣ ಮುಳ್ಳೂರು, ಶ್ರೀ ಸಂಗಣ್ಣ ಹಂಡಿ, ಶ್ರೀ ಶಂಕರಲಿಂಗ ಮಂಕನಿ, ಶ್ರೀ ಎಮ್,ಬಿ,ಫೂಜಾರ ಸೇರಿದಂತೆ ಅನೇಕ ಮುಖಂಡರು, ಸಮಾಜದ ಗುರು ಹಿರಿಯರು ,ಮಹಿಳೆಯರು ಪಾಲ್ಗೊಂಡಿದ್ದರು.