ಕೊಟ್ಟೂರು ತಾಲೂಕ ಪಂಚಾಯತಿ ಮಾಜಿ ಅಧ್ಯಕ್ಷ ವೆಂಕಟೇಶ್ ನಾಯ್ಕ ಬಂಧನ.
ಕೊಟ್ಟೂರು ಆಗಷ್ಟ.31
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್ ಬಂಧನವಾಗಿದೆ. ರಾಂಪುರ ಗ್ರಾಮದ ಹೆಚ್.ಮೂಗಣ್ಣ ತಂದೆ ಅಂಜಿನಪ್ಪ ಆದಿ ಕರ್ನಾಟಕ ಜನಾಂಗ ಇವರು ನೀಡಿದ ದೂರಿನನ್ವಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡಸಂಹಿತೆ 3೦7, 323, 324, 341, 437, 5೦4, 5೦6 ರನ್ವಯ ಪ್ರಕರಣ ದಾಖಲಾಗಿ ಆರೋಪಿಯನ್ನು ಬಂಧಿಸುವಲ್ಲಿ ಕೊಟ್ಟೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಫಿರ್ಯಾದುದಾರರಾದ ಹೆಚ್.ಮೂಗಣ್ಣ ಇವರನ್ನು ಆರೋಪಿ ವೆಂಕಟೇಶ್ ನಾಯ್ಕ ಎನ್ನುವವರು ಮಂಗಳವಾರ ರಾತ್ರಿ 8.3೦ ಗಂಟೆಗೆ ಟ್ರ್ಯಾಕ್ಟರ್‌ಗೆ ಅಳವಡಿಸುವ ಟ್ರ್ಯಾಲಿಯನ್ನು ಪ್ರತಿ ತಿಂಗಳಿಗೆ 6೦೦೦/- ನಂತೆ ಫಿರ್ಯಾದಿಯ ಅಣ್ಣನಿಗೆ ಬಾಡಿಗೆ ಕೊಟ್ಟಿದ್ದು 2 ತಿಂಗಳ ಬಾಡಿಗೆಯನ್ನು ಕೊಡದೇ ಮುಂದಿನ ತಿಂಗಳು ಕೊಡುತ್ತೇನೆಂದು ಹೇಳಿದ್ದಕ್ಕೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿನ್ನನ್ನು ಕೊಂದು ಬಿಡುತ್ತೇನೆಂದು ಫಿರ್ಯಾದುದಾರನಿಗೆ ಒದ್ದು, ಫಿರ್ಯಾದಿಯ ಮೊಬೈಲ್ ಎಸೆದು ಮಾರಣಾಂತಿಕ ಹಲ್ಲೆ ಮಾಡಿದ ಕಾರಣಕ್ಕಾಗಿ ಬುಧವಾರ ಪ್ರಕರಣ ದಾಖಲಾಗಿದೆ. ಕೊಟ್ಟೂರು ಪಿ.ಎಸ್.ಐ. ಗೀತಾಂಜಲಿ ಶಿಂಧೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಹಾಗೂ ಮುಂದಿನ ವಿಚಾರಣಾ ತನಿಖೆಯನ್ನು ಕೈಗೊಂಡಿದ್ದಾರೆ.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು