ಕಾಯಕಯೋಗಿ ನುಲಿ ಚಂದಯ್ಯ ಮತ್ತು ಬ್ರುಹ್ಮಶ್ರೀ ನಾರಾಯಣ ಗುರುಗಳ ಕೊಡುಗೆ ಅಪಾರ – ಡಾll ವಿಜಯಾನಂದ ಕಾಶಪ್ಪನವರ.

ಹುನಗುಂದ ಸಪ್ಟೆಂಬರ್.1

ಸಮ ಸಮಾಜ ಕನಸ್ಸು ಕಂಡ ಕಾಯಕಯೋಗಿ ಶರಣ ನೂಲಿ ಚಂದಯ್ಯ ಹಾಗೂ ಜಾತಿ ದ್ವೇಷದ ಗೋಡೆಯನ್ನು ಒಡೆದು ಎಲ್ಲರಲ್ಲೂ ಭಾತೃತ್ವ ಮತ್ತು ಸಮಾನತೆಯನ್ನು ಹಾರೈಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಕೊಡುಗೆ ನಾಡಿಗೆ ಅಪಾರವಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಪಟ್ಟಣದ ತಹಸೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ ನಡೆದ ಶರಣ ನೂಲಿಯ ಚಂದಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತೋತ್ಸವ ಕಾರ್ಯಕ್ರಮದಲ್ಲಿ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ನೂಲಿಯ ಚಂದಯ್ಯನವರು ಕಾಯಕದಿಂದ ಬದುಕು ಕಟ್ಟಿಕೊಂಡವರು.೧೨ ನೆಯ ಶತಮಾನದಲ್ಲಿ ಅತ್ಯಂತ ಶ್ರೇಷ್ಠ ಶಿವ ಶರಣರು ಕಾಯಕದ ಸತ್ಯ ನಿಷ್ಠೆಯ ಮೂಲಕ ಸಾಕ್ಷತ್ ಶಿವನ್ನೇ ಒಲಿಸಿಕೊಂಡು ಮಹಾನ ಶಿವಶರಣ ಮತ್ತು ಜಾತಿಯ ವ್ಯವಸ್ಥೆಯ ವಿರುದ್ದ ಹೋರಾಟವನ್ನು ಮಾಡಿ ಸಮಾಜದಲ್ಲಿ ಎಲ್ಲರು ಸಮಾನರು ಎಂದು ಹೇಳಿದ ಮಹಾನ ಪುರುಷ.ಮಹಾನ ಪುರಷರನ್ನು ಒಂದು ಜಾತಿಗೆ ಸೀಮಿತಗೊಳಿಸದೇ ಸರ್ವ ಧರ್ಮವರು ಪೂಜಿಸುವಂತಾಗಬೇಕು ನೂಲಿ ಚಂದಯ್ಯನವರು ಮತ್ತು ನಾರಾಯಣ ಗುರುಗಳು ಅವರ ತತ್ವ ಆದರ್ಶಗಳನ್ನು ಇಂದಿನ ಯುವಕರು ಅಳವಡಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ತಹಸೀಲ್ದಾರ ನಿಂಗಪ್ಪ ಬಿರಾದಾರ, ತಾಲೂಕ ಪಂಚಾಯತಿ ಇ.ಒ. ಮುರುಳೀಧರ ದೇಶಪಾಂಡೆ,ಶಿರಸ್ತೇದಾರರಾದ ಈಶ್ವರ ಗಡ್ಡಿ, ಶ್ರವಣಕುಮಾರ ಮುಂಡೇವಾಡಿ,ಮುಖಂಡರಾದ ಶಿವಾನಂದ ಕಂಠಿ,ಶೇಖರಪ್ಪ ಬಾದವಾಡಗಿ,ರಾಮಣ್ಣ ಭಜಂತ್ರಿ,ಬಸವರಾಜ ಬೆಳಗಲ್ಲ,ಮಹಾಂತೇಶ ಭಜಂತ್ರಿ, ದುರಗಪ್ಪ ಬೆಳಗಲ್ಲ,ಬಾಲಪ್ಪ ಭಜಂತ್ರಿ. ಇದ್ದರು.

ತಾಲೂಕ ವರದಿಗಾರರು:ಮಲ್ಲಿಕಾರ್ಜುನ ಎಂ.ಬಂಡರಗಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button