“ಗುಜ್ಜಲ ನಾಗರಾಜರವರಿಗೆ ಕಾಂಗ್ರೆಸ್ ಪಕ್ಷದಿಂದ ಬಳ್ಳಾರಿ ಲೋಕಸಭಾ ಟಿಕೆಟ್ ಕೊಡುವಂತೆ ಹಲವು ಸಂಘಟನೆಗಳು ಒತ್ತಾಯ”.
ಕೊಟ್ಟೂರು ಡಿಸೆಂಬರ್.25

ತಾಲೂಕಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ದಂದು ಪತ್ರಿಕಾಗೋಷ್ಠಿ ಕರೆದ ಉದ್ದೇಶ ಏನೆಂದರೆ ಸ್ಥಳೀಯರಿಗೆ ಪ್ರಾಮುಖ್ಯತೆ ಕೊಡುವಂತೆ ವಾಲ್ಮೀಕಿ ಪ್ರಮುಖ ಮುಖಂಡರು ಕರವೇ ಅಧ್ಯಕ್ಷರು ಒತ್ತಾಯಿಸಿದರು.ಶ್ರೀಯುತ ಹಿರಿಯ ಕಾಂಗ್ರೆಸ್ ಮುಖಂಡರು, ಹಿರಿಯ ವಕೀಲರು, ಆದ ಶ್ರೀ ಗುಜ್ಜಲ ನಾಗರಾಜ ರವರಿಗೆ 25.ವರ್ಷದಿಂದ ಸೇವೆ ಮಾಡುತ್ತಾ ಬಂದಿದ್ದು ಇದುವರೆಗೂ ಸೇವೆಯಲ್ಲಿರುತ್ತಾರೆ.ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತರಾಗಿ ಪಕ್ಷದ ಕೆಲಸ ಹಾಗೂ ಚುನಾವಣೆಗಳನ್ನು ಮಾಡಿರುತ್ತಾರೆ. ಕಾರ್ಯಕರ್ತರನ್ನು ಹುಟ್ಟುಹಾಕಿ ಅನೇಕ ಜನ ಕಾಂಗ್ರೆಸ್ ಕಾರ್ಯಕರ್ತರು ನಾಮಿನೇಶನ್ ಮತ್ತು ಪಕ್ಷದಲ್ಲಿ ವಿವಿಧ ಹುದ್ದೆ ಕೊಡಿಸಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠ ಪಡಿಸಿರುತ್ತಾರೆ.ಶ್ರೀ ಗುಜ್ಜಲ ನಾಗರಾಜರವರು ಉತ್ತಮ ಸಂಘಟನಾಕಾರರಾಗಿ ಮತ್ತು ಸ್ಥಳೀಯವಾಗಿ ಎಲ್ಲಾ ಜಾತಿ ಜನಾಂಗದ ಜೊತೆ ಉತ್ತಮ ಒಡನಾಟ ಹೊಂದಿದ್ದು, ಜನರ ಜೊತೆ ಇರುತ್ತಾರೆ.ವಿಜಯನಗರ ಜಿಲ್ಲೆಯ ಹೋರಾಟ ಸಮಿತಿಯ ರುವಾರಿಗಳು, ಕನ್ನಡಪರ ಸಂಘಗಳಲ್ಲಿ ಕೆಲಸ ಮಾಡಿ ಉತ್ತಮ ಸಂಘಟನೆಯನ್ನು ಮಾಡಿ ಬಳ್ಳಾರಿ ಜಿಲ್ಲೆಯಲ್ಲಿ ಚಿರ ಪರಿಚಿತರು. ಆದ್ದರಿಂದ ವಿಜಯನಗರ ಜಿಲ್ಲೆಯ ಪಶ್ಚಿಮ ತಾಲೂಕಗಳಿಗೆ ಈ ಬಾರಿ ಶ್ರೀಯುತ ಗುಜ್ಜಲ ನಾಗರಾಜರವರಿಗೆ ಕಾಂಗ್ರೆಸ್ ಪಕ್ಷದ ಟಿಕೇಟನ್ನು ನೀಡಬೇಕೆಂದು ಒತ್ತಾಯ ಮಾಡುತ್ತೇವೆ.ವಾಲ್ಮೀಕಿ ಜನಾಂಗದ ಮುಖಂಡರಾದ ಶ್ರೀಯುತ ಗುಜ್ಜಲ ನಾಗರಾಜರವರು ಸಮಾಜದ ಶೈಕ್ಷಣಿಕ, ರಾಜಕೀಯ, ಹಾಗೂ ಸಮಾಜದ ಅಭಿವೃದ್ಧಿಗಾಗಿ ಅನೇಕ ಸಾಮೂಹಿಕ ಹೋರಾಟ / ಸಂಘಟನೆ/ ವಿವಾಹಗಳನ್ನು ಮಾಡಿರುತ್ತಾರೆ. ಮತ್ತು ಆರೋಗ್ಯ ತಪಾಸಣೆ ಶಿಬಿರಗಳನ್ನು ಸಹ ಈ ಭಾಗದಲ್ಲಿ ನಡೆಸಿ ಕೊಟ್ಟಿರುತ್ತಾರೆ.ಈ ಬಾರಿ ಕಾಂಗ್ರೆಸ್ ಪಕ್ಷವು ಸ್ಥಳೀಯರಿಗೆ ಹಾಗೂ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಾದ ಶ್ರೀಯುತ ಗುಜ್ಜಲ ನಾಗರಾಜರವರಿಗೆ ಪಕ್ಷದ ಬಳ್ಳಾರಿ ಲೋಕಸಭಾ “B- FORM” ಕೊಡುವಂತೆ ವಾಲ್ಮೀಕಿ ಮುಖಂಡರು ಆಗಲು ಸಂಘಟನೆಗಳು ಒತ್ತಾಯಸಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಚಿರಿಬಿ ಕೊಟ್ರೇಶ್, ಕರವೇ ಅಧ್ಯಕ್ಷ ಎಂ ಶ್ರೀನಿವಾಸ್, ಜಿಲ್ಲಾ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಗೌಡ, ಕನ್ನಹಳ್ಳಿ ವೀರೇಶ್, ವಾಲ್ಮೀಕಿ ಯುವಕರು ಹನುಮಂತ, ಕೋವಿ ದುರುಗೇಶ, ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು