ಶ್ರೀ ಗುರು ರಾಚೋಟೆಶ್ವರ ಪೂರ್ವ/ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ.
ಇಂಡಿ ಸಪ್ಟೆಂಬರ್.1

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದ ಶ್ರೀ ಗುರು ರಾಚೋಟೆಶ್ವರ ಪೂರ್ವ/ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನೂಲ ಹುಣ್ಣಿಮೆಯ ಪ್ರಯುಕ್ತ ಸಂಭ್ರಮದ ರಕ್ಷಾ ಬಂಧನವನ್ನು ಆಚರಿಸಲಾಯಿತು.ಶಾಲೆಯ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕಿಯರು ಶಿಕ್ಷಕರಿಗೆ ರಾಖಿಯನ್ನು ಕಟ್ಟಿ ಸಿಹಿಯನ್ನು ಹಂಚಿ ಸಂಭ್ರಮಿಸಿದರು.

ಅದೇ ಸಂದರ್ಭದಲ್ಲಿ ರೂಗಿ ಶಿಕ್ಷಕರು ಮಾತನಾಡಿ ಸಹೋದರ ಸಹೋದರಿಯರ ನಡುವಿನ ಬಾಂಧವ್ಯವನ್ನು ಆಚರಿಸುವದೇ ರಕ್ಷಾ ಬಂಧನವಾಗಿದೆ ಅಣ್ಣ-ತಂಗಿಯ ನಡುವಿನ ಬಾಂಧವ್ಯ ಸಾರುವ ಪ್ರೀತಿ ಭ್ರಾತೃತ್ವದ ಸಂಭ್ರಮವೇ ರಕ್ಷಾ ಬಂಧನ ಎಂದು ಹೇಳಿದರು.ನಂತರ ಮುಖ್ಯಗುರುಗಳಾದ ಬದಾಮಿ ಅವರು ಮಾತನಾಡಿ ಅಣ್ಣ-ತಂಗಿಯ ಪ್ರೀತಿ ಭ್ರಾತೃತ್ವದ ಸಂಭ್ರಮವೇ ರಕ್ಷಾ ಬಂಧನ ಸಹೋದರತ್ವ ಮತ್ತು ರಕ್ಷೆಯನ್ನು ನೀಡುವ ಸಂಭ್ರಮದ ಹಬ್ಬವಾಗಿದೆ ಎಂದರು.ಈ ಸಂದರ್ಭದಲ್ಲಿ ಬೋಧಕ-ಬೋಧಕೆತರ ಸಿಬ್ಬಂದಿಗಳು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ