ಸ್ವಗ್ರಾಮದಲ್ಲಿ ಶಾಸಕ ಡಾ.ಎನ್.ಟಿ ಶ್ರೀ ನಿವಾಸ್. ಕುಟುಂಬದೊಂದಿಗೆ ಮತದಾನ.
ನರಸಿಂಹಗಿರಿ ಮೇ.07

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಹೋಬಳಿಯ ನರಸಿಂಹಗಿರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ-86 ರಲ್ಲಿ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಎನ್.ಟಿ ಶ್ರೀನಿವಾಸ್ ರವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಈ ವೇಳೆ ಮಾತನಾಡಿದ ಅವರು ಮತದಾನ ಪ್ರಜಾಪ್ರಭುತ್ವದ ಪರಮೋಚ್ಛ ಅಧಿಕಾರ, ಭವ್ಯ ಭಾರತದ ನಿರ್ಮಾಣಕ್ಕೆ, ರಾಷ್ಟ್ರ, ರಾಜ್ಯ ಅಭಿವೃದ್ಧಿಗೆ ಪ್ರಜಾಪ್ರಭುತ್ವದ ಅತ್ಯಂತ ಮಹತ್ವವಾದದ್ದು ಹಾಗಾಗಿ ಮತದಾನ ನಮ್ಮ ಸಂವಿಧಾನ ಬದ್ಧ ಹಕ್ಕು ಅದನ್ನು ತಪ್ಪದೆ ಪ್ರತಿಯೊಬ್ಬರು ಆದಷ್ಟು ಬೇಗನೆ ಮತ ಚಲಾವಣೆ ಮಾಡಿ ನಿಮ್ಮ ಹಕ್ಕನ್ನು ಚಲಾಯಿಸಲು ವಿನಂತಿಸಿದರು. ಈ ಸಂದರ್ಭದಲ್ಲಿ ಶಾಸಕರ ಧರ್ಮಪತ್ನಿ ಡಾ. ಪುಷ್ಪಾ ಹಾಗೂ ತಾಯಿ ಓಬಮ್ಮ ಎನ್.ಟಿ. ಬೊಮ್ಮಣ್ಣ ಹಾಗೂ ಸೋದರರಾದ ಎನ್.ಟಿ ತಮ್ಮಣ್ಣ ಕಾಂಗ್ರೆಸ್ ಮುಖಂಡರು ಸಮಾಜ ಸೇವಕರು, ಅವರ ಪತ್ನಿ ಲತಾ ಅವರು ತಮ್ಮ ಮತ ಚಲಾಯಿಸಿದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.