ಹಂಪಿ ರೇಷ್ಮೆ ರೈತ ಉತ್ಪಾದಕರ ಕಂಪನಿಗಳಿಂದ ತಾಲೂಕಿನ ರೈತರ ಬೆಳೆಗಳು ಉತ್ತಮವಾದ ಇಳುವರಿ ಕಂಡರೆ ನಾನು ಸಹಕಾರ ನೀಡುವಂತೆ – ಎನ್.ಟಿ.ಶ್ರೀನಿವಾಸ್.

ಕೂಡ್ಲಿಗಿ ಸಪ್ಟೆಂಬರ್.2

ಪಟ್ಟಣದ ಸಂಡೂರು ರಸ್ತೆಯಲ್ಲಿ ಬರುವ ರೇಷ್ಮೆ ಇಲಾಖೆ ಕಚೇರಿ ಮುಂಭಾಗದಲ್ಲಿ ” ಹಂಪಿ ರೇಷ್ಮೆ ರೈತ ಉತ್ಪಾದಕರ ಕಂಪನಿ ನಿಯಮಿತ ವಾರ್ಷಿಕೋತ್ಸವ ಕೂಡ್ಲಿಗಿ” ಹಾಗೂ ರೇಷ್ಮೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾದ ಹಾಗೂ ಕೂಡ್ಲಿಗಿಯ ರೇಷ್ಮೆ ಇಲಾಖೆಯ ನಿರ್ದೇಶಕರಾದ ಸರ್ವಸದಸ್ಯರ ಮಹಾ ಸಭೆಯನ್ನು ಶುಕ್ರವಾರ ರಂದು ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ಎಲ್ಲಾ ರೇಷ್ಮೆ ಬೆಳೆಗಾರರು ರೈತರು ಹಾಗೂ ಕೃಷಿ ಬೆಳೆಗಾರರಿಗೆ ಉತ್ತಮ್ಮ ಗುಣಮಟ್ಟದ ಬೆಳೆಗಳಿಗೆ ಬೇಕಾಗುವಂತ ಔಷಧಿ, ಬೆಳೆಗಳಿಗೆ ಸಿಂಪಡಿಸುವ ಟಾನಿಕ್, ಹಾಗೂ ಫಲವತ್ತುತೆಗೆ ಗೊಬ್ಬರ್ ಇವುಗಳ ಪರಿಚಯಿಸಿದ ಮೂರು ಕಂಪನಿಗಳ ಅಧಿಕಾರಿಗಳ ಹತ್ತಿರ ರೈತರಿಗೆ ಉತ್ತಮವಾಗಿ ಉಪಯೋಗ ಹಾಗಬಹುದೇ ಎಂಬ ಸಂಪೂರ್ಣ ಮಾಹಿತಿ ಮೊದಲು ತೆಗೆದುಕೊಂಡು ನಂತರ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಭಾಗವಯಿಸಿ ಸಸಿಗೆ ನೀರೆರುವುದರ ಮೂಲಕ ಉದ್ಘಾಟಿಸಿದರು.‌  ಡಾಕ್ಟರ್ ಎನ್ ಟಿ ಶ್ರೀನಿವಾಸ್ ಶಾಸಕರು ರೇಷ್ಮೆ ಉತ್ಪಾದಕರ ಕಂಪನಿಗಳನ್ನು ಉದ್ದೇಶಿಸಿ ಮಾತನಾಡಿದರು. ನನಗೆ ರೈತರ ಬಗ್ಗೆ ಹಾಗೂ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಇರುವುದರಿಂದ ಹಾಗೂ ಕೂಡ್ಲಿಗಿ ಕ್ಷೇತ್ರವು ಹೆಚ್ಚು ರೈತಾಪಿ ಜನಗಳಿಂದ ಕೃಷಿ ಅವಲಂಬಿತ ಕ್ಷೇತ್ರವಾಗಿರುವುದರಿಂದ ಗಂಭೀರವಾಗಿ ತೆಗೆದುಕೊಳ್ಳುತ್ತೇನೆ ಎಂದೂ ತಿಳಿಸಿದರು.

ಹಾಗೆ ಆಯಾ ಹೋಬಳಿಯ ಮಟ್ಟದ ರೈತರ ಒಂದು ಎಕರೆ  ಜಮೀನುನಲ್ಲಿ ಪ್ರಾಯೋಗಿಕವಾಗಿ ಔಷಧಿ ಗೊಬ್ಬರಗಳನ್ನು ಉಪಯೋಗಿಸಿ ನೋಡಿ ಫಲವತ್ತುತೆಯ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ತಮಗೆ ಮುಂದಿನ ದಿನಮಾನಗಳಲ್ಲಿ ರೈತರ ಪಾಲಿಗೆ ಉತ್ತಮವಾಗಿ ಕಂಪನಿಗಳ ಔಷಧಿ ಗೊಬ್ಬರಗಳು ಇಳುವರಿಯನ್ನು ಕಂಡರೆ ಸಹಕಾರ ನೀಡುತ್ತೇನೆ ಎಂದರು.ಈ ವೇದಿಕೆಯಲ್ಲಿ ವಿ. ಸುಧೀರ್ ರೇಷ್ಮೆ ಕೃಷಿ ಉಪ ನಿರ್ದೇಶಕರು ಜಿಲ್ಲಾ ಪಂಚಾಯತ್ ಬಳ್ಳಾರಿ,ವಿಜಯನಗರ, ಪ್ರಾಣೇಶ್ ರಾವ್ ರೇಷ್ಮೆ ವಿಸ್ತೀರ್ಣ ಅಧಿಕಾರಿಗಳು ತಾ. ಸೇ. ಕೇಂದ್ರ ಕೂಡ್ಲಿಗಿ ಹಾಗೂ ರೇಷ್ಮೆ ಕೃಷಿ ಸಹಾಯಕ ನಿರ್ದೇಶಕರು (ಪ್ರಭಾರಿ ) ಕೂಡ್ಲಿಗಿ,ಬಿ ಎಂ ಸಂತೋಷ್ ಲೆಕ್ಕ ಪರಿಶೋಧಕರು ಮೈರಾಡ ಬಳ್ಳಾರಿಯ ಯೋಜನೆ, ಭರ್ಮಗೌಡ್ರ್ ಅಧ್ಯಕ್ಷರು, ವಿನಾಯಕ ಬಸರಾಜ್ ದೊಡ್ಮನಿ ಟಿ. ಎಸ್. ಎಂ. ಕ್ರಿಯಾಜೀನ್ ಕಂಪನಿ, ಆರ್ ಜಯಣ್ಣ ರೀಜನಲ್ ಮ್ಯಾನೇಜರ್ ಅಮೃತ್ ಆರ್ಗನಿಕ್ ಫರ್ಟಿಲೈಸರ್, ಬಿ. ವಿ. ಸುಜಿತ್ ಗೌಡ ರಿಸನಲ್ ಮ್ಯಾನೇಜರ್ ಗ್ರೀನ್ ಬಯೋಟಿಕ್ ಕಂಪನಿ ಬಾಳೆಹೊನ್ನೂರು ಕೆಬಿ ವೀರೇಶ್ ಎ.ಎಸ್.ಎಂ. ಗ್ರೀನ್ ಬಯೋಟಿಕ್ ಕಂಪನಿ , ಅಧಿಕಾರಿಗಳು, ಆಡಳಿತ ಮಂಡಳಿಯರು ಹಾಗೂ ಷೇರುದಾರರು – ಸದಸ್ಯರು  ಉಪಸ್ಥಿತರಿದ್ದರು. 

ಜಿಲ್ಲಾ ವರದಿಗಾರರು:ರಾಘವೇಂದ್ರ,ಸಾಲುಮನೆ.ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button