ಅಭಿವೃದ್ಧಿ ಕೆಲಸ ಮಾಡುವುದು ನನ್ನ ಕರ್ತವ್ಯ – ಜಿ.ಎಚ್.ಶ್ರೀನಿವಾಸ್.
ತರೀಕೆರೆ ಸಪ್ಟೆಂಬರ್.3

ತಾಂಡಗಳ ಅಭಿವೃದ್ಧಿ ಮತ್ತು ಬಂಜಾರ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತೇನೆ ಎಂದು ಶಾಸಕರಾದ ಜಿಎಚ್ ಶ್ರೀನಿವಾಸ್ ಅವರು ಇಂದು ಪಟ್ಟಣದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ತರೀಕೆರೆ ಮತ್ತು ಅಜ್ಜಂಪುರ ತಾಲೂಕು ಬಂಜಾರ ಸಮಾಜದಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟನೆ ಮಾಡಿ,ಅಭಿನಂದನೆಗಳನ್ನು ಸ್ವೀಕರಿಸಿ ಮಾತನಾಡಿದರು. ಶಾಸಕನಾಗಿ ಎಲ್ಲಾ ಸಮಾಜದವರ ಸಮಸ್ಯೆಗಳು ಮತ್ತು ಅಭಿವೃದ್ಧಿ ಕೆಲಸ ಮಾಡುವುದು ನನ್ನ ಕರ್ತವ್ಯವಾಗಿದೆ. ಬಗುರುಕುಂ ಸಾಗುವಳಿ ಮಾಡಿರುವವರಿಗೆ ಕಾಯಂ ಸಾಗುವಳಿ ಚೀಟಿ ಕೊಡಿಸುತ್ತೇನೆ. ಪ್ರತಿ ಗ್ರಾಮಗಳಲ್ಲೂ ಸಹ ನಿವೇಶನ ರೈತ ಪ್ರತಿಯೊಬ್ಬರಿಗೂ ನಿವೇಶನ ಕೊಡಿಸಬೇಕು ಎಂಬ ಆತ್ಮವಿಶ್ವಾಸ ನನಗಿದೆ. ಬಂಜಾರ ಸಮಾಜದವರು ಕೊಟ್ಟಿರುವ ಮನವಿಯಲ್ಲಿನ ಬೇಡಿಕೆಗಳನ್ನು ಈಡೇರಿಸುತ್ತೇನೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವ ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸಿ ನುಡಿದಂತೆ ನಡೆದು ಕೊಂಡಿದ್ದೇವೆ. ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಗೆ ನಮ್ಮ ಕ್ಷೇತ್ರದಲ್ಲಿ 10 ಕೋಟಿ ಹಣ ಖರ್ಚಾಗುತ್ತಿದೆ. ಬಂಜಾರ ಸಮಾಜ ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸ ನಂಬಿಕೆಗೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದರು.

ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾದ ಬಿ ಕೃಷ್ಣನಾಯಕ ಮಾತನಾಡಿ, ಶಾಸಕರಾದ ಜಿ.ಎಚ್. ಶ್ರೀನಿವಾಸ್ ರವರು ನಮಗೆ ಕಾಲೇಜಿನ ದಿನಗಳಿಂದಲೂ ಆತ್ಮೀಯರಾಗಿ ವಿಶ್ವಾಸವಿದೆ ಸಮಾಜದ ಪ್ರೀತಿಗೆ, ಗೌರವಿಸುವ ಗುಣವಿದೆ. ಪಿರುಮೇನಹಳ್ಳಿ ತಾಂಡ್ಯಕ್ಕೆ ಹೋಗುವ ರಸ್ತೆ ಮಂಜೂರಿ ಮಾಡಿಸಿಕೊಡಬೇಕು ಬಂಜಾರ ಸಮಾಜದ ಸೇವಾಲಾಲ್ ದೇವಸ್ಥಾನ ಮತ್ತು ಸಮುದಾಯ ಭವನಕ್ಕೆ ಲಕ್ಕವಳ್ಳಿ ಕ್ರಾಸ್ ಬಳಿ ನಿವೇಶನವನ್ನು ಮಂಜೂರಿ ಮಾಡಿ ಕೊಡಬೇಕೆಂದು ಹೇಳಿದರು. ಹುಣಸಗಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಚ್ ಎಲ್ ಮಂಜುನಾಥ್ ಮಾತನಾಡಿ ಮೊದಲ ಬಾರಿ ಶಾಸಕರಾಗಿದ್ದ ಸಂದರ್ಭದಲ್ಲಿ ಅಮೃತಪುರ ಹೋಬಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದರು. ಆದರೆ ಈ ಬಾರಿ ಸ್ಥಳೀಯ ಚುನಾವಣೆಗಳಲ್ಲಿ ಬಂಜಾರ ಸಮಾಜದವರಿಗೆ ಹೆಚ್ಚಿನ ಅವಕಾಶ ಮಾಡಿ ಕೊಡಬೇಕು ಎಂದು ಹೇಳಿದರು. ಎಪಿಎಂಸಿಯ ಮಾಜಿ ಅಧ್ಯಕ್ಷರಾದ ಯೋಗೇಂದ್ರಕುಮಾರ್ ನಾಯಕ್ ಮಾತನಾಡಿ ಮುಂಬರುವ ಚುನಾವಣೆಗಳಲ್ಲಿ ಸಮಾಜದವರಿಗೆ ಹೆಚ್ಚಿನ ಆದ್ಯತೆ ಕೊಡಬೇಕು,
ಪಕ್ಷದಿಂದ ಟಿಕೆಟ್ ಕೊಡಿಸಿ ಕೊಡಬೇಕು ಎಂದು ಹೇಳಿದರು. ಬಂಜಾರ ಸಮಾಜದ ಮಾಜಿ ಅಧ್ಯಕ್ಷರಾದ ಡ್ಯಾಕ್ಯನಾಯ್ಕ ಮಾತನಾಡಿ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ನಮ್ಮನ್ನು ರಕ್ಷಿಸಿದೆ. ಶಾಸಕರು ನಮ್ಮ ಸಮಾಜದ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ, ಅವರು ಮಾಡಿದ್ದ ಅಭಿವೃದ್ಧಿ ಕೆಲಸಗಳೇ ಅವರ ಗೆಲುವಿಗೆ ಕಾರಣ. ನಮ್ಮ ಸಮಾಜಕ್ಕೆ ದಾರಿ ತೋರಿಸಿ ಸಹಕರಿಸ ಬೇಕು ಎಂದು ಹೇಳಿದರು. ವಕೀಲರಾದ ಶೇಖರ ನಾಯಕ ಮಾತನಾಡಿ ಕುಗ್ರಾಮಗಳಿಗೂ ಸಹ ಶಾಸಕರು ಭೇಟಿ ನೀಡಿ ರಸ್ತೆಗಳನ್ನು ಮಾಡಿಸಿ ತಾಂಡಗಳ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ಬಂಜಾರ ಸಮಾಜದವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು. ಕರಕುಚ್ಚಿ ಗೋವಿಂದ ನಾಯ್ಕ, ರಾಮ ನಾಯ್ಕ, ಲಕ್ಷ್ಮೀಬಾಯಿ, ವಿಜಯ ಬಾಯಿ, ಮಾತನಾಡಿದರು. ಅಧ್ಯಕ್ಷರಾದ ಸತ್ಯಪ್ಪ ಮನವಿ ಪತ್ರ ಓದಿ ಶಾಸಕರಿಗೆ ನೀಡಿರುತ್ತಾರೆ. ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಡಿಜೆಂದ್ರ ಕುಮಾರ್ ನಾಯಕ್, ಬಸವರಾಜ, ಅಮೃತಾಪುರದ ಟಿ ಚಂದ್ರನಾಯಕ, ಕಿರ್ಯನಾಯ್ಕ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಚನ್ನನಾಯಕ ಸ್ವಾಗತಿಸಿ ವಂದಿಸಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ