ಓಮಿನಿ ಕಾರು ಮತ್ತು ದ್ವಿಚಕ್ರ ವಾಹನದ ಮಧ್ಯೆ ಅಪಘಾತ ಸಂಭವಿಸಿ – ಸ್ಥಳದಲ್ಲಿ ಬೈಕ್ ಸವಾರ ಸಾವು.
ಹುನಗುಂದ ಸಪ್ಟೆಂಬರ್.3

ಓಮಿನಿ ಕಾರು ಮತ್ತು ದ್ವಿಚಕ್ರ ವಾಹನದ ಮಧ್ಯೆದಲ್ಲಿ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ರವಿವಾರ ತಾಲೂಕಿನ ಸಮೀಪದ ತಿಮ್ಮಾಪೂರ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ ೫೦ ರಲ್ಲಿ ನಡೆದಿದೆ.ಸಂಗಪ್ಪ ಮಲ್ಲಪ್ಪ ಬೇನಾಳ (೬೫) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಘಟನೆಯ ವಿವರ-ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಮೂಲತಃ ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದವರಾಗಿದ್ದು.ಇವರು ಕೆಲವು ವರ್ಷಗಳಿಂದ ಹುನಗುಂದ ತಾಲೂಕಿನ ಬೇನಾಳ ಗ್ರಾಮದಲ್ಲಿ ವಾಸವಾಗಿದ್ದರು.ದ್ವಿಚಕ್ರ ವಾಹನದ ಮೂಲಕ ರವಿವಾರ ಬೇನಾಳ ಗ್ರಾಮದಿಂದ ಇದ್ದಲಗಿ ಗ್ರಾಮಕ್ಕೆ ತಿಮ್ಮಾಪೂರ ಗ್ರಾಮದ ಮೂಲಕ ರಾಷ್ಟ್ರೀಯ ಹೆದ್ದಾರಿ ೫೦ನ್ನು ದಾಟಿ ಇದ್ದಲಗಿ ಗ್ರಾಮದ ರಸ್ತೆಯ ಕಡೆ ಹೊರಟಂತ ಸಂದರ್ಭದಲ್ಲಿ ಆಲಮಟ್ಟಿ ಕಡೆಯಿಂದ ಅತೀ ವೇಗವಾಗಿ ಬಂದ ಓಮಿನಿ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ದ್ವಿಚಕ್ರ ವಾಹನದ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾರೆ.ಸ್ಥಳಕ್ಕೆ ಹುನಗುಂದ ಠಾಣಿಯ ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ,ಸಿಪಿಐ ಗುರುಶಾಂತ ದಾಶ್ಯಾಳ ಮತ್ತು ಪಿಎಸ್‌ಐ ಚನ್ನಯ್ಯ ದೇವೂರ ಭೇಟಿ ನೀಡಿ ಪರಿಶೀಲಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ