ಮಳೆಗಾಗಿ ಗುರ್ಜಿ ದೇವಿಯನ್ನು ಹೊತ್ತ ಗ್ರಾಮಸ್ಥರು.
ಕೊಟ್ಟೂರು ಸಪ್ಟೆಂಬರ್.3

ತಾಲೂಕಿನ ಕೋಗಳಿ ಗ್ರಾಮದ ಶ್ರೀ ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು .ತಾಲೂಕಿನಲ್ಲಿ ಮಳೆ ಇಲ್ಲದೆ ಬೆಳೆಗಳು ಒಣಗಿ ಹೋಗುತ್ತೀರಿವ ಹಿನ್ನಲೆಯಲ್ಲಿ ಮಳೆಗಾಗಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಮಳೆಗಾಗಿ ಗುರ್ಜಿ ದೇವಿಯನ್ನು ಹೊತ್ತು, ಮನೆ ಮನೆಗೆ ತೆರಳಿ ಗ್ರಾಮಸ್ಥರಿಂದ ಕಾಳು ಹಣ ಪಡೆದು.ಮೂರನೇ ದಿನ ಗ್ರಾಮದ ಹಗರಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡಿ ಪರವು ಮಾಡಿ ಜನರಿಗೆ ಪ್ರಸಾದ ವಿತರಣೆ ಮಾಡುತ್ತೇವೆ ಎಂದು ತಿಳಿಸಿದರು.
ಗ್ರಾಮದ ಜನರು ತಮ್ಮ ಮನೆಗೆ ಗುರ್ಜಿ ಹೊತ್ತ ಜನರ ತಂಡ ಬಂದಾಗ ಗುರ್ಜಿ ದೇವರಿಗೆ ನೀರು ಹಾಕಿ, ಪೂಜೆ ಸಲ್ಲಿಸಿ, ಕಾಳು ಹಣ ಕೊಟ್ಟು ಮಳೆಗಾಗಿ ಪ್ರಾರ್ಥಿಸುವ ದೃಶ್ಯ ಗ್ರಾಮದಲ್ಲಿ ಕಂಡು ಬಂತು, ರಾಜ್ಯದಲ್ಲಿ ಮಳೆ ಕೈ ಕೊಟ್ಟಿದ್ದರಿಂದ ರೈತರು ಬಿತ್ತನೆ ಮಾಡಿರುವ ಬೆಳೆಗಳೆಲ್ಲ ಮಳೆ ಇಲ್ಲದೆ ಒಣಗಿ ಹೋಗಿವೆ, ತಾಲೂಕಿನಲ್ಲಿ ಬರಗಾಲ ಇದ್ದು, ದನ ಕರುಗಳಿಗೆ ನೀರು, ಮೇವಿನ ಕೊರತೆ ಕಂಡು ಬಂದಿದ್ದು, ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕು ಎಂದು ಗ್ರಾಮದಲ್ಲಿ ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಗುರ್ಜಿ ಹೊತ್ತಿರುವ ಕಂಬಿ ಮಂಜಣ್ಣ, ಎಸ್ ಎಂ ಶಶಿಧರ, ಬಸವರಾಜ, ಮರುಳುಸಿದ್ದಯ್ಯ, ಮಹಿಳಾ ಸಂಘದ ಕೆ ರೇವಕ್ಕ್, ಚನ್ನಬಸಮ್ಮ, ಗಾಡಿ ನಾಗಮ್ಮ, ಹೆಚ್. ಬ್ರಹ್ಮರಂಭ, ಕೊಟ್ರಮ್ಮ, ಹುಲಿಗೆಮ್ಮ ಮುಂತಾದವರು ಇದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು