ಗೋವುಗಳೊಂದಿಗೆ ಜಗತ್ತನ್ನು ರಕ್ಷಣೆ ಮಾಡಿದ್ದು ಶ್ರೀ ಕೃಷ್ಣ.
ತರೀಕೆರೆ ಸಪ್ಟೆಂಬರ್.6

ಮಾನವನಲ್ಲಿ ಅಡಗಿರುವ ಕೆಟ್ಟ ಗುಣಗಳನ್ನು ತೊಲಗಿಸಿ ಸಂಸ್ಕಾರವಂತರಾಗಿ ಬಾಳಲು ಭಗವದ್ಗೀತೆಯಲ್ಲಿ ಶ್ರೀಕೃಷ್ಣರು ತಿಳಿಸಿದ್ದಾರೆ. ಅವರು ಬಾಲ್ಯದಲ್ಲಿ ತನ್ನನ್ನು ಕೊಲ್ಲಲು ಬಂದ ರಾಕ್ಷಸರನ್ನು ಸಂಹಾರ ಮಾಡಿ ಲೋಕ ಕಲ್ಯಾಣ ಮಾಡಿದ್ದಾರೆ ಎಂದು ನಾಡ ಹಬ್ಬಗಳ ಸಮಿತಿಯ ಅಧ್ಯಕ್ಷರಾದ ತಹಶೀಲ್ದಾರ್ ರಾಜೀವ್ ರವರು ಇಂದು ತಮ್ಮ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಹಾಗೂ ಯಾದವ ಸಂಘದವರಿಗೂ ಸರ್ವರಿಗೂ ಶುಭ ಕೋರಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಮಾಜದ ಮುಖಂಡರಾದ ಮುದ್ದಪ್ಪ ಮಾತನಾಡಿ ನಮ್ಮಲ್ಲಿ ಸಂಘಟನೆಯ ಕೊರತೆ ಇದೆ ಎಲ್ಲರೂ ಒಗ್ಗಟ್ಟಾಗಿ ಮುಂದಿನ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಮಾಡೋಣ ಎಂದು ಹೇಳಿದರು. ನಂದಿ ಹೊಸಳ್ಳಿ ಮುಖಂಡರಾದ ಗೌಡಯ್ಯ ಮಾತನಾಡಿ ಕೆಟ್ಟದ್ದನ್ನು ಮಾಡಲು ಯಾರಾದರೂ ಪ್ರಯತ್ನಿಸಿದರೆ ಮೊದಲು ಕೆಡುಕು ಅವರಿಗೆ ಆಗುತ್ತದೆ ಆದ್ದರಿಂದ ಯಾರು ಯಾರಿಗೂ ಸಹ ಕೆಡಕನ್ನು ಮಾಡಬಾರದು ಭಗವಾನ್ ಶ್ರೀ ಕೃಷ್ಣರು ಗೋವುಗಳೊಂದಿಗೆ ಜಗತ್ತನ್ನು ರಕ್ಷಣೆ ಮಾಡಿದರು ಎಂದು ಹೇಳಿದರು.
ಸಮಾಜದ ಮುಖಂಡರು ನಿವೃತ್ತ ಶಿಕ್ಷಕರಾದ ಎ ಎಂ ಚಂದ್ರಶೇಖರ್ ಮಾತನಾಡಿ ಶ್ರೀ ಕೃಷ್ಣನ ಅವತಾರಗಳ ಕುರಿತು ವಿವರಿಸಿದರು. ತರೀಕೆರೆ ಸಮಾಜದ ಅಧ್ಯಕ್ಷರಾದ ಸಿ ಬಸವರಾಜ್, ಶಂಕರಪ್ಪ, ಸೀತಾಪುರದ ಹನುಮಂತಪ್ಪ ನಂದಿ ಹೊಸಳ್ಳಿ ಮಂಜುನಾಥ್, ಶಿರಸ್ತೆದಾರರಾದ ನಾಗೇಂದ್ರ ನಾಯಕ, ಕೃಷ್ಣಮೂರ್ತಿ, ವಾಣಿ ರವರು ಉಪಸ್ಥಿತರಿದ್ದು ಸುಣ್ಣದಹಳ್ಳಿ ಕುಮಾರಪ್ಪ ಸ್ವಾಗತಿಸಿ ವಂದಿಸಿದರು. ಜಿಲ್ಲಾ
ವರದಿಗಾರರು:ಎನ್.ವೆಂಕಟೇಶ್.ತರೀಕೆರೆ