ಶಿಕ್ಷಕರ ಸ್ಥಾನ ದೊಡ್ಡದು, ಕಾತ್ರಾಳ ಆಶ್ರಮದ ಅಮೃತಾನಂದ ಶ್ರೀಗಳು.

ಇಂಡಿ ಮಾರ್ಚ್.3

ಸಿದ್ದರಾಮಯ್ಯನವರು 2016 ರಲ್ಲಿ ಮುಖ್ಯ ಮಂತ್ರಿಗಳಿದ್ದಾಗ ಕರ್ನಾಟಕ ರಾಜ್ಯದ ಶಿಕ್ಷಕರಿಗೆ ಶೇ.30 ವೇತನ ಹೆಚ್ಚಳದ ಮೂಲಕ ಪ್ರತಿ ವರ್ಷ ಹತ್ತು ಸಾವಿರ ಕೋಟಿ ರೂ. ನೀಡುವ ಮೂಲಕ ವೇತನ ಹೆಚ್ಚಿಸಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಶನಿವಾರ ಪಟ್ಟಣದ ಸಿಂದಗಿ ರಸ್ತೆಯ ಮಲ್ಲಯ್ಯನ ಗುಡಿ ಹತ್ತಿರ ಇರುವ ತಾಲೂಕಾ ಸರಕಾರಿ ಪ್ರಾಥಮಿಕ ಸಹಕಾರಿ ಪತ್ತಿನ ಸಂಘ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇಂಡಿ ಘಟಕದ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ತಾಲೂಕು ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು.ದೇಶದ ಎಲ್ಲಾ ರಂಗದಲ್ಲಿಯೂ ಸಹಕಾರಿ ಸಂಘಗಳು ಯಶಸ್ಸು ಕಂಡಿವೆ. ಸರಕಾರ ಮಾಡದ ಕೆಲಸವನ್ನು ಸಹಕಾರಿ ಸಂಘಗಳು ಮಾಡುತ್ತಿವೆ. ಶಿಕ್ಷಕರು ಬಡ ಮಕ್ಕಳ ಭವಿಷ್ಯ ರೂಪಿಸುವ ಕಾರ್ಯ ಮಾಡುತ್ತಿದ್ದು ದೇಶದ ಭವಿಷ್ಯ ರೂಪಿಸುವಲ್ಲಿ ಸರಕಾರಿ ಶಿಕ್ಷಕರ ಪಾತ್ರ ಶ್ರೇಷ್ಠ ಸರಕಾರಿ ಶಾಲೆಗಳೆಂಬ ತುಷ್ಟೀಕರಣ ಕೀಳರಿಮೆ ಬಿಟ್ಟು ಸರಕಾರಿ ಶಾಲೆಯಲ್ಲಿ ಒಳ್ಳೆಯ ಶಿಕ್ಷಣ ನೀಡಲು ಶಿಕ್ಷಕರಲ್ಲಿ ವಿನಂತಿಸಿದರು. ಕಾತ್ರಾಳ ಆಶ್ರಮದ ಅಮೃತಾನಂದ ಶ್ರೀಗಳು ಮಾತನಾಡಿ, ಶಿಕ್ಷಕರ ಸ್ಥಾನ ದೊಡ್ಡದು. ಮಕ್ಕಳನ್ನು ದೇಶದ ಆಸ್ತಿವಂತರನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.ಮಂಜುನಾಥ ಜುನಗೊಂಡ ಉಪನ್ಯಾಸ ನೀಡಿ, ಚಂದ್ರಶೇಖರ ನುಗ್ಗಿ ಮಾತನಾಡುವಾಗ ಕೂಲಿ ಕಾರ್ಮಿಕರ ಮಕ್ಕಳು, ಗಾರೆ ಕೆಲಸ ಮಾಡುವರ ಮಕ್ಕಳು, ದೀನ-ದಲಿತರ, ಶೋಷಿತ,ಹಿಂದುಳಿದವರ ಮಕ್ಕಳು ಮಾತ್ರ ಸರಕಾರಿ ಶಾಲೆಗಳಲ್ಲಿ ಶಿಕ್ಷಣ ಪ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಹಾಗಾದರೆ ಶಿಕ್ಷಕರ ಮಕ್ಕಳು ಯಾವ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ? ಅವರ ಮಾತಿನಲ್ಲಿ ಶಿಕ್ಷಕರ ಮಕ್ಕಳು ಖಾಸಗಿ ಶಾಲೆಗಳಲ್ಲೇ ಕಲಿಯುತ್ತಿದ್ದಾರೆ ಎಂಬ ದಾಟಿ ಬಂದಿದೆ. ಹೀಗಾಗಿ ಸರಕಾರಿ ಶಾಲಾ ಶಿಕ್ಷಕರಿಗೆ ಸರಕಾರಿ ಶಾಲೆಗಳ ಮೇಲೆಯೇ ವಿಶ್ವಾಸವಿಲ್ಲವೇ ಎಂಬುವಂತಹ ವಾತಾವರಣ ನಿರ್ಮಾಣವಾದಂತೆ ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಐಪಿಟಿಎಫ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ, ಇಂಡಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎಸ್. ಚಾಂದಕವರೆ, ಡಾ|ಕಾಂತು ಇಂಡಿ ಮಾತನಾಡಿದರು. ವೇದಿಕೆಯ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಅಲಗೂರ, ಸಹಕಾರ ರತ್ನ ಪುರಸ್ಕೃತ ಶ್ರೀಮಂತ ಇಂಡಿ, ಎಸ್.ಆರ್. ನಡಗಡ್ಡಿ, ಎ.ಎಸ್. ಲಾಳಸೇರಿ, ಪ್ರಾಥಮಿಕ ಶಾಲಾ ಶಿಕ್ಷಕರ ಇಂಡಿ ಘಟಕದ ಅಧ್ಯಕ್ಷ ಎಸ್.ವಿ. ಹರಳಯ್ಯ, ಜೆಬಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಅಲ್ಲಾಭಕ್ಷ ವಾಲೀಕಾರ, ಡಿ.ಜಿ. ರಾಠೋಡ, ಎಂ ಎಂ. ನೇದಲಗಿ, ಪಿ.ಎ. ಎಲಗಾರ, ಪಿ జి. ಕಲ್ಮನಿ ಸೇರಿದಂತೆ ಮತ್ತಿತರರಿದ್ದರು. ಸಹಕಾರ ರತ್ನ ಪುರಸ್ಕೃತ ಶ್ರೀಮಂತ ಇಂಡಿ,ಶಿಕ್ಷಕರಾದ ಸುರೇಶ ಅವರಾದಿ, ರವೀಂದ್ರ ಆಳೂರ, ಜಯರಾಮ ಚವ್ಹಾಣ, ಹಿರಿಯ ಶಿಕ್ಷಕರಾದ ಎಂ.ಕೆ. ಲಿಗಾಡೆ, ಚನಮಲ್ಲಪ್ಪ ಚನಗೊಂಡ, ಕೆ.ವಿ ಪಾಟೀಲ ಆರ್ ವಿ ಮೊಮಿನ, ಎಸ್ ಬಿ ಗೌರಿ, ಅಂಬಣ್ಣ ಸುಣಗಾರ, ಪ್ರಭು ಹೊಸಮನಿ, ಎಸ್. ಆರ್. ಗಿಡಗಂಟಿ, ಜೆ.ಡಿ. ಕೊಟ್ಟಾಳ ಮತ್ತಿತರನ್ನು ಸನ್ಮಾನಿಸಲಾಯಿತು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button