“ಸ್ವಾತಂತ್ರ್ಯ ಜಯದ ಸಂಭ್ರಮ”…..

ಭಾರತೀಯರ ಒಗ್ಗಟ್ಟಿನ ಕೊಂಡಿ ಸ್ವಾತಂತ್ರ
ನೂರಾರು ವರ್ಷಗಳ ಹೋರಾಟದ ಫಲ
ಸ್ವಾತಂತ್ರ್ಯ
ಸಾವಿರಾರು ಕಲೆಗಳು ಇನಿಯ ಧ್ವನಿ ಸ್ವಾತಂತ್ರ್ಯ
1947 ಅಗಸ್ಟ್ 15 ರಂದು ಪಡೆಯಿತು
ಸ್ವಾತಂತ್ರ್ಯ.
ಕುಟ್ಟಿ ಪುಡಿ ಮಾಡಿದರು ದಾಸ್ಯದ ಬೇಡಿಯ
ಅಂದು
ಗಗನ ಚುಂಬಿ ಕಂಗೊಳಿಸಿತು ಭಾರತದ
ಧ್ವಜವು ಇಂದು
ಎಲ್ಲರ ಮನದಲ್ಲಿ ತುಂಬಿರಲಿ ದೇಶಭಕ್ತಿ ಎಂದು
ಮಾಡಿದ ಬಲಿದಾನ ಮಾನಸದಿಂದ
ಮರೆಯಾಗದಿರಲಿ ಇಂದು
ವೀರರ ಅದ್ಭುತ ಕೊಡುಗೆಗೆ ನಮಿಸೋಣ
ಭರವಸೆಯ ಪೂರ್ಣ ಭವಿಷ್ಯವನ್ನು
ಸ್ವೀಕರಿಸೋಣ.
ಇನ್ನಷ್ಟು ಸದೃಢ ದೇಶ ಕಟ್ಟಲು ಶ್ರಮಿಸೋಣ
ಸ್ವಾತಂತ್ರ್ಯದ ಮಹಾನ್ ಜಯವನ್ನು
ಸಂಭ್ರಮಿಸೋಣ.
ದೇಶಕ್ಕಾಗಿ ಹೋರಾಡಿದ ವೀರಾಗ್ರಣಿಗಳನ್ನು
ಸ್ಮರಿಸೋಣ
ಉಜ್ವಲ ನಾಳೆಗಾಗಿ ಎಲ್ಲರೂ ಒಟ್ಟಾಗಿ
ಕೈಜೋಡಿಸೋಣ.
ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವನ್ನು
ಹೆಮ್ಮೆಯಿಂದ ಆಚರಿಸೋಣ.
ನಾಯಕರು ಹಾಕಿಕೊಟ್ಟ ಹಾದಿಯಲ್ಲಿ
ಮುನ್ನಡೆಯೋಣ.
ಕು. ಜ್ಯೋತಿ ಆನಂದ
ಚಂದುಕರ ಬಾಗಲಕೋಟ
