ಸಪ್ಟೆಂಬರ್.15 ರಂದು ಗುದ್ಲಿ ಕಾಯಕಯೋಗಿ ಬಸವಪ್ಪ ಶರಣರ 42 ನೆಯ ಪುಣ್ಯ ಸ್ಮರಣೆ.

ಹುನಗುಂದ ಸಪ್ಟೆಂಬರ್.11

ಪಟ್ಟಣದ ಬಸವಪ್ಪ ಹಾದಿಮನಿ ಶರಣ ತತ್ವ ದರ್ಶನ ಟ್ರಸ್ಟ್ ಮತ್ತು ತಾಲೂಕಾ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆಯ ಸಹಯೋಗದಲ್ಲಿ ಸೆ.15 ರಂದು ಶುಕ್ರವಾರ ಬೆಳಗ್ಗೆ 1೦ ಗಂಟೆಗೆ ಹುನಗುಂದದ ನ್ಯಾಯಾಲಯದ ಎದುರಿನ ಗದ್ದುಗೆಯಲ್ಲಿ ಗುದ್ಲಿ ಕಾಯಕಯೋಗಿ ಬಸವಪ್ಪ ಶರಣರ 42ನೆಯ ಪುಣ್ಯ ಸ್ಮರಣೆ ದತ್ತಿ ಉಪನ್ಯಾಸ,ಕೃಷಿ ಪ್ರಶಸ್ತಿ ಹಾಗೂ 15 ನೆಯ ಮನೆ ಮನೆಗಳಿಗೆ ವಚನ ಸೌರಭ ಕಾರ್ಯಕ್ರಮ ಜರುಗಲಿದೆ.ಚಿತ್ತರಗಿ ಸಂಸ್ಥಾನಮಠ ಇಳಕಲ್ಲ ಗುರುಮಹಾಂತ ಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಿಕೊಳ್ಳಲಿದ್ದಾರೆ.ಅಮೀನಗಡ ಯರಗೋನಾಳದ ಶಂಕರ ರಾಜೇಂದ್ರ ಸ್ವಾಮಿಗಳು ಅಧ್ಯಕ್ಷತೆಯನ್ನು ವಹಿಸಿಕೊಳ್ಳವರು.

ಜಾನಪದ ಕಲಾವಿದೆ ಹಾಗೂ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತೆ ಗುರಮ್ಮ ಸಂಕಿನಮಠ ಮುಖ್ಯ ಅತಿಥಿಗಳಾಗಿ ಆಗಮಿಸಿಲಿದ್ದು.ಜಮಖಂಡಿ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಹಿರಿಯ ಸಾಹಿತಿ ಬಸವರಾಜ ಕಡ್ಡಿ ದತ್ತಿ ಉಪನ್ಯಾಸವನ್ನು ನೀಡಿಲಿದ್ದಾರೆ.ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎ.ಎಸ್.ಪಾವಟೆ ವಚನ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಪ್ರಭು ಮಾಲಗಿತ್ತಿಮಠ ಉಪಸ್ಥಿತಿಯನ್ನು ವಹಿಸಲಿದ್ದು.ಈ ಬಾರಿಯ ಕೃಷಿ ಪ್ರಶಸ್ತಿಯನ್ನು ಬದಾಮಿಯ ಶಿವಪ್ಪ ಕುರಿ ಅವರಿಗೆ ನೀಡಿ ಗೌರವಿಸಲಾಗುವುದು.ಜಮಖಂಡಿಯ ಲಕ್ಷ್ಮೀ ಬಾಯಿ ಜುಲ್ಪಿ,ಮರೋಳದ ಅಶೋಕ ತೋಟದ ಅವರಿಗೆ ಸನ್ಮಾನ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ವ್ಹಿ.ಎಂ.ಹಾದಿಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button