ಅದ್ದೂರಿಯಾಗಿ ಜರುಗಿದ ಹುನಗುಂದದ ಶ್ರೀ ಸಂಗಮೇಶ್ವರರ ರಥೋತ್ಸವ.
ಹುನಗುಂದ ಸಪ್ಟೆಂಬರ್.11

ಶ್ರಾವಣ ಮಾಸದ ಕೊನೆಯ ಸೋಮವಾರ ದಂದು ಪಟ್ಟಣದ ಶ್ರೀ ಸಂಗಮೇಶ್ವರ ಮಹಾ ರಥೋತ್ಸವವು ನಾಡಿನ ಹರಗುರು ಚರಮೂರ್ತಿಗಳ,ಮಠಾಧೀಶರ ಹಾಗೂ ಅಪಾರ ಸಂಖ್ಯೆ ಭಕ್ತ ಜನ ಸಾಗರದ ಮಧ್ಯೆದಲ್ಲಿ ಶ್ರೀ ಸಂಗಮೇಶ್ವರರ ಜಯ ಘೋಷದೊಂದಿಗೆ ಅದ್ದೂರಿಯಾಗಿ ರಥೋತ್ಸವ ಜರುಗಿತು.
ವಿವಿಧ ಹೂವುಗಳಿಂದ ಶೃಂಗಾರಗೊಂಡ ರಥವನ್ನು ಎಳೆಯಲು ಪ್ರಾರಂಭಿಸುತ್ತಿದ್ದಂತೆ ಸಹಸ್ರರಾರು ಸಂಖ್ಯೆಯಲ್ಲಿ ಸೇರಿದ ಭಕ್ತ ಜನ ಸಾಗರ ಹರ್ಷೋದ್ಗಾರ ಮುಗಿಲು ಮುಟ್ಟಿತು.ರಥ ಬೀದಿಯ ಅಕ್ಕ ಪಕ್ಕ ನಿಂತಕೊಂಡು ಭಕ್ತರು ರಥಕ್ಕೆ ಉತ್ತತ್ತಿ,ಬಾಳೆಹಣ್ಣು ಅರ್ಪಿಸಿ ಭಕ್ತಿ ಮೆರೆದರು.ಜಾತ್ರೆಯ ನಿಮಿತ್ಯ ಸೋಮವಾರ ಬೆಳಗ್ಗಿನಿಂದಲೂ ದೇವಸ್ಥಾನದಲ್ಲಿ ವಿಶೇಷ ಪೂಜೆ,ಅಭಿಷೇಕ ಸೇರಿದಂತೆ ಅನೇಕ ಧಾರ್ಮಿಕ ಕೈಂಕರ್ಯಗಳು ಜರುಗಿದವು.
ರಥೋತ್ಸವ ಯಶಸ್ವಿಯ ನಂತರ ಪಟಾಕಿ ಸಿಡಿಸಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.ಪ್ರತಿ ವರ್ಷ ಶ್ರಾವಣ ಮಾಸದ ಆರಂಭವಾಗುತ್ತಿದ್ದಂತೆ ಶ್ರೀ ಸಂಗಮೇಶ್ವರ ದೇವಸ್ಥಾನ ಜೀಣೋದ್ದಾರ ಸಮಿತಿಯಿಂದ ಸಾಕಷ್ಟು ಧಾರ್ಮಿಕ ಕೈಂಕರ್ಯಗಳನ್ನು ಮಾಡುವುದರ ಜೊತೆಗೆ ಸಾಮೂಹಿಕ ವಿವಾಹ ಮತ್ತು ಇಷ್ಟಲಿಂಗದೀಕ್ಷೆ ಕಾರ್ಯವನ್ನು ಕೂಡಾ ಜರುಗಿವೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ