ಜ.5 ರಂದು ಮಾಜಿ ಶಾಸಕ ನಡಹಳ್ಳಿ ಹೇಳಿಕೆಯ ವಿರುದ್ಧ – ಪಂಚಮಸಾಲಿ ಸಮಾಜ ಪ್ರತಿಭಟನೆ.
ಹುನಗುಂದ ಜನೇವರಿ.3

ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮುದ್ದೇಬಿಹಾಳದ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ನೀಡಿದ ಹೇಳಿಕೆಯನ್ನು ಖಂಡಿಸಿ ಜ. 5 ರಂದು ಹುನಗುಂದ ಮತ್ತು ಇಳಕಲ್ ತಾಲೂಕಾ ಪಂಚಮಸಾಲಿ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಪಂಚಮಸಾಲಿ ಸಮಾಜದ ತಾಲೂಕಾ ಘಟಕದ ಅಧ್ಯಕ್ಷ ಶಂಕ್ರಪ್ಪ ನೇಗಲಿ ಹೇಳಿದರು.ಮಂಗಳವಾರ ಪಟ್ಟಣದ ಬಸವ ಮಂಟಪದಲ್ಲಿ ಮಾಜಿ ಶಾಸಕ ಎ.ಎಸ್.ನಡಹಳ್ಳಿ ಹೇಳಿಕೆ ವಿರುದ್ದ ಹೋರಾಟದ ಕುರಿತು ಕರೆಯಲಾದ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಭಟನೆ ದಿನ ಪಟ್ಟಣದ ಬಸವ ಮಂಟಪದಿಂದ ತಹಶೀಲ್ದಾರ್ ಕಚೇರಿ ವರಗೆ ಪಾದಯಾತ್ರೆ ಮೂಲಕ ತೆರಳಲಾಗುವುದು.ವಿ,ಮ,ವೃತ್ತದಲ್ಲಿ ನಡಹಳ್ಳಿ ಅವರ ಪ್ರತಕೃತಿ ದಹನ ಮಾಡಲಾಗುವುದು ಎಂದರು.ಮುಖಂಡರಾದ ಸಂಗಣ್ಣ ಗಂಜೀಹಾಳ, ಮಹಾಂತೇಶ ಪರೂತಿ,ಮಹಾಂತೇಶ ಮದರಿ, ಅಮರೇಶ ನಾಗೂರು,ರವಿ ಹುಚನೂರು,ಮುತ್ತಪ್ಪ ಗಂಜೀಹಾಳ,ಮಹಾಂತಪ್ಪ ಪಲ್ಲೇದ, ಬಿ.ಎನ್. ನಾಗನಗೌಡರ,ಮಲ್ಲಿಕಾರ್ಜುನ ಲೆಕ್ಕಿಹಾಳ,ಶಿವರಾಜ ಪಾಟೀಲ, ಬಸವರಾಜ ಗೊಣ್ಣಾಗರ,ಜಕ್ಕಪ್ಪ ಹುನ್ನಳ್ಳಿ,ಪರಪ್ಪ ಕೊಕಾಟೆ ಬಸೆಟ್ಟಪ್ಪ ನಾಗೂರ ಸೇರಿದ್ದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ