ದುಶ್ಚಟಗಳಿಗೆ ದಾಸರಾದಂತ ವ್ಯಕ್ತಿಗಳ ಒಳಿತಿಗಾಗಿ ಮದ್ಯ ವ್ಯಸನೀಯರಿಗೆ ಬಿಡುಗಡೆ ಯಿಂದ ಮುಕ್ತರಾಗಲು – ಇಂಥಹ ಶಿಬಿರ ಅತ್ಯ ಅವಶ್ಯಕ ಶಾಸಕ ಡಾ, ಶ್ರೀ ನಿವಾಸ್ ಎನ್.ಟಿ.
ಕೂಡ್ಲಿಗಿ ಸ.26

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಕೊಟ್ಟೂರು ರಸ್ತೆಯಲ್ಲಿ ಬರುವ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ನಡೆದ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಹಮ್ಮಿ ಕೊಂಡಿರುವ 1853 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭವನ್ನು ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಉದ್ಘಾಟಿಸಿ ಮಾತನಾಡಿದರು. ಜೀವ ಸಂಕುಲದಲ್ಲಿ ಮನುಷ್ಯ ಕುಲ ಅತ್ಯಂತ ಶ್ರೇಷ್ಠವಾದದ್ದು. ನಮ್ಮಲ್ಲಿ ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲಿಬೇಡಿ ಹುಚ್ಚಪ್ಪಗಳಿರ ಎಂಬ ಮಾತನ್ನು ಪುರಂದರದಾಸರು ಹೇಳಿದ್ದಾರೆ. ನಮ್ಮ ಜೀವನಕ್ಕೆ ಏನೂ ಬೇಕು ಅದನ್ನು ಪಡೆದು ಕೊಂಡು ಒಳ್ಳೆಯ ರೀತಿಯಲ್ಲಿ ಒಳ್ಳೆಯ ಜೀವನ ರೂಪಿಸಿ ಕೊಳ್ಳುವ ದಾರಿಯಲ್ಲಿ ಸಾಗಬೇಕಾಗಿದೆ ಎಂದೂ ತಿಳಿ ಹೇಳಿದರು.

ನಮ್ಮಲ್ಲಿ ದುಶ್ಚಟಗಳಿಗೆ ದಾಸರಾದಂತಹ ವ್ಯಕ್ತಿಗಳ ಒಳಿತಿಗಾಗಿ ಎರಡು ಸಂಸ್ಥೆಗಳು ಸೇರಿ ಶಿಬಿರವನ್ನು ಹಮ್ಮಿಕೊಂಡು ಪ್ರಾಯೋಗಿಕವಾಗಿ ವೈದ್ಯರ ಸಲಹೆಯನ್ನು ಗಮನದಲ್ಲಿಟ್ಟು ಕೊಂಡು ಸರಿ ದಾರಿಗೆ ತರುವ ಹಾಗೂ ಸಮಾಜದಲ್ಲಿ ಆಗುತ್ತಿರುವ ತಪ್ಪುಗಳನ್ನು ತಿದ್ದುವ ನಿಟ್ಟಿನಲ್ಲಿ ವೈಚಾರಿಕ ಅರಿವು ಮೂಡಿಸುತ್ತಿರುವ ಕೆಲಸ ಮೆಚ್ಚುವಂತದ್ದು ಎಂದೂ ತಿಳಿಸಿದರು. ಈ ಸಂದರ್ಭದಲ್ಲಿ ಉಪ ತಹಶೀಲ್ದಾರರಾದ ನೇತ್ರಾವತಿ, ಶ್ರೀ ಶರಣ ಬಸವೇಶ್ವರ ದಾಸೋಹ ಮಠದ ಶ್ರೀ ದಾ. ಮ. ಐಮಡಿ ಶರಣಾರ್ಯ ಸ್ವಾಮೀಜಿಗಳು. ಪ.ಪಂ. ಅಧ್ಯಕ್ಷರಾದ ಕಾವಲ್ಲಿ ಶಿವಪ್ಪ ನಾಯಕ, ಪ.ಪಂ ಮುಖ್ಯಧಿಕಾರಿಗಳು ಸಹ ಶಿಬಿರದ ಕಾರ್ಯಕ್ರಮ ಕುರಿತು ಮಾತನಾಡಿದರು. ಹಾಗೆ ಈ ಸಂದರ್ಭದಲ್ಲಿ ಪ.ಪಂ. ಸಸದಸ್ಯರು, ಬಣಕಾರ ವೀರಣ್ಣ ಕುಪ್ಪಿನಕೆರೆ, ಮುಖಂಡರು, ಶಿಬಿರಾರ್ಥಿಗಳು, ವಿವಿಧ ಸಂಘಗಳ ಮಹಿಳಾ ಸದಸ್ಯರು, ಸಾರ್ವಜನಿಕರು, ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ರಾಘವೇಂದ್ರ.ಬಿ. ಸಾಲುಮನೆ.ಕೂಡ್ಲಿಗಿ.ವಿಜಯನಗರ