ಸಂವಿಧಾನದಿಂದ ಸರ್ವಧರ್ಮ ಸಮ ಭವದ ಪ್ರಜಾಪ್ರಭುತ್ವ – ಡಾ.ಎಸ್.ಕಾಂತರಾಜ್.
ತರೀಕೆರೆ ಸಪ್ಟೆಂಬರ್.15

ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಾನತೆಯನ್ನು ಸಂವಿಧಾನ ಬದ್ಧವಾಗಿ ಜಾರಿ ಮಾಡಲಾಗಿದೆ. ಸರ್ವರಿಗೂ ಸಹ ವ್ಯಕ್ತಿ ಗೌರವವನ್ನು ನೀಡಿದೆ ಎಂದು ಉಪ ವಿಭಾಗಾಧಿಕಾರಿ ಡಾ. ಎಸ್ ಕಾಂತರಾಜ್ ರವರು ಇಂದು ಜ್ಯೂನಿಯರ್ ಕಾಲೇಜ್ ಮೈದಾನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಮತ್ತು ಸಮಾಜ ಕಲ್ಯಾಣ ಇಲಾಖೆ ತರೀಕೆರೆ, ವತಿಯಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಭಾರತದ ಸಂವಿಧಾನ ಪ್ರಸ್ತಾವನೆಯನ್ನು ವಿವರವಾಗಿ ಹೇಳಿದರು. ತಹಶೀಲ್ದಾರ್ ವಿ ಎಸ್ ರಾಜೀವ ರವರು ಸಂವಿಧಾನದ ಪೀಠಿಕೆ ಓದಿದರು. ಪುರಸಭಾ ಅಧ್ಯಕ್ಷರಾದ ಪರಮೇಶ ಅವರು ಮಾತನಾಡಿ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಸರ್ವರಿಗೂ ಸಮಬಾಳು ಜಾರಿಯಲ್ಲಿರುವಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದ್ದು, ರಾಜಕೀಯವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಎಲ್ಲವೂ ಸಹ ಸರಿಸಮವಾಗಿ ಇರಬೇಕೆಂದು ಡಾ. ಬಿಆರ್ ಅಂಬೇಡ್ಕರ್ ರವರ ಸಂವಿಧಾನದಂತೆ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದೆ ಎಂದು ಹೇಳಿದರು. ಪುರಸಭಾ ಸದಸ್ಯರಾದ ದಾದಾಪೀರ್ ಮಾತನಾಡಿ ಅಂಬೇಡ್ಕರ್ ಅವರ ಆಶಯದಂತೆ ಸಂವಿಧಾನವನ್ನು ಸರಿಯಾಗಿ ಜಾರಿ ಮಾಡಲಾಗಿಲ್ಲ.
ನಾವು ಜಾತ್ಯತೀತ ಸಂವಿಧಾನವನ್ನು ಉಳಿಸಿಕೊಳ್ಳಬೇಕು,ನಮ್ಮ ದೇಶದ ಪ್ರಜಾಪ್ರಭುತ್ವ ವಿಶ್ವದಲ್ಲಿಯೇ ಅತಿ ಮೌಲ್ಯದಿಂದ ಕೂಡಿದೆ ಎಂದು ಹೇಳಿದರು. ಟಿ ಎಂ ಭೋಜರಾಜ್ ಮಾತನಾಡಿ ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟದವರೆಗೂ ಸ್ವಾತಂತ್ರ್ಯ ನೀಡಿರುವ ಸಂವಿಧಾನ ಮೂಲಭೂತ ಹಕ್ಕುಗಳನ್ನು ಕೊಟ್ಟಿದ್ದು, ಬಸವಣ್ಣನವರ ಅನುಭವ ಮಂಟಪ, ಬುದ್ಧನ ಶಾಂತಿ ಮತ್ತು ಸಮಾನತೆಯಂತೆ ಭಗವದ್ಗೀತೆಯ, ಖುರಾನ್, ಬೈಬಲ್ ನಂತೆ ಸಂವಿಧಾನವು ಪವಿತ್ರವಾದದ್ದು ಎಂದು ಹೇಳಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗೀತಾ ಶಂಕರ್ ಅವರು ಮಾತನಾಡಿ ಸ್ವತಂತ್ರ ಭಾರತದ ವ್ಯವಸ್ಥೆ ಹೇಗಿರಬೇಕು ಎಂಬುದನ್ನು ಸಂವಿಧಾನದಲ್ಲಿದ್ದಂತೆ ಶಾಸಕಾಂಗ,ಕಾರ್ಯಾಂಗ, ನ್ಯಾಯಾಂಗಗಳು ನಡೆಯುತ್ತಿವೆ. ಪ್ರಜಾಪ್ರಭುತ್ವ ಸಾರ್ವಭೌಮತ್ವವು ಜಾರಿಯಲ್ಲಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಚಿತ್ರಕಲಾ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಜಯಗಳಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದಪ್ಪ, ಸಿ ಡಿ ಪಿ ಓ ಜ್ಯೋತಿ ಲಕ್ಷ್ಮಿ, ಎ ಇ ಇ ಚಿದಾನಂದಪ್ಪ ಉಪಸ್ಥಿತರಿದ್ದು ಜಿಎಸ್ ಸತೀಶ್ ನಿರೂಪಿಸಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್ ಮಂಜುನಾಥ್ ಸ್ವಾಗತಿಸಿ, ದೈಹಿಕ ಶಿಕ್ಷಣ ಪರೀಕ್ಷಕರಾದ ಎಂ ಪ್ರಕಾಶ್ ವಂದಿಸಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ