ಭಾರತ ಕಂಡ ಯಶಸ್ವಿ ಇಂಜಿನೀಯರ್ ಸರ್ ಎಂ ವಿ ವಿಶ್ವೇಶ್ವರಯ್ಯ – ಪರಮೇಶ್.
ತರೀಕೆರೆ ಸಪ್ಟೆಂಬರ್.15





ಎಲ್ಲರೊಂದಿಗೆ ಬೆರೆತು ಅಭಿವೃದ್ಧಿಯತ್ತ ಕೆಲಸ ಮಾಡಬೇಕು ಎಂದು ಪುರಸಭಾ ಅಧ್ಯಕ್ಷರಾದ ಪರಮೇಶ್ ಹೇಳಿದರು. ಅವರು ಇಂದು ತರೀಕೆರೆ ತಾಲೂಕು ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ರವರು ಪ್ರವಾಸಿ ಮಂದಿರದ ಆಭರಣದಲ್ಲಿ ಏರ್ಪಡಿಸಿದ್ದ ಇಂಜಿನಿಯರ್ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು. ಸರ್ ಎಂ ವಿಶ್ವೇಶ್ವರಯ್ಯನವರು ಇಂಜಿನಿಯರ್ಸ್ ಗಳಿಗೆ ಮಾದರಿಯಾಗಿದ್ದಾರೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಅವರು ಭಾರತ ಕಂಡ ಅತ್ಯಂತ ಯಶಸ್ವಿ ಇಂಜಿನಿಯರ್ ಎಂದು ಹೇಳಿದರು. ಉದ್ಘಾಟನೆ ಮಾಡಿದ ಲೋಕ ಯೋಗಿ ಇಲಾಖೆ ಸಹಾಯಕ ಅಭಿಯಂತರರಾದ ನಾಗೇಂದ್ರಪ್ಪ ಮಾತನಾಡಿ ರೈತರಿಗಾಗಿ ನೀರಾವರಿಗೆ ಅನುಕೂಲವಾಗುವಂತೆ, ಕೆ ಆರ್ ಎಸ್ ಡ್ಯಾಮ್, ಹಾಗೂ ಶಿವನಸಮುದ್ರ ವಿದ್ಯುತ್ ಚಕ್ತಿ ಉತ್ಪಾದನಾ ಘಟಕ, ಮೆಟ್ಟೂರು ಡ್ಯಾಮ್ ನಿರ್ಮಾಣ, ನಂತರ ಮೈಸೂರಿನ ದಿವಾನರಾಗಿ ಸೇವೆ ಸಲ್ಲಿಸಿದ್ದಾರೆ.
ಅವರು ದೇಶ ಭಕ್ತರಾಗಿದ್ದು ಶ್ರಮಪಟ್ಟು ದುಡಿಯಬೇಕೆನ್ನುವುದೇ ಅವರ ಉದ್ದೇಶವಾಗಿತ್ತು ಎಂದು ಹೇಳಿದರು. ಪುರಸಭಾ ಮುಖ್ಯ ಅಧಿಕಾರಿಯದ ಎಚ್ ಪ್ರಶಾಂತ್ ಮಾತನಾಡಿ ಸರ್ ಎಂ ವಿ ರವರು ಸಮಾಜದ ಉದ್ದಾರಕ್ಕಾಗಿ ದುಡಿದವರು. ದಕ್ಷ ಆಡಳಿತಗಾರರಾಗಿ ಆರ್ಥಿಕ ತಜ್ಞರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರಾಗಿದ್ದಾರೆ. ಸಾಹಿತ್ಯ,ಶಿಕ್ಷಣ, ನೀರಾವರಿ,ಆಡಳಿತ ಕ್ಷೇತ್ರದಲ್ಲಿ ಚಾಪೂ ಮೂಡಿಸಿದ್ದರು. ಉತ್ತಮ ಬರಹಗಾರರಾಗಿದ್ದರು, ರೀ ಕನ್ಸ್ಟ್ರಕ್ಷನ್ ಆಫ್ ಇಂಡಿಯಾ, ಹಾಗೂ ನೇಶನ್ ಬಿಲ್ಡಿಂಗ್ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಇಂಜಿನಿಯರ್ಸ್ ಅಸೋಸಿಯೇಷನ್ ರವರು ತರೀಕೆರೆಯ ಅಭಿವೃದ್ಧಿಗೆ ನವ ನಿರ್ಮಾಣಕ್ಕೆ ಪೂರಕವಾಗಿ ಕ್ರಮ ವಹಿಸಬೇಕು ಎಂದು ಹೇಳಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಕಚೇರಿಯ ಎ ಇ ಇ ಚಿದಾನಂದಪ್ಪ ಆರ್ ರವರು ಮಾತನಾಡಿ ವಿಶ್ವೇಶ್ವರಯ್ಯ ಅವರಂತೆ ಶಿಸ್ತು ಬದ್ಧತೆಯನ್ನು ಎಲ್ಲಾ ಇಂಜಿನಿಯರ್ಸ್ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು. ನಿವೃತ್ತ ಎ ಇ ಇ, ವಾಗೀಶ್ ರವರು ಮಾತನಾಡಿ ಸರ್ ಎಂ ವಿಶ್ವೇಶ್ವರಯ್ಯ ರವರು 1912 ರಿಂದ 18ರವರೆಗೆ ದಿವಾನರಾಗಿ ಸೇವೆ ಸಲ್ಲಿಸಿ ಮಾರಿಕಣಿವೆ ಡ್ಯಾಮ್, ಭದ್ರಾ ಡ್ಯಾಮ್, ಹಾಗೆಯೇ ಕರ್ನಾಟಕ ರಾಜ್ಯದ ಎಲ್ಲಾ ಡ್ಯಾಮ್ ಗಳ ನಿರ್ಮಾಣಕ್ಕೆ ಮಾರ್ಗದರ್ಶನ ನೀಡಿದ್ದಾರೆ.
ಮೇಕೆದಾಟು ಡ್ಯಾಮ್ ನಿರ್ಮಾಣಕ್ಕೆ ಅಂದೇ ಅವರು ಸಲಹೆ ನೀಡಿದ್ದರೂ ಎಂದು ಹೇಳಿದರು. ಸಂಘದ ಸದಸ್ಯರಾದ ಕೆಎನ್ ಚೇತನ್ ಸಂಘದ ಹುಟ್ಟು ಬೆಳವಣಿಗೆ ಮತ್ತು ವರದಿಯನ್ನು ಮಂಡನೆ ಮಾಡಿದರು. ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಕಚೇರಿಯ ಏ ಇ ಇ, ಜೈನ್ ಉಲ್ಲಾಬುಧಿನ್ ರವರು ಎಲ್ಲಾ ಇಂಜಿನಿಯರ್ ಗಳಿಗೆ ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವೀನ್ ಜಿ ನಾಯಕ್ ರವರು ವಹಿಸಿದ್ದರು. ವೇದಿಕೆಯಲ್ಲಿ ವಸಂತಕುಮಾರ್, ಟಿ ಆರ್ ಮುರಳಿ, ಚಂದ್ರಶೇಖರ್ ಉಪಸಿತರಿದ್ದು ಶಿವಮೊಗ್ಗದ ಸೈಯದ್ ರವರು ದೇಶಭಕ್ತಿ ಗೀತೆಗಳನ್ನು ಹಾಡಿದರು. ಸದ್ವಿದ್ಯಾ ಶಾಲೆಯ ಮಕ್ಕಳಿಂದ ನೃತ್ಯರೂಪಕ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು ಧಾನಿಗಳಾದ ಸಪ್ತಗಿರಿ ಮಂಜುನಾಥ್ ರವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಹಾಗೂ ಎಲ್ಲಾ ಇಂಜಿನಿಯರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಗೋಪಾಲಕೃಷ್ಣ ನಿರೂಪಿಸಿ ರವಿಕುಮಾರ್ ಸ್ವಾಗತಿಸಿ ಸುನಿತಾ ಕಿರಣ್ ಪ್ರಾರ್ಥಿಸಿ, ವಿನಯ್ ಅಭಿ ವಂದಿಸಿದರು.
ಜಿಲ್ಲಾ ವರದಿಗಾರರು.ಎನ್.ವೆಂಕಟೇಶ್.ತರೀಕೆರೆ