ಹೊರಗುತ್ತಿಗೆ ನೌಕರರ ಸಂಘದ ನೂತನ ತಾಲೂಕಾಧ್ಯಕ್ಷರಾಗಿ ಸುರೇಶ ಬಿಸನಾಳ ಉಪಾಧ್ಯಕ್ಷರಾಗಿ ಮಲ್ಲಪ್ಪ ಚಲವಾದಿ ಆಯ್ಕೆ.
ಹುನಗುಂದ ಸಪ್ಟೆಂಬರ್.16

ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘದ ಹುನಗುಂದ ತಾಲೂಕ ಘಟಕದ ನೂತನ ಅಧ್ಯಕ್ಷರಾಗಿ ಸುರೇಶ ಬಿಸನಾಳ ಮತ್ತು ಉಪಾಧ್ಯಕ್ಷರಾಗಿ ಮಲ್ಲಪ್ಪ ಚಲವಾದಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕಸ್ತೂರಿ ಕ್ಯಾತನಗೌಡ್ರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಹುಲಗಪ್ಪ ಚಲವಾದಿ ಅವರ ಪ್ರಕ್ರಿಯೆ ನಡೆಯಿತು.ಖಜಾಂಚಿಯಾಗಿ ಲಕ್ಷö್ಮಣ ಮಾದರ,ಜಂಟಿ ಕಾರ್ಯದರ್ಶಿಯಾಗಿ ರತ್ನವ್ವ ಹಿರೇಮನಿ,ಸಂಘಟನಾ ಕಾರ್ಯದರ್ಶಿ ಮಲ್ಲಮ್ಮ ಸುರಳಿಕಲ್ಲ ಆಯ್ಕೆ ಮಾಡಿ ಆದೇಶಿಸಿದ್ದಾರೆ.ಈ ವೇಳೆ ರಾಜ್ಯ ಜಂಟಿ ಕಾರ್ಯದರ್ಶಿ ಹುಲಗಪ್ಪ ಚಲವಾದಿ ಮಾತನಾಡಿ ಹೊರಗುತ್ತಿಗೆ ನೌಕರರ ಸೇವಾ ಭದ್ರತೆ ಮತ್ತು ಮೂಲಭೂತ ಸೌಕರ್ಯದ ಕುರಿತು ಅ.೧೧ ರಂದು ಬೆಂಗಳೂರನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.ಸಧ್ಯ ತಾಲೂಕ ಘಟಕವನ್ನು ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ಅಧ್ಯಕ್ಷರ ಗಮನಕ್ಕೆ ತಂದು ಎಲ್ಲರು ಸಂಘಟಿತರಾಗಿ ಹೋರಾಟದ ಮೂಲಕ ಸಮಸ್ಯೆಯ ಪರಿಹರಿಸಿಕೊಳ್ಳಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ನಿಮ್ಮ ಪರವಾಗಿ ಹೋರಾಟ ಮಾಡಲು ನಾವು ಸಿದ್ದ ಎಂದರು.ಸAಘದ ಜಿಲ್ಲಾಧ್ಯಕ್ಷ ರಾಜೇಶ ದೇಶಪಾಂಡೆ,ಉಪಾಧ್ಯಕ್ಷ ರಾಜು ಯಾದವಾಡ ಸೇರಿದಂತೆ ವಸತಿ ನಿಲಯದ ಹೊರ ಗುತ್ತಿಗೆ ನೌಕರರು ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ