50 ನೆಯ ವರ್ಷದ ಪುರಾಣ ಸುವರ್ಣ ಮಹೋತ್ಸವ ಸಮಾರಂಭದಲ್ಲಿ – ಸಪ್ತಪದಿ ತುಳಿದ 12 ಜೋಡಿ ನವ ದಂಪತಿ ಗಳು.
ಹುನಗುಂದ ಸಪ್ಟೆಂಬರ್.17

ಸಾಮೂಹಿಕ ವಿವಾಹದಿಂದ ಆರ್ಥಿಕ ಪರಸ್ಥಿತಿ ಯಲ್ಲಿರುವ ಎಷ್ಟೋ ಬಡ ಕುಟುಂಬಗಳಿಗೆ ಅನುಕೂಲವಾಗಿವೆ.ಇಂತಹ ಧಾರ್ಮಿಕ ಮತ್ತು ಸಮಾಜ ಮುಖಿ ಕಾರ್ಯಗಳನ್ನು 5೦ ವರ್ಷಗಳಿಂದ ಇದ್ದಲಗಿ ಗ್ರಾಮಸ್ಥರ ಮಾಡುತ್ತಾ ಬಂದಿರುವುದು ನಿಜಕ್ಕೂ ಮೆಚ್ಚಗೆ ವಿಷಯವಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ತಾಲೂಕಿನ ಇದ್ದಲಗಿ ಗ್ರಾಮದ ಶ್ರೀ ಶರಣ ಬಸವೇಶ್ವರ ದೇವಸ್ಥಾನ ಸಮಿತಿಯಿಂದ ಹಮ್ಮಿ ಕೊಳ್ಳಲಾಗಿದ್ದ 5೦ ನೆಯ ವರ್ಷದ ಪುರಾಣ ಸುವರ್ಣ ಮಹೋತ್ಸವ ಮತ್ತು ಮಹಾ ಮಂಗಲೋತ್ಸವ ಹಾಗೂ ಸರ್ವ ಧರ್ಮ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನೂತನವಾಗಿ ದಾಂಪತ್ಯ ಜೀವನ ಕಾಲಿಟ್ಟ ವಧು ವರರಿಗೆ ಶುಭ ಕೋರಿ ಮಾತನಾಡಿದ ಅವರು ಕಳೆದ 5೦ ವರ್ಷಗಳಿಂದ ಶ್ರಾವಣ ಮಾಸದಲ್ಲಿ ಶ್ರೀ ಶರಣ ಬಸವೇಶ್ವರರ ಪುರಾಣ ಪ್ರವಚನವನ್ನು ಇಡೀ ಹುನಗುಂದ ಮತಕ್ಷೇತ್ರದಲ್ಲಿ ನಿರಂತರವಾಗಿ ನಡೆಸಿಕೊಂಡು ಬಂದ ಏಕೈಕ ಗ್ರಾಮವೇ ಇದ್ದಲಗಿ ಗ್ರಾಮವಾಗಿದೆ.ಇಂತಹ ಕಲ್ಯಾಣ ಕಾರ್ಯಗಳು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚಾಗಿ ನೆರವೇರಬೇಕು.ಶ್ರೀ ಶರಣ ಬಸವೇಶ್ವರ ಸನ್ನಿಧಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನೀವುಗಳು ಭಾಗ್ಯವಂತರು ಎಂದರು.ಬಿಲ್ ಕೆರೂರದ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿಕೊಂಡು ಮಾತನಾಡಿ ಧಾರ್ಮಿಕ ಪರಂಪರೆಯನ್ನು ನಿರಂತರವಾಗಿ ಮುನ್ನೆಡಿಸಿಕೊಂಡು ಬರುತ್ತಿರುವ ಇದ್ದಲಗಿ ಗ್ರಾಮ ಸದಾಕಾಲ ಸುಭೀಕ್ಷೆಯಲ್ಲಿದೆ.ಇಂತಹ ಒಂದು ಪವಿತ್ರ ಸ್ಥಳದಲ್ಲಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ನಿಮ್ಮಗಳ ಭಾವಿ ಜೀವನ ಸುಖ ಕರವಾಗಿರಲಿ.ಸಂಸಾರದಲ್ಲಿ ಕಷ್ಟು ಸುಖಗಳನ್ನು ಸಮಾನವಾಗಿ ಸ್ವೀಕರಿಸಿ ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶವಂಗೆ ಎನ್ನುವಂತೆ ನಡೆದುಕೊಂಡು ಚಿಕ್ಕ ಸಂಸಾರ ಚೊಕ್ಕ ಸಂಸಾರ ನಿಮ್ಮದಾಗಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ 12 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಬಿಸನಾಳದ ಹನಮಪ್ಪಯ್ಯ ಗ್ಯಾನಪ್ಪಯ್ಯನವರ,ಪುರಾಣ ಪ್ರವಚನಕಾರ ವೇ.ಮೂ. ಎಂ.ಜಿ.ಗುರುಸಿದ್ದೇಶ್ವರ ಶಾಸ್ತ್ರಿ, ಚನ್ನಯ್ಯ ಹೊಸಗೌಡ್ರ,ವೇ.ಮೂ.ಶರಣಯ್ಯ ಮಂಟೇದೇವರಮಠ,ಶ್ರೀ ಶರಣಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಸಂಗಮೇಶ ಹಾವರಗಿ,ಗ್ರಾ.ಪಂ.ಸದಸ್ಯ ಎನ್.ಕೆ.ಮುಲ್ಲಾ,ಚಂದ್ರಶೇಖರ ಅಂಗಡಿ,ಮಲಕಾಜಪ್ಪ ಬಡ್ಡಿ,ಕುಮಾರಸ್ವಮಿ ಮಠ,ಸಂಗಯ್ಯ ಗಡ್ಡಿಮಠ,ಶಿವಪ್ಪ ಮೆನಸಿನಕಾಯಿ,ಗುರಪಾದಪ್ಪ ಆನೆಹೊಸೂರ,ಬಲವಂತರಾಯ ನಾಡಗೌಡ್ರ,ಅಮಿನಸಾಬ ಮುಗಳಿ,ಶಶಿಕಾಂತ ತಿಮ್ಮಾಪೂರ,ಈರಪ್ಪ ಬಡ್ಡಿ,ಪಕೀರಗೌಡ ಚೌಧರಿ,ಶಿದ್ದಲಿಂಗಯ್ಯ ಬೋನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಮಲ್ಲಿಕಾರ್ಜುನ