ಸೌಹಾರ್ದತೆಯ ಬದುಕು.

ಬೇಕಾಗಿದೆ ಇಂದು ಸೌಹಾರ್ದತೆಯ ಬದುಕು
ಬಿಟ್ಟು ಬದುಕಿರಿ ಒಂಟಿತನದ ಕೊಳಕು
ಬಾರದಿರಲಿ ಜೀವನದಲ್ಲಿ ನೋವಿನ ಅಳುಕು
ಸದಾ ಜೀವಿಸು ಸೌಜನ್ಯದಿ ಸಾಕು
ಬದುಕಿನಲಿ ಇರದಿರಲಿ ಸಮರ
ಸೌಜನ್ಯದಿ ಜೀವನವಾಗಲಿ ಅಮರ
ಸಮರವಿರೆ ಸಂತೋಷ ಬಹಳ ದೂರ
ಹಬ್ಬ ಹರಿದಿನಗಳನ್ನು ಆಚರಿಸಿ ಜಾತಿ ಮೀರಿದ
ಸಡಗರ
ಇರಲಿ ಪ್ರೀತಿ ಪ್ರೇಮದ ಸ್ವರ
ನಾವು ನಮ್ಮವರೆಂಬುವ ಮನಸ್ಸಿನ ಸುಮಧು
ರಮೂರು ದಿನದ ಬದುಕಿಗೆ ಬೇಕೆ ತಾತ್ಸರ
ಬಿಟ್ಟು ಬಿಡೋಣ ವೈಶಮ್ಯದ ಮತ್ಸರ
ನಗು ನಗುತ್ತಾ ಬಾಳಿ ಖುಷಿಕರ
ಸಮರದ ವಿರುದ್ಧ ಹಾಡಿ ಓಂಕಾರ
ನೆಮ್ಮದಿಯ ಬದುಕಿಗೆ ಅದುವೇ ಜೈಂಕಾರ
ಭಗವಂತನಿಂದ ಸಿಗುವದು ಒಲುಮೆಯ
ಸತ್ಕಾರ
ಸಮರಸವಿಲ್ಲದೊಡೆ ಭಾರತೀಯ ಸಂಸ್ಕಾರ
ಪ್ರೀತಿ ಸ್ನೇಹದ ಬದುಕು ಸಿಂಧೂರ
ನಿನ್ನವರಿಗಾಗಿ ತ್ಯಾಗ ಮಾಡು ಸಮರ
ಗಣೇಶ ಹಬ್ಬ,ಈದ್ ಎಲ್ಲವನ್ನು ಆಚರಿಸಿ ಒಟ್ಟಿಗೆ
ಸಂತಸಕರ
ಶ್ರೀ ಮುತ್ತು.ಯ.ವಡ್ಡರ
ಶಿಕ್ಷಕರು ಬಾಗಲಕೋಟ
Mob-9845568484